ಮಡಿಕೇರಿ, ಜೂ. ೧: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು ೨೦೧೬-೧೭ನೇ ಸಾಲಿನಿಂದ ಜಾರಿಯಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಕೃತಿ ವಿಕೋಪಗಳ ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯಡಿಯಲ್ಲಿ ರೈತರ ವಿಮಾ ಕಂತನ್ನು ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳಿಗೆ ಮುಂಗಾರು ಹಂಗಾಮಿಗೆ ಶೇ. ೨ ಎಂದು ಪರಿಗಣಿಸಲಾಗಿದೆ. ಮುಖ್ಯ ಬೆಳೆಗಳಿಗೆ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಳವಡಿಸಲಾಗುವುದು. ಈ ಯೋಜನೆಯು ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದ್ದು, ವಿಮಾ ಮೊತ್ತವು ಒಂದೇ ಆಗಿರುತ್ತದೆ. ಬಿತ್ತನೆ ಅಥವಾ ನಾಟಿ ಕಾಲಕ್ಕೆ ಆಗುವ ನಷ್ಟ, ಬೆಳೆವಣಿಗೆ ಹಂತದಲ್ಲಿ ಆಗುವ ನಷ್ಟ ಹಾಗೂ ಕಟಾವಿನ ನಂತರದ ನಷ್ಟವನ್ನು ಸಹ ಪರಿಗಣಿಸಲಾಗುವುದು.

ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ, ಐಸಿಐಸಿ ಲಂಬಾರ್ಡ್ (IಅIಅ ಐombಚಿಡಿಜ (ಃhಚಿಡಿಚಿಣhi ಂxಚಿ) ವಿಮಾ ಕಂಪೆನಿಯನ್ನು ಬೆಳೆ ವಿಮೆ ಕಾರ್ಯಕ್ಕೆ ಆಯ್ಕೆ ಮಾಡಲಾಗಿದೆ. ವಿಮಾ ಅರ್ಜಿಗಳು ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ಲಭ್ಯವಿದ್ದು, ಜುಲೈ ೩೧ ರೊಳಗೆ ಮಳೆಯಾಶ್ರಿತ ಮುಸುಕಿನ ಜೋಳ ಹಾಗೂ ಆಗಸ್ಟ್ ೧೬ ರೊಳಗೆ ಭತ್ತ ಬೆಳೆಗಳಿಗೆ ಸದರಿ ಯೋಜನೆಯಡಿ ಅರ್ಜಿಯನ್ನು ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದಾಗಿದೆ.

ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರ್ ಭತ್ತ (ನೀರಾವರಿ) ಬೆಳೆಗೆ ರೂ. ೮೬ ಸಾವಿರ, ಭತ್ತ (ಮಳೆಯಾಶ್ರಿತ) ಬೆಳೆಗೆ ರೂ. ೫೫ ಸಾವಿರ ಹಾಗೂ ಮಳೆಯಾಶ್ರಿತ ಮುಸುಕಿನ ಜೋಳ ಬೆಳೆಗೆ ರೂ. ೫೦ ಸಾವಿರ ವಿಮಾ ಮೊತ್ತವಾಗಿರುತ್ತದೆ. ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರ್ ಭತ್ತ (ನೀರಾವರಿ) ಬೆಳೆಗೆ ರೂ. ೬೮೮, ಭತ್ತ (ಮಳೆಯಾಶ್ರಿತ) ಬೆಳೆಗೆ ರೂ. ೪೪೦ ಹಾಗೂ ಮಳೆಯಾಶ್ರಿತ ಮುಸುಕಿನ ಜೋಳ ಬೆಳೆಗೆ ರೂ. ೪೦೦ ಗಳನ್ನು ರೈತರು ವಿಮಾ ಕಂತನ್ನು (ಪ್ರೀಮಿಯಂ ಮೊತ್ತ) ಪಾವತಿಸಬೇಕಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ IಅIಅ ಐombಚಿಡಿಜ (ಃhಚಿಡಿಚಿಣhi ಂxಚಿ) ವಿಮಾ ಕಂಪೆನಿಯ ಜಿಲ್ಲಾ ಪ್ರತಿನಿಧಿಗಳಾದ ಕಿರಣ್ ಮೊ. ೭೩೦೪೫೬೦೦೨೪ ಹಾಗೂ ಮಡಿಕೇರಿ, ಸೋಮವಾಪೇಟೆ ಮತ್ತು ವೀರಾಜಪೇಟೆ ತಾಲೂಕಿನ ಪ್ರತಿನಿಧಿಗಳಾದ ಬೊಳ್ಳಜಿರ ಅಯ್ಯಪ್ಪ (ಮೊ: ೯೮೮೦೭೭೮೦೪೭) ಇವರನ್ನು ಸಂಪರ್ಕಿಸಬಹುದು.

ಈ ಯೋಜನೆಯಲ್ಲಿ ರೈತರು ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಸಂಖ್ಯೆಯನ್ನು ನೀಡಿ ನೋಂದಾಯಿಸಿಕೊಳ್ಳಬೇಕು. ಯೋಜನೆಯ ಮಾಹಿತಿಯನ್ನು ಸಂರಕ್ಷಣೆ ತಂತ್ರಾAಶದಲ್ಲಿ ಪಡೆಯಬಹುದು. hಣಣಠಿ://ತಿತಿತಿ.sಚಿmಡಿಚಿಞshಚಿಟಿe.ಞಚಿಡಿಟಿಚಿಣಚಿಞಚಿ.gov.iಟಿ/ ಹೆಚ್ಚಿನ ಮಾಹಿತಿಗೆ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ ಹಾಗೂ ಈ ಯೋಜನೆಯನ್ನು ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ರೈತರು ಸದುಪಯೋಗಪಡಿಸಿಕೊಳ್ಳಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಕೋರಿದ್ದಾರೆ.