ವೀರಾಜಪೇಟೆ, ಜೂ. ೨: ವೀರಾಜಪೇಟೆ ಪಟ್ಟಣ ಪಂಚಾಯಿತಿ ಯಲ್ಲಿ ಇತ್ತೀಚೆಗೆ ನಿಗದಿಯಾಗಿದ್ದ ಸಾಮಾನ್ಯ ಸಭೆಗೆ ಆಡಳಿತಪಕ್ಷ ಬಿಜೆಪಿಯ ಸದಸ್ಯರು ಹಾಗೂ ಅಧ್ಯಕ್ಷರ ಗೈರು ಹಾಜರಾತಿ ನಡುವೆ ನಡೆಯುತ್ತಿದ್ದ ಸಭೆಯನ್ನು ಮುಖ್ಯಾಧಿಕಾರಿ ಮೊಟಕುಗೊಳಿ ಸಿದ್ದನ್ನು ವಿರೋಧಿಸಿ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತ ವೈಫಲ್ಯವನ್ನು ಖಂಡಿಸಿ ಇಂದು ವೀರಾಜಪೇಟೆ ನಗರ ಕಾಂಗ್ರೆಸ್‌ನಿAದ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಮೈದಾನದಿಂದ ಪಟ್ಟಣ ಪಂಚಾಯಿತಿ ಕಚೆೆÃರಿಯ ಮುಂಭಾಗಕ್ಕೆ ಧಾವಿಸಿದ ಪ್ರತಿಭಟನಾಕಾರರು ಸಭೆ ನಡೆಸದ ಮುಖ್ಯಾಧಿಕಾರಿಯ ವಿರುದ್ಧ, ಸಭೆಗೆ ಆಹ್ವಾನ ಕಳಿಸಿ ಹಾಜರಾಗದ ಅಧ್ಯಕ್ಷೆಯ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಪ.ಪಂ. ಸದಸ್ಯ ಮೊಹಮ್ಮದ್ ರಾಫಿ ಮಾತನಾಡಿ, ಪ.ಪಂ. ವಾರ್ಡುಗಳಲ್ಲಿ ಸರಿಯಾದ ರೀತಿಯಲ್ಲಿ ಕೆಲಸಗಳು ನಡೆಯುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿತವಾಗಿದೆ. ಸಮಸ್ಯೆಗಳ ಬಗ್ಗೆ ಮಾಸಿಕ ಸಭೆಯನ್ನು ನಾಲ್ಕು ತಿಂಗಳಿಗೆ ನಡೆಸುತ್ತಾರೆ. ಅಲ್ಲಿ ಸಮಸ್ಯೆಗಳ ಬಗ್ಗೆ ಮಾತಾಡೋಣ ವೆಂದರೆ ಸಭೆಗೆ ಯಾರೂ ಬರುವುದಿಲ್ಲ. ನಾವೇ ಸಭೆ ನಡೆಸೋಣವೆಂದರೆ ಮುಖ್ಯಾಧಿಕಾರಿ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ದೂರಿದರು.

ಕಾಂಗ್ರೆಸ್ ಕಾನೂನು ಘಟಕದ ಸಲಹೆಗಾರರಾದ ವಕೀಲ ಡಿ.ಸಿ. ಧ್ರುವ ಮಾತನಾಡಿ, ವೀರಾಜಪೇಟೆಯಲ್ಲಿ ಬಿಜೆಪಿ ಪಕ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ರಸ್ತೆಗಳು ಗುಂಡಿಮಯವಾಗಿವೆ, ಬೀದಿದೀಪ ಇಲ್ಲ, ಚರಂಡಿ ಸ್ಲಾö್ಯಬ್‌ಗಳು ಬಾಯಿ ತೆರೆದುಕೊಂಡು ಜನರು ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಜನರಿಗೆ ಸ್ಪಂದಿಸಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಲಿ, ಕಾಂಗ್ರೆಸ್ ಪಕ್ಷ ಜನರಿಗೆ ಬೇಕಾದ ಮೂಲಭೂತ ಸೌಲಭ್ಯ ನೀಡಲು ತಯಾರಿದೆ ಎಂದರು.

ಕಾAಗ್ರೆಸ್ ಪ್ರಮುಖರಾದ ಆರ್.ಕೆ. ಅಬ್ದುಲ್ ಸಲಾಂ ಮಾತನಾಡಿ, ವೀರಾಜಪೇಟೆ ಪಟ್ಟಣದ ಗಡಿಗಳಲ್ಲಿ ಕಂದಾಯ ಭೂಮಿಯನ್ನು ಮುಂದೆ ಇಟ್ಟುಕೊಂಡು ಮಾಡುತ್ತಿರುವ ಅಕ್ರಮಗಳನ್ನು ಮೊದಲು ನಿಲ್ಲಿಸಬೇಕು. ಪ.ಪಂ. ದಲ್ಲಾಳಿಗಳ ಕಚೇರಿಯಾಗಿದೆ. ಇದಕ್ಕೆ ಬಿಜೆಪಿಯೇ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.

ಜೆಡಿಎಸ್ ಕಾರ್ಯಾಧ್ಯಕ್ಷ ಮತೀನ್ ಮಾತನಾಡಿ, ನಾವು ವಿರೋಧ ಪಕ್ಷದವರಾಗಿ ಜನರ ಪ್ರಶ್ನೆಗಳಿಗೆ ಸಾಮಾನ್ಯ ಸಭೆಯಲ್ಲಿ ಉತ್ತರ ಪಡೆಯಬಹುದು. ನಾವು ಸಭೆಗೆ ಬಂದರೆ ಮಾತ್ರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸಾಧ್ಯ. ಜನರಿಗೆ ಗ್ರಾ.ಪಂ. ಮತ್ತು ಪ.ಪಂ.ನಲ್ಲೂ ಪರವಾನಗಿ ಸಿಗುತ್ತಿಲ್ಲ. ಬಿಜೆಪಿಗೆ ಅಧಿಕಾರ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಲಿ ಎಂದು ಹೇಳಿದರು.ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ವಿಪರೀತ ಮಳೆಯಿಂದ ಹಲವು ಮನೆಗಳು ಧರೆಗುಳಿದರೂ ಇಲ್ಲಿಯತನಕ ಯಾವುದೇ ಶಾಶ್ವತ ಪರಿಹಾರ ಜನರಿಗೆ ದೊರಕಿಲ್ಲ. ಪ.ಪಂ. ನಗರಕ್ಕೆ ಸಂಬAಧಿಸಿದ ಯಾವ ಕೆಲಸಗಳನ್ನೂ ಸರಿಯಾಗಿ ಮಾಡುತ್ತಿಲ್ಲ. ಕಾವೇರಿ ತಪ್ಪಲಿನಲ್ಲಿದ್ದರೂ ನಗರಕ್ಕೆ ಸರಿಯಾಗಿ ನೀರು ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಮಾತನಾಡಿ, ವೀರಾಜಪೇಟೆಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದ ಕಾರಣ ಇಲ್ಲಿನ ಪ್ರವಾಸೋದÀ್ಯಮ ಕಳೆಗುಂದಿದೆ. ಈ ದುರವಸ್ಥೆ ಸರಿಹೋಗದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದರು.

ಬಳಿಕ ಪ.ಪಂ. ಮುಖ್ಯಾಧಿಕಾರಿಯವರಿಗೆ ಈ ಹಿಂದೆ ನಿಲ್ಲಿಸಿದ್ದ ಮಾಸಿಕ ಸಭೆಯನ್ನು ಪುನಃ ಕರೆಯುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಬಳಿಕ ತಾಲೂಕು ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಅಲ್ಲಿ ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೇದಾರ್ ಪೊನ್ನು ಅವರಿಗೆ ಮನವಿ ಸಲ್ಲಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್, ಪ.ಪಂ. ಸದಸ್ಯ ರಾಜೇಶ್ ಪದ್ಮನಾಭ, ಪ.ಪಂ. ಸದಸ್ಯ ರಜನಿಕಾಂತ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.