ಡಿ.ಕೆ. ಶಿವಕುಮಾರ್‌ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಮನ್ಸ್

ನವದೆಹಲಿ, ಮೇ ೩೧: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇಡಿ ಯಿಂದ ಆರೋಪ ಪಟ್ಟಿ ದಾಖಲಾದ ಬೆನ್ನಲ್ಲೇ, ೨೦೧೮ ರಲ್ಲಿ ಡಿಕೆಶಿ ವಿರುದ್ಧ ದಾಖಲಾಗಿರುವ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ನ್ಯಾಯಾಲಯವೊಂದು ಮಂಗಳವಾರ ಡಿ.ಕೆ. ಶಿವಕುಮಾರ್ ಮತ್ತಿತರರಿಗೆ ಸಮನ್ಸ್ ನೀಡಿದೆ. ಜುಲೈ ೧ ರಂದು ವಿಚಾರಣೆಗೆ ಹಾಜರಾಗುವಂತೆ ವಿಶೇಷ ನ್ಯಾಯಾಧೀಶ ವಿಕಾಸ್ ಧುಲೆ ಡಿ.ಕೆ. ಶಿವಕುಮಾರ್ ಅವರಿಗೆ ನಿರ್ದೇಶಿಸಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತಿತರರ ವಿರುದ್ಧ ವಿಶೇಷ ಪ್ರಾಸಿಕ್ಯೂಟರ್ ನಿತೇಶ್ ರಾಣಾ ಅವರ ಮೂಲಕ ಇಡಿ ಸಲ್ಲಿಸಿದ ಚಾರ್ಜ್ ಶೀಟ್‌ನ್ನು ಪರಿಗಣಿಸಿದ ನಂತರ ಕೋರ್ಟ್ ಈ ಆದೇಶ ನೀಡಿದೆ. ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಈ ಹಿಂದೆ ೨೦೧೯, ಸೆಪ್ಟೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಬಂಧಿಸಿತ್ತು. ನಂತರ ೨೦೧೯, ಅಕ್ಟೋಬರ್ ೨೩ ರಂದು ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ

ಬೆಂಗಳೂರು, ಮೇ ೩೧: ಭಾರತೀಯ ಆಡಳಿತ ಸೇವೆಯ ಹಿರಿಯ ಅಧಿಕಾರಿ ವಂದಿತಾ ಶರ್ಮಾ ಅವರು ಮಂಗಳವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಿ. ರವಿಕುಮಾರ್ ಅವರ ವಯೋ ನಿವೃತ್ತಿಯಿಂದ ತೆರವಾದ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ ೧೯೮೬ನೇ ಸಾಲಿನ ಐಎಎಸ್ ಅಧಿಕಾರಿ ವಂದಿತಾ ಶರ್ಮಾ ಅವರು ಇಂದು ಸಂಜೆ ನೂತನ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ವಂದಿತಾ ಶರ್ಮಾ ಅವರು ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುತ್ತಿರುವ ನಾಲ್ಕನೇ ಮಹಿಳೆಯಾಗಿದ್ದಾರೆ. ಅಂತೆಯೇ, ರಾಜ್ಯ ಸರ್ಕಾರದ ೩೯ನೇ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಈ ಹಿಂದೆ ೨೦೦೦ನೇ ಇಸವಿಯಲ್ಲಿ ತೆರೇಸಾ ಭಟ್ಟಾಚಾರ್ಯ, ೨೦೦೬ನೇ ಇಸವಿಯಲ್ಲಿ ಮಾಲತಿ ದಾಸ್ ಹಾಗೂ ೨೦೧೭ನೇ ಇಸವಿಯಲ್ಲಿ ಕೆ. ರತ್ನಪ್ರಭ ಅವರೂ ಅಲಂಕರಿಸಿದ್ದರು.

ಲೆಸ್ಬಿಯನ್ ದಂಪತಿ ಒಟ್ಟಿಗೆ ವಾಸಿಸಲು ಕೇರಳ ಹೈಕೋರ್ಟ್ ಅನುಮತಿ

ಕೊಚ್ಚಿ, ಮೇ ೩೧: ಲೆಸ್ಬಿಯನ್ ದಂಪತಿಗಳಾದ ಅಧಿಲಾ ನಸ್ರಿನ್ ಮತ್ತು ಫಾತಿಮಾ ನೂರಾ ಒಟ್ಟಿಗೆ ವಾಸಿಸಲು ಕೇರಳ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ. ಒಟ್ಟಿಗೆ ವಾಸಿಸಲು ಅನುಮತಿ ಕೋರಿ ಅಧಿಲಾ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಲೆಸ್ಬಿಯನ್ ದಂಪತಿ ಒಟ್ಟಿಗೆ ವಾಸಿಸಲು ಅನುಮತಿ ನೀಡಿದೆ. ಕಳೆದ ವಾರ ತನ್ನ ಸಂಗಾತಿ ಫಾತಿಮಾಳನ್ನು ಆಕೆಯ ಸಂಬAಧಿಕರು ಅಪಹರಿಸಿದ್ದಾರೆ ಎಂದು ಅಧಿಲಾ ಅವರು ಆರೋಪಿಸಿದ್ದರು. ಅಲ್ಲದೆ ಈ ಸಂಬAಧ ಈ ಹಿಂದೆ ಪೊಲೀಸರಿಗೆ ದೂರು ಸಹ ನೀಡಿದ್ದರು. ೨೨ ವರ್ಷದ ಅಧಿಲಾ ಮತ್ತು ೨೩ ವರ್ಷದ ಫಾತಿಮಾ ಸೌದಿ ಅರೇಬಿಯಾದಲ್ಲಿ ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಭೇಟಿಯಾಗಿದ್ದರು ಮತ್ತು ನಂತರ ಅವರು ನ್ಯಾಯಾಲಯದಲ್ಲಿ ಸಲ್ಲಿಸಿದ ಮನವಿಯ ಪ್ರಕಾರ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ. ಆದರೆ ಸಂಬAಧಿಕರು ಈ ಸಂಬAಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಆದಿಲಾ ಅವರ ಪೋಷಕರು ಇಬ್ಬರನ್ನೂ ಆಲುವಾದಲ್ಲಿರುವ ಅವರ ನಿವಾಸಕ್ಕೆ ಕರೆದೊಯ್ದಿದ್ದರು. ಆದರೆ, ನೂರಾ ಸಂಬAಧಿಕರು ಅಲುವಾಕ್ಕೆ ಬಂದು ನೂರಾಳನ್ನು ಅಪಹರಿಸಿಕೊಂಡು ಹೋಗಿದ್ದರು. ಆದಿಲಾ ಮೇ ೩೦ ರಂದು ಕೇರಳ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿ, ಒಟ್ಟಿಗೆ ವಾಸಿಸಲು ಅವಕಾಶ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.

ಮಗಳ ಶವವನ್ನು ೪ ದಿನ ಮನೆಯಲ್ಲಿಯೇ ಇಟ್ಟುಕೊಂಡಿದ್ದ ತಾಯಿ!

ಮಂಡ್ಯ, ಮೇ ೩೧: ವೃದ್ಧ ಮಹಿಳೆಯೊಬ್ಬರು ಮೃತಪಟ್ಟ ತಮ್ಮ ಮಗಳ ಶವವನ್ನು ೪ ದಿನಗಳ ಕಾಲ ಮನೆಯಲ್ಲೇ ಇಟ್ಟುಕೊಂಡಿದ್ದ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಹಾಲಹಳ್ಳಿ ಗ್ರಾಮದ ವೃದ್ಧೆ ನಾಗಮ್ಮ ಅವರ ಮಗಳು ಮೃತಪಟ್ಟಿದ್ದರು. ಆದರೆ ಪಾರ್ಥಿವ ಶರೀರಕ್ಕೆ ಅಂತ್ಯಸAಸ್ಕಾರ ಮಾಡದೇ ಮನೆಯಲ್ಲಿಯೇ ಇಟ್ಟುಕೊಂಡಿದ್ದರು. ದಿನ ಕಳೆದಂತೆ ಶವ ಕೊಳೆಯಲು ಪ್ರಾರಂಭಿಸಿ ದುರ್ಗಂಧ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಒತ್ತಾಯಪೂರ್ವಕವಾಗಿ ಮನೆ ಬಾಗಿಲು ತೆಗೆದಾಗ ಈ ಮಾಹಿತಿ ಬಹಿರಂಗವಾಗಿದೆ. ನಾಗಮ್ಮ, ಮಗಳು ರೂಪ ಸಾವನ್ನಪ್ಪಿದ್ದರೂ ಸತತ ೪ ದಿನಗಳ ಕಾಲ ಮನೆ ಬಾಗಿಲು ಹಾಕಿಕೊಂಡು ಯಾರಿಗೂ ಮಾಹಿತಿ ನೀಡಿರಲಿಲ್ಲ. ರೂಪ ಸಾವಿಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ. ವಿವಾಹವಾದ ೧೦ ವರ್ಷಗಳ ಬಳಿಕ ರೂಪಾ ಪತಿಯನ್ನು ತೊರೆದು ತಾಯಿಯ ಮನೆಗೆ ಬಂದಿದ್ದರು.

ಸ್ನೇಹಿತನ ಮೇಲೆಯೇ ಆ್ಯಸಿಡ್ ಎರಚಿದ ವ್ಯಕ್ತಿ!

ಬೆಂಗಳೂರು, ಮೇ ೩೧: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್ ದಾಳಿ ಪ್ರಕರಣ ಬೆಳಕಿಗೆ ಬಂದಿದ್ದು, ಸ್ನೇಹಿತನಿಂದ ಸ್ನೇಹಿತನ ಮೇಲೆಯೇ ಆ್ಯಸಿಡ್ ದಾಳಿ ನಡೆದಿದೆರುವ ಘಟನೆ ವರದಿಯಾಗಿದೆ. ಬೆಂಗಳೂರಿನ ಕಬ್ಬನ್ ಪೇಟೆ ೧೦ನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳ ಮೂಲದ ಜನತಾ ಅದಕ್ ತನ್ನ ಸ್ನೇಹಿತನಿಗೆ ಆ್ಯಸಿಡ್ ಎರಚಿದ್ದಾನೆ. ಜನತಾ ಅದಕ್ ಹಾಗೂ ಸಂತ್ರಸ್ತ ಸಾಂತ್ರಾ ಬೆಳ್ಳಿ ಪಾಲಿಶ್ ಅಂಗಡಿಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಆದರೆ ಭಾನುವಾರ ರಾತ್ರಿ ಇಬ್ಬರ ನಡುವೆ ಜಗಳವಾಗಿತ್ತು. ಜನತಾ ಅದಕ್ ಹಾಗೂ ಸಂತ್ರಸ್ತ ಕುಡಿದು ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಸಂತ್ರಸ್ತ ಮೊಬೈಲ್‌ನಲ್ಲಿ ವೀಡಿಯೋ ಮಾಡಲು ಮುಂದಾಗಿದ್ದ. ಇದರಿಂದ ಕೋಪಗೊಂಡ ಜನತಾ ಅದಕ್ ಬೆಳ್ಳಿ ಪಾಲಿಶ್ ಮಾಡಲು ತಂದಿದ್ದ ಡೈಲೂಟ್ ಆ್ಯಸಿಡ್ ಎರಚಿದ್ದಾನೆ. ಘಟನೆಯಲ್ಲಿ ಸಂತ್ರಸ್ತ ಸಾಂತ್ರಾನ ಮುಖ, ಎದೆ ಗಾಯವಾಗಿದ್ದು, ಶೇ. ೩೦ ರಷ್ಟು ಸುಟ್ಟಿದೆ. ಸಂತ್ರಸ್ತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರಕರಣ ಸಂಬAಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜನತಾ ಅದಕ್‌ನನ್ನು ಮೈಸೂರು ಬಳಿ ಪೊಲೀಸರು ಬಂಧಿಸಿದ್ದಾರೆ.

ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಉಚ್ಛಾಟನೆ!

ಶಿವಮೊಗ್ಗ, ಮೇ ೩೧: ರೈತ ಸಂಘ ಮತ್ತು ಹಸಿರು ಸೇನೆಯಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಇದೇ ವೇಳೆ ರೈತ ಸಂಘದ ರಾಜ್ಯಾಧ್ಯಕ್ಷರಾಗಿ ನೂತನವಾಗಿ ಹೆಚ್.ಆರ್. ಬಸವರಾಜಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಕೋಡಿಹಳ್ಳಿ ಚಂದ್ರ ಶೇಖರ್ ವಿರುದ್ಧ ಲಂಚಕ್ಕೆ ಬೇಡಿಕೆಯಿಟ್ಟ ಗಂಭೀರ ಆರೋಪ ಕೇಳಿ ಬಂದಿದ್ದರಿAದ ಇಂದು ಶಿವಮೊಗ್ಗದಲ್ಲಿ ನಡೆದ ರೈತ ಸಂಘ, ಹಸಿರು ಸೇನೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಕೋಡಿಹಳ್ಳಿ ಚಂದ್ರಶೇಖರ್ ಅಲ್ಲ ಗಳೆದಿಲ್ಲ. ಅವರ ವಿರುದ್ಧ ಅದಾಗಲೇ ಸಣ್ಣ ಪುಟ್ಟ ಆರೋಪಗಳು ಕೇಳಿಬಂದಿದ್ದವು. ಆದರೆ ಇದೀಗ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದರಿAದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನೂತನ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದ್ದಾರೆ. ಹೀಗಾಗಿ ತುರ್ತು ಸಭೆ ಸೇರಿ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ ಎಂದರು.