ಮಡಿಕೇರಿ, ಜೂ. ೩: ಚೆಯ್ಯಂಡಾಣೆ ವಿಭಾಗದಲ್ಲಿ ನಡೆಯುತ್ತಿದ್ದ ಆನೆ ಸೆರೆ ಕಾರ್ಯಾಚರಣೆಯನ್ನು ಇದೀಗ ಸಿದ್ದಾಪುರ ವಿಭಾಗದಲ್ಲಿ ಹಮ್ಮಿ ಕೊಳ್ಳಲಾಗಿದೆ. ಅರಣ್ಯ ಇಲಾಖೆಯ ತಂಡ ಸಾಕಾನೆಗಳ ನೆರವಿನೊಂದಿಗೆ ಪುಂಡಾನೆ ಸೆರೆಗೆ ಮುಂದಾಗಿದೆ. ಸಿದ್ದಾಪುರ, ಅಮ್ಮತ್ತಿ, ಕರಡಿಗೋಡು, ಇಂಜಿಲಗೆರೆ, ಪುಲಿಯೇರಿ, ಗುಹ್ಯ ವಿಭಾಗದಲ್ಲಿ ಈ ಕಾರ್ಯಾಚರಣೆ ನಡೆಯಲಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಎಚ್ಚರದಿಂದಿರುವAತೆ ಇಲಾಖಾ ಧಿಕಾರಿಗಳು ಕೋರಿದ್ದಾರೆ.