ಮಡಿಕೇರಿ, ಜೂ. ೩ : ನಗರದ ಗಾಲ್ಫ್ ಮೈದಾನದ ಬಳಿ ನಿರ್ಮಾಣವಾಗುತ್ತಿರುವ ‘ಕೊಡವ ಹೆರಿಟೇಜ್ (ಪಾರಂಪರಿಕ) ಕೇಂದ್ರಕ್ಕೆ ಶಾಸಕÀ ಎಂ.ಪಿ. ಅಪ್ಪಚ್ಚುರಂಜನ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಟಿ.ವೆಂಕಟೇಶ್, ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ನ ಯೋಜನಾ ವ್ಯವಸ್ಥಾಪಕ ಮನೋಜ್ ಕುಮಾರ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಯತೀಶ್ ಉಳ್ಳಾಲ್ ಇತರರು ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು.

ಕೊಡವ ಹೆರಿಟೇಜ್ ಕೇಂದ್ರದಲ್ಲಿ ಆಗಬೇಕಿರುವ ಬಾಕಿ ಕಾಮಗಾರಿ ಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಶಾಸಕÀ ಎಂ.ಪಿ.ಅಪ್ಪಚ್ಚು ರಂಜನ್ ಸೂಚಿಸಿದರು.

ಸರ್ಕಾರದಿಂದ ೩.೩೩ ಕೋಟಿ ರೂ.ನಲ್ಲಿ ಈಗಾಗಲೇ ೨.೮೬ ಕೋಟಿ ರೂ. ಬಿಡುಗಡೆಯಾಗಿದ್ದು, ಬಾಕಿ ೪೭ ಲಕ್ಷ ಬಿಡುಗಡೆಗೆ ಬಾಕಿ ಇದೆ. ಕೊಡವ ಹೆರಿಟೇಜ್ ಕೇಂದ್ರದ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಚಿವರನ್ನು ಜಿಲ್ಲೆಗೆ ಆಹ್ವಾನಿಸಲಾಗುವುದು.

ಪೂರ್ಣ ಪ್ರಮಾಣದ ನಕ್ಷೆಗೆ ಅನುಗುಣವಾಗಿ ಕೊಡವ ಪಾರಂಪರಿಕ ಕೇಂದ್ರ ನಿರ್ಮಾಣದ ಕಾಮಗಾರಿ ಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಶಾಸಕರು ಹೇಳಿದರು.

ಕೊಡವ ಹೆರಿಟೇಜ್ ಕೇಂದ್ರದಲ್ಲಿ ವಾಟರ್ ಬಾಡಿ ಮತ್ತು ವ್ಯೂ ಪಾಯಿಂಟ್, ಓಪನ್ ಏರ್ ಥಿಯೇಟರ್, ಅಪ್ಪರ್ ಮತ್ತು ಲೋಯರ್ ಡಿಸ್‌ಪ್ಲೇ, ಹೆರಿಟೇಜ್ ಕೇಂದ್ರಕ್ಕೆ ತೆರಳಲು ರಸ್ತೆ, ತಡೆಗೋಡೆ ಮತ್ತು ಪ್ರವೇಶ ದ್ವಾರ ನಿರ್ಮಾಣ, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವುದು ಮತ್ತಿತರ ಕಾಮಗಾರಿ ಬಾಕಿ ಇದ್ದು, ಕನಿಷ್ಟ ಇನ್ನೂ ೨.೫೦ ಕೋಟಿ ರೂ. ಬೇಕಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜು ತಿಳಿಸಿದರು.

ಕೊಡವ ಹೆರಿಟೇಜ್ ಕೇಂದ್ರ ಕಾಮಗಾರಿ ಸಂಬAಧ ಪ್ರವಾಸೋದ್ಯಮ ಸಚಿವರ ಗಮನಕ್ಕೆ ತರಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಟಿ.ವೆಂಕಟೇಶ್ ಹೇಳಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿ ಆಗಬೇಕಿರುವ ಕಾಮಗಾರಿ ಸಂಬAಧ ಪ್ರವಾಸೋದ್ಯಮ ನಿರ್ದೇಶಕರ ಗಮನಕ್ಕೆ ತಂದರು.

ಲೋಕೋಪಯೋಗಿ ಇಲಾಖೆಯ ಎಇಇ ಶಿವರಾಮ್, ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್, ಇಂಜಿನಿಯರ್ ಚೆನ್ನಕೇಶವ, ಸತೀಶ್ ಇತರರು ಇದ್ದರು.