ಪೊನ್ನAಪೇಟೆ, ಮೇ ೩೧: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆಲೆ ಗ್ರಾಮದ ಜಾನಕಿ ಮಿಲ್ನ ಸಮೀಪ ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.
ಇAದು ಸಂಜೆ ೫.೩೦ರ ಸಮಯದಲ್ಲಿ ಗೋಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಾರಾಟಕ್ಕಿಟ್ಟಿದ್ದ ಗೋಮಾಂಸ ಸಮೇತ ಆರೋಪಿಗಳಾದ ಹುಣಸೂರು ತಾಲೂಕಿನ ಧರ್ಮಪುರ ಗ್ರಾಮದ ನರಸಿಂಹ, ನಾಗರಾಜ್ ಹಾಗೂ ಹುಣಸೂರು ಕಲ್ಕುಣಿಕೆಯ ದಿನೇಶ್ ಎಂಬ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಡಿವೈಎಸ್ಪಿ ನಿರಂಜನ ರಾಜೇ ಅರಸ್ ಹಾಗೂ ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜು ಅವರ ಮಾರ್ಗದರ್ಶನದಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಪ್ರಮೋದ್, ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ, ಪ್ರಸನ್ನ, ಭರತ್ ಕುಮಾರ್, ನಟರಾಜು, ಬಸವರಾಜು ಭಾಗವಹಿಸಿದ್ದರು.