ಮಡಿಕೇರಿ, ಜೂ. ೧: ವೀರಾಜಪೇಟೆ ತಾಲೂಕು ಕೃಷಿ ಇಲಾಖೆಯ ವತಿಯಿಂದ ೨೦೨೨-೨೩ನೇ ಸಾಲಿನ ರಾಜ್ಯಮಟ್ಟದ ‘ಕೃಷಿ ಪಂಡಿತ’ ಮತ್ತು ರಾಜ್ಯ, ಜಿಲ್ಲಾ, ತಾಲೂಕುಮಟ್ಟದ ‘ಕೃಷಿ ಪ್ರಶಸ್ತಿ’ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಸದರಿ ಸಾಲಿನಲ್ಲಿ ಪ್ರತ್ಯೇಕವಾಗಿ ಮಹಿಳೆಯರಿಂದ ಪ್ರಶಸ್ತಿಗಾಗಿ ಅರ್ಜಿಯನ್ನು ಸ್ವೀಕರಿಸಲಾಗುವುದು. ಆಸಕ್ತ ರೈತ-ರೈತ ಮಹಿಳೆಯರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಪಡೆದುಕೊಳ್ಳಬಹುದು. ‘ಕೃಷಿ ಪಂಡಿತ’ ಮತ್ತು ರಾಜ್ಯ, ಜಿಲ್ಲಾ, ತಾಲೂಕುಮಟ್ಟದ ಕೃಷಿ ಪ್ರಶಸ್ತಿಗಾಗಿ ಅರ್ಜಿಯನ್ನು ಸಲ್ಲಿಸಲು ಅನುಕ್ರಮವಾಗಿ ತಾ. ೨೨.೭.೨೦೨೨ ಮತ್ತು ೩೧.೮.೨೦೨೨ ರಂದು ಕೊನೆಯ ದಿನಾಂಕವಾಗಿದೆ ಎಂದು ವೀರಾಜಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.