*ಗೋಣಿಕೊಪ್ಪ, ಜೂ. ೧: ಗೋಣಿಕೊಪ್ಪ ಉಪವಿಭಾಗದ ಶಾಖಾ ವ್ಯಾಪ್ತಿಯಾದ ತಿತಿಮತಿ, ಹುದಿಕೇರಿ ವಿಭಾಗದಲ್ಲಿ ಜಂಗಲ್ ಕಟ್ಟಿಂಗ್ ಇರುವುದರಿಂದ ತಾ. ೨ ಮತ್ತು ೩ ರಂದು ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೀಲ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ತಾ. ೨ ಮತ್ತು ೩ ರಂದು ತಿತಿಮತಿ ಫೀಡರ್‌ನ ತಿತಿಮತಿ, ಮಾಯಮುಡಿ, ದೇವರಪುರ, ಹೆಬ್ಬಾಲೆ, ನೊಖ್ಯ, ಮರಪಾಲ, ಕೋಣಕಟ್ಟೆ ಸುತ್ತಮುತ್ತಲಿನ ವ್ಯಾಪ್ತಿಗಳಲ್ಲಿ ಮತ್ತು ಹುದಿಕೇರಿ ಫೀಡರ್‌ನ ಬೇಗೂರು, ಮಾಪಿಲೆತೋಡು, ನಡಿಕೇರಿ, ಮುಗುಟಗೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೩ ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಅದೇ ರೀತಿಯಲ್ಲಿ ಶ್ರೀಮಂಗಲ ಶಾಖಾ ವ್ಯಾಪ್ತಿಯ ಕಾನೂರು ಮತ್ತು ಬಿರುನಾಣಿ ಫೀಡರ್‌ನಲ್ಲಿ ತಾ. ೧ ಮತ್ತು ೨ ರಂದು ವಿದ್ಯುತ್ ಸರಬರಾಜು ಇರುವುದಿಲ್ಲ. ಶ್ರೀಮಂಗಲ ಶಾಖಾ ವ್ಯಾಪ್ತಿಯ ಕಾನೂರು ಫೀಡರ್‌ನ ನಾಲ್ಕೇರಿ, ಹರಿಹರ, ಕುಮುಟೂರು, ಕೋತೂರು, ಚೂರಿಕಾಡು ಮತ್ತು ಬಿರುನಾಣಿ ಫೀಡರ್‌ನ ಶೆಟ್ಟಿಗೇರಿ, ನೆಮ್ಮಲೆ, ತೆರಾಲು, ಬಿರುನಾಣಿ, ಪೂಕೊಳ, ಪೊರಾಡು, ಬಾಡಗರಕೇರಿ ವ್ಯಾಪ್ತಿಗಳಲ್ಲಿಯೂ ಬೆಳಿಗ್ಗೆ ೧೦ ರಿಂದ ೩ ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.