ರಾಮ ಗರ್ಭಗುಡಿಗೆ ಶಿಲಾನ್ಯಾಸ

ಅಯೋಧ್ಯೆ, ಜೂ. ೧: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಬುಧವಾರ ಶ್ರೀ ರಾಮನ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿತು. ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್, ಕಾರ್ಯದರ್ಶಿ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದ ಗಿರಿಮಹಾರಾಜ್, ಸದಸ್ಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು, ಉ.ಪ್ರ, ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಹಾಗೂ ಎಲ್ ಆಂಡ್ ಟಿ ಕಂಪೆನಿಯ ಪ್ರಮುಖರು, ನೃಪೇಂದ್ರ ಮಿಶ್ರಾ, ವಿಹಿಂಪದ ಕರ್ನಾಟಕದ ಪ್ರಮುಖರಲ್ಲಿ ಒಬ್ಬರಾದ ಗೋಪಾಲ್ ಜಿ. ಇತರರು ಪಾಲ್ಗೊಂಡಿದ್ದರು. ಇದೇ ಸಂದರ್ಭ ಮಂದಿರ ನಿರ್ಮಾಣದ ಆಂದೋಲನ ಮತ್ತು ನ್ಯಾಯಾಲಯದ ತೀರ್ಪು ಮತ್ತು ಆ ಬಳಿಕ ಈ ಹಂತದವರೆಗಿನ ಎಲ್ಲ ಬೆಳವಣಿಗೆಗಳ ಸಚಿತ್ರ ವರದಿಯನ್ನೊಳಗೊಂಡ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂಚಿಕೆಯಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ನಿರ್ವಹಿಸಿದ ಪಾತ್ರವನ್ನೂ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಶಿಲಾನ್ಯಾಸ ಸಮಾರಂಭದಲ್ಲಿ ಪೇಜಾವರ ಶ್ರೀಗಳು ವಿಷ್ಣು ಸಹಸ್ರನಾಮ ಪಾರಾಯಣಗೈದರು. ಉಡುಪಿ ಕೃಷ್ಣನ ಪ್ರಸಾದ, ಸಾಲಿಗ್ರಾಮ ಶಿಲೆಗಳು ಮತ್ತು ನವರತ್ನ, ಸುವರ್ಣ ನಾಣ್ಯಗಳನ್ನು ಭೂಮಿಗೆ ಅರ್ಪಿಸಿದರು. ಅಲ್ಲದೇ ಶ್ರೀಗಳು ಯೋಗಿ ಜಿ ಮತ್ತು ಕೇಶವ ಪ್ರಸಾದ್ ಮೌರ್ಯರನ್ನು ಸನ್ಮಾನಿಸಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾಗೆ ಸಮನ್ಸ್

ನವದೆಹಲಿ, ಜೂ. ೧: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ನೋಟೀಸ್ ವಿಚಾರಕ್ಕೆ ಸಂಬAಧಿಸಿದAತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷ, ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದೆ. ತಾ. ೮ ರಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬAಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಿದೆ. ಇದೇ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರು, ಪ್ರಕರಣಕ್ಕೆ ಸಂಬAಧಿಸಿದAತೆ ಸೋನಿಯಾ ಗಾಂಧಿ ಅವರು ಮರೆಮಾಚಲು ಏನೂ ಇಲ್ಲ. ಹೀಗಾಗಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ನಿರ್ಧರಿಸಲಾಗಿದೆ ಎಂದು ಹೇಳಿದರು. ನಾವು ಬಿಜೆಪಿ ಸೇಡಿನ ರಾಜಕೀಯ ಮತ್ತು ಜಾರಿ ನಿರ್ದೇಶನಾಲಯದ ಯಾವುದೇ ಸಮನ್ಸ್ಗೆ ಹೆದರುವುದಿಲ್ಲ. ಸೋನಿಯಾ ಗಾಂಧಿ ಅವರು ತಾ. ೮ ರಂದು ವಿಚಾರಣೆಗೆ ಹಾಜರಾಗಲಿದ್ದು, ರಾಹುಲ್ ಗಾಂಧಿ ಅವರಿಗೂ ಸಮನ್ಸ್ ನೀಡಲಾಗಿದೆ ಮತ್ತು ಅವರು ದೇಶದಲ್ಲಿ ಇಲ್ಲದ ಕಾರಣ ವಿಚಾರಣೆ ದಿನಾಂಕವನ್ನು ಜೂನ್ ೫ ರ ನಂತರ ಮುಂದೂಡುವAತೆ ತನಿಖಾ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ನಾಯಕತ್ವವು ನಿರ್ಭೀತವಾಗಿದೆ ಮತ್ತು ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ಸಿದ್ಧವಾಗಿದೆ ಎಂದು ಹೇಳಿದರು. ಇಂತಹ ನಕಲಿ ಮತ್ತು ಕಪೋಲಕಲ್ಪಿತ ಪ್ರಕರಣಗಳನ್ನು ದಾಖಲಿಸುವ ಮೂಲಕ ತಮ್ಮ ಹೇಡಿತನದ ಪಿತೂರಿಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬುದನ್ನು ಮೋದಿ ಸರ್ಕಾರ ಅರಿಯಬೇಕು. ಸ್ವಾತಂತ್ರö್ಯ ಚಳವಳಿಯ ಧ್ವನಿಯಾಗಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ತಡೆಯಲು ಚುನಾವಣಾ ಆಯೋಗಕ್ಕೆ ಸಾಧ್ಯವಾಗುವುದಿಲ್ಲ ಅಥವಾ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಹೆದರಿಸಲು ಸಾಧ್ಯವಿಲ್ಲ. ನಾವು ಅಂತಹ ತಂತ್ರಗಳಿಗೆ ಹೆದರುವುದಿಲ್ಲ, ನಾವು ತಲೆಬಾಗುವುದಿಲ್ಲ, ಆದರೆ ನಾವು ಕಾನೂನು, ಸಾಮಾಜಿಕ ಮತ್ತು ರಾಜಕೀಯವಾಗಿ ಕಠಿಣ ಹೋರಾಟ ಮಾಡುತ್ತೇವೆ ಎಂದು ಸಿಂಘ್ವಿ ಹೇಳಿದರು.

ಸತ್ಯೇಂದ್ರ ಜೈನ್‌ಗೆ ಪದ್ಮವಿಭೂಷಣಕ್ಕೆ ಆಗ್ರಹ

ನವದೆಹಲಿ, ಜೂ. ೧: ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೊಹಲ್ಲಾ ಕ್ಲಿನಿಕ್ ಮಾದರಿಯನ್ನು ನೀಡಿದ್ದಕ್ಕಾಗಿ ಜಾರಿ ನಿರ್ದೇಶನಾಲಯದಿಂದ ಬಂದಿತರಾಗಿರುವ ಸತ್ಯೇಂದ್ರ ಜೈನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಕೇಜ್ರಿವಾಲ್ ಅವರು ಸತ್ಯೇಂದ್ರ ಜೈನ್ ಅವರನ್ನು ಕಠಿಣ ಪ್ರಾಮಾಣಿಕ ಮತ್ತು ದೇಶಭಕ್ತ ವ್ಯಕ್ತಿ ಎಂದು ಸಮರ್ಥಿಸಿಕೊಂಡರು. ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿದ್ದಾರೆ. ಇಡಿ ತನಿಖೆಯ ನಂತರ ಸಚಿವರು ಹೊರಬರುತ್ತಾರೆ ಎಂದು ಆಶಿಸಿದರು. ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪ್ರಪಂಚದ ಜನರು ಭೇಟಿ ನೀಡುತ್ತಿರುವ ಮೊಹಲ್ಲಾ ಕ್ಲಿನಿಕ್‌ನ ಮಾದರಿಯನ್ನು ನೀಡಿದ್ದರಿಂದ ದೇಶವು ಅವರ ಬಗ್ಗೆ ಹೆಮ್ಮೆಪಡಬೇಕು. ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಆರೋಗ್ಯ ಮಾದರಿಯನ್ನು ನೀಡಿದರು ಎಂದರು. ಸತ್ಯೇಂದ್ರ ಜೈನ್‌ಗೆ ಪದ್ಮಭೂಷಣ ಅಥವಾ ಪದ್ಮವಿಭೂಷಣದಂತಹ ಉನ್ನತ ಪ್ರಶಸ್ತಿಗಳನ್ನು ನೀಡಬೇಕು ಎಂದು ನಾನು ಭಾವಿಸುತ್ತೇನೆ ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದರು. ಸತ್ಯೇಂದ್ರ ಜೈನ್‌ಗೆ ಸಿಬಿಐ ಕ್ಲೀನ್ ಚಿಟ್ ನೀಡಿರುವುದನ್ನು ಗಮನಿಸಿರುವ ದೆಹಲಿ ಸಿಎಂ, ಈಗ ಇಡಿ ತನಿಖೆ ನಡೆಸಬಹುದು. ನಂತರ ಸಚಿವರು ಕ್ಲೀನ್ ಆಗಿ ಹೊರಬರುತ್ತಾರೆ. ಜೈನ್ ಅವರು ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಆರೋಗ್ಯ, ವಿದ್ಯುತ್ ಮತ್ತು ಗೃಹ ಸೇರಿದಂತೆ ವಿವಿಧ ಖಾತೆಗಳನ್ನು ಹೊಂದಿದ್ದಾರೆ. ಮನಿ ಲಾಂಡರಿAಗ್ ಪ್ರಕರಣದಲ್ಲಿ ಜೈನ್ ಅವರನ್ನು ಕೋರ್ಟ್ ಮಂಗಳೂರು ಜೂನ್ ೯ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಕಳುಹಿಸಲಾಗಿದೆ.

೭ ಬಾರಿ ಗುಂಡೇಟು ತಿಂದಿದ್ದ ಅಧಿಕಾರಿ ಯುಪಿಎಸ್‌ಸಿಯಲ್ಲಿ ಪಾಸ್!

ಲಖನೌ, ಜೂ. ೧: ಭ್ರಷ್ಟಾಚಾರ ಪ್ರಕರಣವನ್ನು ಬಹಿರಂಗಪಡಿಸಿದ್ದಕ್ಕಾಗಿ ಏಳು ಬಾರಿ ಗುಂಡೇಟು ಎದುರಿಸಿದ ಉತ್ತರ ಪ್ರದೇಶ ಅಧಿಕಾರಿಯೊಬ್ಬರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ರಿಂಕೂ ಸಿಂಗ್ ರಾಹೀ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ೬೮೩ನೇ ಶ್ರೇಯಾಂಕ ಪಡೆದಿದ್ದಾರೆ. ಕೊನೆಯ ಬಾರಿ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು ಅವರಿಗೆ ಖುಷಿ ತಂದಿದೆ. ರಿಂಕೂ ಸಿಂಗ್ ಉತ್ತರ ಪ್ರದೇಶದ ಹಾಪುರ್‌ನ ಪ್ರಾಂತೀಯ ನಾಗರಿಕ ಸೇವಾ ಅಧಿಕಾರಿ. ೨೦೦೮ರಲ್ಲಿ ಮುಜಾಫರ್‌ನಗರದಲ್ಲಿ ನಡೆದ ಸ್ಕಾಲರ್‌ಶಿಪ್‌ನಲ್ಲಿ ೮೩ ಕೋಟಿ ಹಗರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ರಾಜ್ಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ಸ್ಕಾಲರ್ ಶಿಪ್ ಹಗರಣದಲ್ಲಿ ಎಂಟು ಜನರ ಮೇಲೆ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರಿಗೆ ೧೦ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಹಗರಣ ಬಹಿರಂಗವಾದ ಕೂಡಲೇ, ರಿಂಕೂ ರಹೀ ಮೇಲೆ ಏಳು ಬಾರಿ ಗುಂಡು ಹಾರಿಸಲಾಯಿತು. ಅವರ ಮುಖಕ್ಕೂ ಗುಂಡು ಹಾರಿಸಲಾಯಿತು. ಇದರಿಂದ ಅವರ ಮುಖವು ವಿರೂಪಗೊಂಡಿದ್ದು, ದೃಷ್ಟಿ ಮತ್ತು ಶ್ರವಣ ಕಳೆದುಕೊಂಡಿದ್ದಾರೆ. ದಾಳಿಯಲ್ಲಿ ನನ್ನ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡೆ ಎಂದು ಅವರು ಹೇಳಿದ್ದಾರೆ.

ಪದಕ ಗೆದ್ದ ಮಹಿಳಾ ಬಾಕ್ಸರ್‌ಗಳನ್ನು ಭೇಟಿ ಮಾಡಿದ ಪ್ರಧಾನಿ

ನವದೆಹಲಿ, ಜೂ. ೧: ಕಳೆದ ತಿಂಗಳು ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮಹಿಳಾ ಬಾಕ್ಸರ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಭೇಟಿ ಮಾಡಿದರು. ಚಿನ್ನ ಗೆದ್ದ ನಿಖತ್ ಝರೀನ್, ಕಂಚಿನ ಪದಕ ವಿಜೇತರಾದ ಮನೀಶಾ ಮೌನ್ ಮತ್ತು ಪರ್ವೀನ್ ಹೂಡಾ ಅವರನ್ನು ಪ್ರಧಾನಿ ಅಭಿನಂದಿಸಿದರು. ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ನಿಖತ್ ಝರೀನ್ ಅವರು ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್.ಎಲ್. ಮತ್ತು ಲೇಖಾ ಕೆ.ಸಿ. ಅವರ ನಂತರ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಐದನೇ ಭಾರತೀಯ ಬಾಕ್ಸರ್ ಎನಿಸಿಕೊಂಡಿದ್ದಾರೆ. ಮನೀಶಾ ಮೌನ್ ಮತ್ತು ಚೊಚ್ಚಲ ಆಟಗಾರ್ತಿ ಪರ್ವೀನ್ ಹೂಡಾ ಕ್ರಮವಾಗಿ ೫೭ ಕೆ.ಜಿ. ಮತ್ತು ೬೩ ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕೊನೆಯ ಚಿನ್ನದ ಪದಕವು ೨೦೧೮ ರಲ್ಲಿ ಬಂದಿತ್ತು. ಮೇರಿ ಕೋಮ್ ಲೈಟ್ ಫ್ಲೆöÊವೇಟ್ ವಿಭಾಗದಲ್ಲಿ (೪೫-೪೮ ಕೆ.ಜಿ.) ಉಕ್ರೇನ್‌ನ ಹನ್ನಾ ಒಖೋಟಾ ಅವರನ್ನು ಸೋಲಿಸಿದ್ದರು. ೧೨ ಸದಸ್ಯರ ಭಾರತೀಯ ತಂಡ ಈ ಬಾರಿ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಪದಕ ಗಳಿಕೆ ಒಂದಷ್ಟು ಕಡಿಮೆಯಾಗಿದ್ದರೂ ನಾಲ್ಕು ವರ್ಷಗಳ ನಂತರ ಭಾರತೀಯರೊಬ್ಬರು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಹೆಸರು ನಿಖತ್ ಝರೀನ್ ಅವರಿಗೆ ಬಂದಿದೆ.