ಕಣಿವೆ, ಮೇ ೩೧: ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಯ ಪಾಲನೆ ಮೈಗೂಡಿಸಿಕೊಳ್ಳುವ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕೆಂದು ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ ಕರೆಕೊಟ್ಟರು.
ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಲೇಜು ವಿದ್ಯಾರ್ಥಿ ಸಮಿತಿ ಉದ್ಘಾಟನಾ ಸಮಾರಂಭ ಉದ್ಘಾಟಿಸಿದ ನಂತರ ಕಾಲೇಜಿನಲ್ಲಿ ಹೊರತಂದ ಸೃಜನ ದ್ವೆöÊವಾರ್ಷಿಕ ಸ್ಮರಣಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಪೈಪೋಟಿಗಳನ್ನು ಮೆಟ್ಟಿ ನಿಲ್ಲುವ ಮೂಲಕ ವಿಫುಲ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಬೇಕು.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಿ. ಗುರು ಹಿರಿಯರಿಗೆ ಗೌರವ ಸಲ್ಲಿಸಿ, ಸನ್ನಡತೆಯನ್ನು ರೂಢಿಸಿಕೊಳ್ಳಿ. ಕುಶಾಲನಗರ ಜಿಲ್ಲೆಯಲ್ಲಿಯೇ ವಿದ್ಯಾ ಕಾಶಿ ಎಂಬ ಹೆಸರು ಪಡೆದಿದೆ ಎಂದು ಬಣ್ಣಿಸಿದರು.
ಮುಖ್ಯ ಭಾಷಣಕಾರರಾಗಿದ್ದ ವಿಶ್ರಾಂತ ಪ್ರಾಧ್ಯಾಪಕ ಮಹಾದೇವ ಶಂಕನಪುರ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಜ್ಞಾನ ನಮ್ಮ ಬಹುದೊಡ್ಡ ಅಸ್ತç ಹಾಗೂ ಆಸ್ತಿಯಾಗಬೇಕಿದೆ. ಭಾಷೆ, ಸಾಹಿತ್ಯ, ಪರಿಸರದೊಂದಿಗೆ ಜೀವಿಸುವ ಮೂಲಕ ಅವುಗಳನ್ನು ವಿದ್ಯಾರ್ಥಿಗಳು ಆರಾಧಿಸಬೇಕಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಪಡೆವ ಪದವಿಯಷ್ಟೇ ಸಾಮಾಜಿಕ ಜವಾಬ್ದಾರಿಗಳು ಕೂಡ ಅಷ್ಟೇ ಮುಖ್ಯ. ಸಾಹಿತ್ಯ, ಸಂಗೀತ, ಕ್ರೀಡೆ ಮೊದಲಾದವುಗಳು ಶಿಕ್ಷಣದ ಮುಖ್ಯ ಅಂಗಗಳಾಗಬೇಕಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಹೆಚ್.ಬಿ. ಲಿಂಗಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ, ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಶಾಂತಲಕ್ಷಿö್ಮ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರವೀಣಕುಮಾರ್, ಕಾಲೇಜು ಶಿಕ್ಷಣ ಇಲಾಖೆಯ ಧನಂಜಯ, ವಿದ್ಯಾರ್ಥಿ ಸಮಿತಿ ಸಂಚಾಲಕ ಡಾ. ಬಿ.ಡಿ. ಹರ್ಷ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪಿ. ರಮೇಶ್ಚಂದ್ರ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಎಂ.ಎನ್. ರೂಪ, ಕ್ರೀಡಾ ಸಮಿತಿ ಸಂಚಾಲಕ ಟಿ.ಎಂ. ಸುಧಾಕರ, ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಸುನಿಲ್ ಕುಮಾರ್, ಮಧುಶ್ರೀ, ರೋವರ್ ಘಟಕದ ಸಂಚಾಲಕ ಡಾ. ಸುರೇಶ್ ಕುಮಾರ್, ರೇಂಜರ್ ಘಟಕದ ಸಂಚಾಲಕಿ ಕೆ.ಆರ್. ವಂದನಾ, ವಿದ್ಯಾರ್ಥಿ ಸಮಿತಿ ಉಪಾಧ್ಯಕ್ಷ ಅವಿಲೇಶ್, ಕಾರ್ಯದರ್ಶಿ ಜಿ.ಎಸ್. ಪ್ರತಾಪ್, ಮಹಿಳಾ ಕಾರ್ಯದರ್ಶಿ ದಿವ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಕಾರ್ತಿಕ್, ಮಹಿಳಾ ಸಾಂಸ್ಕೃತಿಕ ಕಾರ್ಯದರ್ಶಿ ತೇಜಸ್ವಿ, ಕ್ರೀಡಾ ಕಾರ್ಯದರ್ಶಿ ಶಿವ, ಮಹಿಳಾ ಕ್ರೀಡಾ ಕಾರ್ಯದರ್ಶಿ ಹೆಚ್.ಡಿ. ರಶ್ಮಿತಾ, ಜಂಟಿ ಕಾರ್ಯದರ್ಶಿ ಎಂ.ಸಿ. ವರುಣ, ಮಹಿಳಾ ಕಾರ್ಯದರ್ಶಿ ಜಿ.ಎಸ್. ಶೋಭಾ ಇದ್ದರು.
ಮಂಗಳವಾರ ನಿವೃತ್ತರಾದ ಕಾಲೇಜಿನ ಪ್ರಾಂಶುಪಾಲ ಹೆಚ್.ಬಿ. ಲಿಂಗಮೂರ್ತಿ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.