ಮಡಿಕೇರಿ, ಮೇ ೩೧: ಪೊನ್ನಂಪೇಟೆ ೬೬/೧೧ ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಿAದ ಹೊರಹೋಗುವ ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ನಡೆಸಬೇಕಿರುವುದರಿಂದ ತಾ. ೨ ಮತ್ತು ೩ ರಂದು ಹಾಗೂ ಶ್ರೀಮಂಗಲ ೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಹೋಗುವ ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ನಡೆಸಬೇಕಿರುವುದರಿಂದ ತಾ. ೧ ಮತ್ತು ೨ ರಂದು ಬೆಳಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೩ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ತಿತಿಮತಿ, ಮಾಯಮುಡಿ, ದೇವರಪುರ, ಹೆಬ್ಬಾಲೆ, ನೋಖ್ಯ ಮರಪಾಲ, ಕೋಣಕಟ್ಟೆ, ಬೇಗೂರು, ಮಾವಿನತೋಡು, ನಡಿಕೇರಿ, ಮುಗುಟಗೇರಿ, ಸುತ್ತಮುತ್ತ, ನಾಲ್ಕೇರಿ, ಹರಿಹರ, ಕುಮುಟೂರು, ಕೊತ್ತೂರು, ಚೂರಿಕಾಡು, ಸುತ್ತಮುತ್ತ ಹಾಗೂ ಟಿ.ಶೆಟ್ಟಿಗೇರಿ, ನೆಮ್ಮಲೆ, ಬಿರುನಾಣಿ, ತೆರಾಲು ಪೂಕೊಳ, ಪೊರಾಡು, ಬಾಡಗರಕೇರಿ, ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.

* ಭಾಗಮಂಡಲ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಸಬೇಕಿರುವುದರಿಂದ ತಾ. ೧ ರಂದು ಬೆಳಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೩ ಗಂಟೆಯವರೆಗೆ ಅಪ್ಪಂಗಳ, ಬೆಟ್ಟಗೇರಿ, ಹೆರವನಾಡು, ಕಾರುಗುಂದ, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ, ತಲಕಾವೇರಿ, ಅಯ್ಯಂಗೇರಿ, ದೊಡ್ಡಪೂಲಿಕೊಟ್ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.