ಪೊನ್ನಂಪೇಟೆ, ಜೂ. ೨: ವಿವಿಧ ವೇಷಭೂಷಣ ತೊಟ್ಟು ಸಂಭ್ರಮಿಸಿದ ಗ್ರಾಮವಾಸಿಗಳ ಹರ್ಷೋದ್ಘಾರದೊಂದಿಗೆ ೨ ದಿನಗಳ ಕಾಲ ನಡೆದ ಐತಿಹಾಸಿಕ ಪಾರಣ ಬೋಡ್ ನಮ್ಮೆಗೆ ಬುಧವಾರ ಸಂಜೆ ವರ್ಣರಂಜಿತವಾಗಿ ತೆರೆಬಿತ್ತು. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳ ಕಾಲ ನಡೆಯದಿದ್ದ ಪಾರಣ ಬೇಡು ಹಬ್ಬವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಿದ ಬೇರಳಿನಾಡಿನ ಗ್ರಾಮಸ್ಥರು ದಕ್ಷಿಣ ಕೊಡಗಿನ ಕೊನೆಯ ಬೇಡು ಹಬ್ಬವನ್ನು ಸಂಭ್ರಮದಿAದ ಬೀಳ್ಕೊಟ್ಟರು.
ಕಳೆದ ಮಂಗಳವಾರ ಮಧ್ಯಾಹ್ನದಿಂದಲೇ ಆರಂಭಗೊAಡ ಪಾರಣ ಬೇಡು ನಮ್ಮೆಯನ್ನು ಸಾಕ್ಷೀಕರಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಜನತೆ ಈ ಬಾರಿ ಬೇರಳಿನಾಡಿಗೆ ಬಂದಿದ್ದರು.
‘ಕಳಿ' ತಂಡಗಳೊAದಿಗೆ ೪ ಡೋಲುಗಳನ್ನು ಹೊತ್ತು ಅವುಗಳನ್ನು ಭಾರಿಸುತ್ತ ಪಾರಣ ಹಾಡುಗಳನ್ನು ಹಾಡುತ್ತ ಮನೆ ಮನೆಗೆ
(ಮೊದಲ ಪುಟದಿಂದ) ತೆರಳಿದÀ ವೇಷಧಾರಿಗಳು ಬೇಡು ಹಬ್ಬದ ಮೆರಗನ್ನು ಮತ್ತಷ್ಟು ಹೆಚ್ಚಿಸಿದರು. ಇವರೊಂದಿಗೆ ಕೊಡಗಿನ ಎರವ ಜನಾಂಗದ ಕಲಾವಿದರ ಸಾಂಪ್ರದಾಯಿಕ ಚೀನಿ ಮತ್ತು ದುಡಿ ತಂಡ ಚೀನಿವಾದ್ಯದ ಮೂಲಕ ವೇಷಧಾರಿಗಳನ್ನು ಹಿಂಬಾಲಿಸುತ್ತಿದ್ದ ದೃಶ್ಯ ಪಾರಣ ಬೇಡು ಹಬ್ಬವನ್ನು ಮತ್ತಷ್ಟು ರಂಗೇರಿಸಿತು.
ಬುಧವಾರ ಸಂಜೆ ವೇಳೆಗೆ ಕಂಡAಗಾಲ ಗ್ರಾಮದಲ್ಲಿರುವ ಪಾರಣಮಾನಿಯಲ್ಲಿ ಜಮಾಯಿಸಿದ ಸಾವಿರಾರು ಸಂಖ್ಯೆಯ ಗ್ರಾಮವಾಸಿಗಳು ಕೆಸರಿನಲ್ಲಿ ಮಿಂದೆದ್ದು ಬೇಡು ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು. ಅಂತಿಮವಾಗಿ ಬಿದಿರಿನಿಂದ ತಯಾರಿಸಲಾದ ೨ ಆನೆ ಮತ್ತು ೩ ಕುದುರೆಯಾಕೃತಿಯನ್ನು ಪಾರಣಮಾನಿಯಲ್ಲಿ ಕಡಿಯುವುದರ ಮೂಲಕ ದಕ್ಷಿಣ ಕೊಡಗಿನ ಐತಿಹಾಸಿಕ ಕೊನೆಯ ಬೇಡು ಹಬ್ಬಕ್ಕೆ ಮಂಗಳ ಹಾಡಲಾಯಿತು.