ಮಡಿಕೇರಿ, ಜೂ.೧ : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಮಡಿಕೇರಿ ತಾಲೂಕು ವ್ಯಾಪ್ತಿಯ ಮೇಕೇರಿ, ಕಗ್ಗೋಡ್ಲು, ಬಿಳಿಗೇರಿ ವಲಯಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಎಂ.ಡಿ.ಸುರೇಶ್ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಲಯಾಧ್ಯಕ್ಷರಾಗಿ ಧನುರೈ ಕಗ್ಗೋಡ್ಲು, ಉಪಾಧ್ಯಕ್ಷರಾಗಿ ಜ್ಯೋತಿ ಕುಮಾರ್ ಬಿಳಿಗೇರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೀಳ, ಸಲಹೆಗಾರರಾಗಿ ಡಾಲು ಮೇಕೇರಿ ಹಾಗೂ ರಮೇಶ್ ರೈ ಬಿಳಿಗೇರಿ ಆಯ್ಕೆಯಾಗಿದ್ದಾರೆ.
ಮೇಕೇರಿಯ ಖಾಸಗಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ, ಉಪಾಧ್ಯಕ್ಷ ಬಿ.ವೈ.ಆನಂದ ರಘು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ಖಜಾಂಚಿ ಪ್ರಭು ರೈ, ತಾಲೂಕು ಸಂಚಾಲಕ ಪ್ರಸಾದ್ ಬಿಳಿಗೇರಿ, ಉಪಾಧ್ಯಕ್ಷೆ ವಿಜಯಲಕ್ಷಿö್ಮ ರವಿ ಶೆಟ್ಟಿ, ನಿರ್ದೇಶಕಿ ಲೀಲಾ ಶೇಷಮ್ಮ, ತಾಲೂಕು ಸಹ ಕಾರ್ಯದರ್ಶಿ ಶೋಭಾ ಮುತ್ತಪ್ಪ, ಮಡಿಕೇರಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ರೈ, ಮಡಿಕೇರಿ ತಾಲೂಕು ಉಪಾಧ್ಯಕ್ಷರಾದ ಸುರೇಶ್, ಅನುಸೂಯ, ನಿರ್ದೇಶಕಿ ಕವಿತ, ಗ್ರಾ.ಪಂ ಸದಸ್ಯೆ ಸುಶೀಲ ಮಧು ಮತ್ತಿತರರು ಉಪಸ್ಥಿತರಿದ್ದರು.