ಸುಂಟಿಕೊಪ್ಪ, ಮೇ ೩೧: ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀಮುತ್ತಪ್ಪ ದೇವಾಲಯದ ಜೀಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನೆಯ ಪ್ರಯುಕ್ತ ೭ ವರ್ಷದಿಂದ ಸ್ಥಗಿತಗೊಂಡಿದ್ದ ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವವು ಜೂನ್ ೪ ರಿಂದ ೬ ರವರೆಗೆ ವಿಜೃಂಭಣೆಯಿAದ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಸುಂಟಿಕೊಪ್ಪ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕ ತೆರೆಗೆ ೭ ವರ್ಷಗಳ ಕಾಲ ದೇವಾಲಯದ ಜೀರ್ಣೋದ್ಧಾರ ಕಾರ್ಯನಿಮಿತ್ತ ಅಡಚಣೆ ಉಂಟಾಗಿತ್ತು.

ತಾ. ೪ ರಂದು ಬೆಳಿಗ್ಗೆ ೬.೧೫ ಗಂಟೆಗೆ ಗಣಪತಿ ಹವನ ೭.೧೫ ಗಂಟೆಗೆ ಶುದ್ಧಿ ಪುಣ್ಯಾಹ, ೭.೩೦ ಗಂಟೆಗೆ ಬಾವುಟ ಏರಿಸುವುದು, ಸಂಜೆ ೪ ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ರಾತ್ರಿ ೭ ಗಂಟೆಗೆ ಶ್ರೀಮುತ್ತಪ್ಪ ವೆಳ್ಳಾಟಂ, ೮ ಗಂಟೆಗೆ ಚಂಡೆಮೇಳ ನಡೆಯಲಿದೆ.

ತಾ. ೫ ರಂದು ಬೆಳಿಗ್ಗೆ ೭ ಗಂಟೆಗೆ ವಾದ್ಯಮೇಳ, ೯ರಿಂದ ಶ್ರೀಶಾಸ್ತಪ್ಪನ ವೆಳ್ಳಾಟಂ, ೧೦ ಗಂಟೆಗೆ ಶ್ರೀ ಗುಳಿಗನ ವೆಳ್ಳಾಟಂ, ಸಂಜೆ ೪.೩೦ ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ಸಂಜೆ ೫ ಗಂಟೆಗೆ ಅಡಿಯರ ಮೆರವಣಿಗೆ, ೬ ಗಂಟೆಗೆ ಶ್ರೀ ಚಾಮುಂಡೇಶ್ವರಿ ವೆಳ್ಳಾಟಂ ಮತ್ತು ದೇವರುಗಳ ತೋಟಂ, ೮.೩೦ ಗಂಟೆಗೆ ಶ್ರೀ ವಸೂರಿಮಾಲೆ ಸ್ನಾನಕ್ಕೆ ಹೊರಡುವುದು ಮತ್ತು ರಕ್ತ ಚಾಮುಂಡಿ ವೆಳ್ಳಾಟಂ, ೯ ಗಂಟೆಗೆ ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ, ೧೦ ಗಂಟೆಗೆ ಶ್ರೀ ವಸೂರಿಮಾಲೆ ಸ್ನಾನ ಮೆರವಣಿಗೆ, ೧೧ ಗಂಟೆಗೆ ಕಳಿಗಪಾಟ್, ಅಂದಿಮೇಳ ಕಳಸಂ ಸ್ವೀಕರಿಸುವುದು, ವಳ್ಳಕೆಟ್ಟ್, ೧ ಗಂಟೆಗೆ ಶ್ರೀ ಗುಳಿಗನ ಕೋಲ, ೨ ಗಂಟೆಗೆ ಶ್ರೀ ಶಾಸ್ತಪ್ಪನ ಕೋಲ, ಬೆಳಗಿನ ಜಾವ ೪ ಗಂಟೆಗೆ ಶ್ರೀ ತಿರುವಪ್ಪನ ಕೋಲ ನೆರವೇರಲಿದೆ.

ತಾ. ೬ ರಂದು ಬೆಳಿಗ್ಗೆ ೭ ಗಂಟೆಗೆ ಶ್ರೀ ರಕ್ತ ಚಾಮುಂಡಿಕೋಲ, ೮.೩೦ಕ್ಕೆ ಶ್ರೀ ವಿಷ್ಣುಮೂರ್ತಿಕೋಲ, ೧೦ ಗಂಟೆಗೆ ಶ್ರೀ ಚಾಮುಂಡೇಶ್ವರಿ ಕೋಲ, ೧೧ ಗಂಟೆಗೆ ಶ್ರೀ ವಸೂರಿ ಮಾಲೆ ಕೋಲ, ಮದ್ಯಾಹ್ನ ೧೨ ಗಂಟೆಗೆ ಗುರುಶ್ರೀ ದರ್ಪಣ, ಅಪರಾಹ್ನ ೨ ಗಂಟೆಗೆ ಬಾವುಟ ಇಳಿಸಲಾಗುವುದೆಂದು ಶ್ರೀ ಚಾಮುಂಡೇಶ್ವರಿ ಹಾಗೂ ಮುತ್ತಪ್ಪ ದೇವಾಲಯ ಸಮಿತಿ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.