ಸೋಮವಾರಪೇಟೆ,ಜೂ.೩: ೯ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಭಾಗ -೧ ರಲ್ಲಿ ಬಸವಣ್ಣನವರ ವಿಚಾರಧಾರೆಗಳಿಗೆ ಧಕ್ಕೆಯಾಗುವ ಅಂಶಗಳನ್ನು ಸೇರಿಸಿದ್ದು, ಈ ಬಗ್ಗೆ ತುರ್ತಾಗಿ ಕ್ರಮಕೈಗೊಂಡು ಸರಿಪಡಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ತಿಳಿಸಿದ್ದಾರೆ.
೯ನೇ ತರಗತಿಯ ‘ಸಮಾಜ ವಿಜ್ಞಾನ’ ಪಠ್ಯಪುಸ್ತಕ ಭಾಗ-೧ ರಲ್ಲಿ ಬಸವಣ್ಣ ಕುರಿತ ಪಾಠವಿದ್ದು, ಬಸವಣ್ಣನವರು ತನ್ನ ಅಕ್ಕನಿಗೆ ಇಲ್ಲದ ಉಪನಯನ ತನಗೇಕೆ ಎಂದು ಉಪನಯನವನ್ನು ಧಿಕ್ಕರಿಸಿದರು. ಆದರೆ ಪಠ್ಯದಲ್ಲಿ ಬಸವಣ್ಣನವರು ಉಪನಯನ ಸ್ವೀಕರಿಸಿದರು ಎಂದು ಮುದ್ರಿಸಲಾಗಿದೆ. ಇಂತಹ ಅಸಂಬದ್ಧಗಳನ್ನು ಪಠ್ಯದಲ್ಲಿ ಸೇರಿಸುವ ಮೂಲಕ ಅವರ ನಿಜವಾದ ಆದರ್ಶಗಳನ್ನು ಮರೆ ಮಾಚಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ಬಸವಣ್ಣನವರು ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದರು ಎಂದು ಮುದ್ರಿಸಲಾಗಿದೆ. ಆದರೆ ಬಸವಣ್ಣನವರು ಇಷ್ಟಲಿಂಗದ ಪ್ರವರ್ತಕರು; ಇಷ್ಟಲಿಂಗ ಪೂಜಾ ಪದ್ಧತಿಯನ್ನು ಜಗತ್ತಿಗೆ ಅನಾವರಣಗೊಳಿಸಿದ ಮೊದಲಿಗರು. ಹೀಗಿದ್ದರೂ ಹಲವಾರು ತಪ್ಪು ಮಾಹಿಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ. ತಕ್ಷಣ ತಡೆಹಿಡಿದು ಎಲ್ಲಿಯೂ ದೋಷವಾಗದಂತೆ ಪರಿಷ್ಕರಣೆ ಮಾಡಬೇಕು. ತಪ್ಪಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ತಿಳಿಸಿದ್ದಾರೆ.