ಮಡಿಕೇರಿ, ಮೇ ೩೧: ರೋಟರಿ ಜಿಲ್ಲಾ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ಗೆ ೫ ಪ್ರಶಸ್ತಿಗಳು ಲಭಿಸಿವೆ.
ಮೈಸೂರಿನ ಜಯಚಾಮ ರಾಜೇಂದ್ರ ಸ್ಪೋರ್ಟ್ಸ್ ಕ್ಲಬ್ನಲ್ಲಿ ಆಯೋಜಿತ ರೋಟರಿ ಜಿಲ್ಲೆ ೩೧೮೧ನ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ ವಾರ್ಷಿಕ ಯೋಜನೆಗಳ ಅನುಷ್ಠಾನಕ್ಕಾಗಿ ಪ್ಲಾಟಿನಂ ಪ್ರಶಸ್ತಿ ದೊರಕಿತು. ಅಂತೆಯೇ ಹೊಸ ರೋಟರಿ ಕ್ಲಬ್ ಸ್ಥಾಪನೆ, ಟಿಆರ್ ಎಫ್ ಸೆಮಿನಾರ್ ಯಶಸ್ವಿ ಆಯೋಜನೆ, ಮಧುಮೇಹ ತಪಾಸಣೆ ಶಿಬಿರ, ಪಬ್ಲಿಕ್ ಇಮೇಜ್ ಕಾರ್ಯಕ್ರಮದ ಆಯೋಜನೆ ಗಾಗಿಯೂ ಮಿಸ್ಟಿ ಹಿಲ್ಸ್ಗೆ ಪ್ರಶಸ್ತಿಗಳು ದೊರಕಿದವು. ರೋಟರಿ ದತ್ತಿನಿಧಿ ಸಮಾವೇಶದ ಯಶಸ್ವಿ ಆಯೋಜನೆಗಾಗಿ ಸಮಿತಿ ಅಧ್ಯಕ್ಷ ನುಚ್ಚಿಮಣಿಯಂಡ ಮೋಹನ್ ಪ್ರಭು ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕಾರ್ಯದರ್ಶಿ ಪಿ.ಆರ್. ರಾಜೇಶ್ ಪ್ರಶಸ್ತಿ ಸ್ವೀಕರಿಸಿದರು.
ಕಿರುತೆರೆಯ ಕೃಷ್ಣ ತುಳಸಿ ಧಾರಾವಾಹಿಯ ನಾಯಕಿ ಮತ್ತು ರೂಪದರ್ಶಿ ಪ್ರಿಯಾಂಕ, ರೋಟರಿ ಜಿಲ್ಲಾ ರಾಜ್ಯಪಾಲ ರವೀಂದ್ರ ಭಟ್, ಮಾಜಿ ರಾಜ್ಯಪಾಲ ರಂಗನಾಥ ಭಟ್, ರೋಟರಿ ಜಿಲ್ಲಾ ಕಾರ್ಯದರ್ಶಿ ವಿವೇಕ್ ಅತ್ತಾವರ್, ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ. ಸಹಾಯಕ ಕಾರ್ಯದರ್ಶಿ ಎಚ್.ಎಸ್. ವಸಂತ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿದರು.
ಮಿಸ್ಟಿ ಹಿಲ್ಸ್ ನ ಮೋಹನ್ ಪ್ರಭು, ಶ್ರೀಹರಿ, ಪಿ.ವಿ.ಅಶೋಕ್, ಮುಂದಿನ ಸಾಲಿನ ಅಧ್ಯಕ್ಷ ಪ್ರಸಾದ್ ಗೌಡ, ಮುಂದಿನ ಸಾಲಿನ ಕಾರ್ಯದರ್ಶಿ ಪ್ರಮೋದ್ ರೈ, ರೀನಾ ಅನಿಲ್, ಡಾ. ಶುಭ ರಾಜೇಶ್, ನೆರವಂಡ ಅನುಷ್ಕಾ ಪೂವಯ್ಯ ಹಾಜರಿದ್ದರು.
ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೂರಕ್ಕೂ ಅಧಿಕ ಕಾರ್ಯಯೋಜನೆಗಳನ್ನು ಕಳೆದ ೧೦ ತಿಂಗಳ ಅವಧಿಯಲ್ಲಿ ಮಡಿಕೇರಿ ವ್ಯಾಪ್ತಿಯಲ್ಲಿ ಕಾರ್ಯ ಗತಗೊಳಿ ಸಲಾಗಿತ್ತು. ರೋಟರಿಯನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೊಳಿಸ ಲಾಗಿತ್ತು. ಈ ಯೋಜನೆಗಳಿಗಾಗಿ ರೋಟರಿಯ ಪ್ರತಿಷ್ಠಿತ ಪ್ರಶಸ್ತಿಗಳು ಮಿಸ್ಟಿ ಹಿಲ್ಸ್ಗೆ ದೊರಕಿದ್ದು ಸಂತಸ ತಂದಿದೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಪ್ರತಿಕ್ರಿಯಿಸಿದ್ದಾರೆ.