ನಾಪೋಕ್ಲು, ಜೂ. ೩: ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಒಬ್ಬರು ತಜ್ಞ ವೈದ್ಯರು, ಇನ್ನೊಬ್ಬರು ಎಂ.ಬಿ.ಬಿ.ಎಸ್. ಡಾಕ್ಟರ್ ಇದ್ದಾರೆ. ಅಲ್ಲದೆ ಇಲ್ಲಿಗೆ ಮೂವರು ತಜ್ಞ ವೈದ್ಯರ ಅವಶ್ಯಕತೆ ಇದ್ದು, ಇವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಅವರು ನಾಪೋಕ್ಲು ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಹೇಳಿದರು. ಆಸ್ಪತ್ರೆಯಲ್ಲಿನ ಸಮಸ್ಯೆ ಬಗ್ಗೆ ಸ್ಥಳೀಯರಾದ ಹ್ಯಾರಿಸ್ ಕೋರಿದಾಗ ಈಗಾಗಲೇ ಇಲ್ಲಿನ ಸಮಸ್ಯೆಗಳ ನಿರ್ವಹಣೆಗೆ ೧೦ ಜನಹೌಸ್ ಏಜೆಂಟ್ಗಳಿದ್ದು, ರಾತ್ರಿ ೫ ಮತ್ತು ಬೆಳಿಗ್ಗೆ ೫ ಜನರು ಕಾರ್ಯನಿರ್ವಹಿಸುವಂತೆ ಸೂಚಿಸಿದ್ದೇನೆ. ಅಲ್ಲದೆ ಆಸ್ಪತ್ರೆಯಲ್ಲಿ ಯಾವುದೇ ಔಷಧಿಗಳ ಕೊರತೆ ಇಲ್ಲ ಎಂದ ಅವರು ಔಷಧಿ ಬೇಕಾದರೆ ವೈದ್ಯರೇ ಆನ್ಲೈನ್ ಮೂಲಕ ಔಷಧಿಯನ್ನು ತರಿಸಿಕೊಳ್ಳುವ ವ್ಯವಸ್ಥೆ ಇದೆ ಎಂದರು. ಈ ಸಂದರ್ಭ ಡಾ. ಜೀವನ್, ನೂತನ ದಂತ ವೈದ್ಯೆ ನೂರ್ ಫಾತಿಮ, ವ್ಯವಸ್ಥಾಪಕ ಮದüÄಸೂದನ್ ಮತ್ತು ಸಿಬ್ಬಂದಿ ವರ್ಗ ಇದ್ದರು.