ಮಡಿಕೇರಿ, ಜೂ. ೩ : ಕುಶಾಲನಗರ ತಾಲೂಕು, ಮುಳ್ಳುಸೋಗೆ ಗ್ರಾಮದ ಪೈಸಾರಿ ಜಾಗ ಸರ್ವೆ ನಂ.೫೨ರ ಜಾಗದಲ್ಲಿ ನ್ಯಾಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ಅಡಚಣೆಯಾಗಿರುವ ತೇಗ ಮತ್ತು ಇತರ ಜಾತಿಯ ಮರಗಳನ್ನು ಅರಣ್ಯ ಇಲಾಖಾ ವತಿಯಿಂದ ತೆರವುಗೊಳಿಸಲು ಕೋರಲಾಗಿದೆ.
ಸಾರ್ವಜನಿಕರು ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಲಿಖಿತ ಮೂಲಕ ತಾ. ೧೦ ರೊಳಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇವರಿಗೆ ಸಲ್ಲಿಸಲು ತಿಳಿಸಿದೆ. ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.