ಸೋಮವಾರಪೇಟೆ, ಜೂ. ೨: ಜಿಲ್ಲಾ ಅಪ್ಪು ಅಭಿಮಾನಿಗಳ ಬಳಗದ ವತಿಯಿಂದ ಚಿತ್ರನಟ ದಿ.ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ತಾ. ೪ ಮತ್ತು ೫ ರಂದು ರಾಜ್ಯ ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಯನ್ನು ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಬಳಗದ ಜಿಲ್ಲಾಧ್ಯಕ್ಷ ಎಸ್.ವಿ. ರಾಜಶೇಖರ್ ಹೇಳಿದರು.

ಮೊದಲ ಬಹುಮಾನ ೧ಲಕ್ಷ ರೂ.ನಗದು, ಎರಡನೇ ಬಹುಮಾನ ೫೦ ಸಾವಿರ ರೂ. ಮೂರನೇ ಬಹುಮಾನ ೨೫ ಸಾವಿರ ರೂ. ನಗದಿನೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಹೇಳಿದರು.

ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ನೋಂದಾಯಿತ ತಂಡಗಳು, ಜಿಲ್ಲಾ ಮಟ್ಟದ ತಂಡಗಳು ಹಾಗೂ ಅಂತರ್ ಜಿಲ್ಲಾ ಮಟ್ಟದ ತಂಡಗಳು ಭಾಗವಹಿಸಲು ಮಾತ್ರ ಅವಕಾಶ ವಿರುತ್ತದೆ. ನಾಲ್ಕು ಗುಂಪುಗಳಲ್ಲಿ ಪಂದ್ಯಾಟ ನಡೆಯಲಿದೆ. ಸರಣಿ ಪುರುಷೋತ್ತಮ ವಿಜೇತರಿಗೆ ಎಲ್‌ಇಡಿ ಕಲರ್ ಟಿವಿ, ಉತ್ತಮ ಬ್ಯಾಟ್ಸ್ಮೆನ್, ಬೌಲರ್, ಫೀಲ್ಡರ್, ಕೀಪರ್, ಕ್ಯಾಚರ್‌ಗÀಳಿಗೆ ಸ್ಪೋರ್ಟ್ಸ್ ವಾಚ್ ನೀಡಲಾಗುವುದು. ೬ ಓವರ್‌ಗಳಿಗೆ ಪಂದ್ಯಾಟ ಸೀಮಿತವಾಗಿರುತ್ತದೆ.

ತಾ. ೪ರಂದು ಬೆಳಿಗ್ಗೆ ೯ ಗಂಟೆಗೆ ನಡೆಯುವ ಉದ್ಘಾಟನಾ ನೀಡಲಾಗುವುದು ಎಂದು ಹೇಳಿದರು.

ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ನೋಂದಾಯಿತ ತಂಡಗಳು, ಜಿಲ್ಲಾ ಮಟ್ಟದ ತಂಡಗಳು ಹಾಗೂ ಅಂತರ್ ಜಿಲ್ಲಾ ಮಟ್ಟದ ತಂಡಗಳು ಭಾಗವಹಿಸಲು ಮಾತ್ರ ಅವಕಾಶ ವಿರುತ್ತದೆ. ನಾಲ್ಕು ಗುಂಪುಗಳಲ್ಲಿ ಪಂದ್ಯಾಟ ನಡೆಯಲಿದೆ. ಸರಣಿ ಪುರುಷೋತ್ತಮ ವಿಜೇತರಿಗೆ ಎಲ್‌ಇಡಿ ಕಲರ್ ಟಿವಿ, ಉತ್ತಮ ಬ್ಯಾಟ್ಸ್ಮೆನ್, ಬೌಲರ್, ಫೀಲ್ಡರ್, ಕೀಪರ್, ಕ್ಯಾಚರ್‌ಗÀಳಿಗೆ ಸ್ಪೋರ್ಟ್ಸ್ ವಾಚ್ ನೀಡಲಾಗುವುದು. ೬ ಓವರ್‌ಗಳಿಗೆ ಪಂದ್ಯಾಟ ಸೀಮಿತವಾಗಿರುತ್ತದೆ.

ತಾ. ೪ರಂದು ಬೆಳಿಗ್ಗೆ ೯ ಗಂಟೆಗೆ ನಡೆಯುವ ಉದ್ಘಾಟನಾ ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು, ಚಿತ್ರನಟಿ ತಾರಾ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಮೊ.೮೬೧೮೭೩೯೧೭೯, ೯೧೬೪೧೭೩೨೨೩ ಸಂಪರ್ಕಿಸಬಹುದಾಗಿದೆ.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಖಚಾಂಚಿ ಹೇಮಂತ್, ಪದಾಧಿಕಾರಿ ಗಳಾದ ವಿನೋದ್ ಇದ್ದರು.