ಸುಂಟಿಕೊಪ್ಪ, ಮೇ ೩೦: ಇಲ್ಲಿನ ಉಲುಗುಲಿ ಗ್ರಾಮದ ಕೃಷಿಕರು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಓಡಿಯಪ್ಪನ ವಿಮಲಾವತಿ ಅವರ ತೋಟದಲ್ಲಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿದ್ದು, ಆನೆಗಳು ಸಮೀಪದ ಅತ್ತೂರು, ಮಹಾಲಕ್ಷಿö್ಮ ತೋಟದ ಕಡೆಗೆ ತೆರಳಿವೆ. ಆನೆಗಳು ಮತ್ತೆ ತೋಟಕ್ಕೆ ಬರುವ ಸಾದ್ಯತೆಯಿದ್ದು, ಇದರಿಂದ ಸಣ್ಣ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರು ಭಯದಿಂದ ದಿನ ದೂಡುವಂತಾಗಿದೆ ಎಂದು ಓಡಿಯಪ್ಪನ ಸುದೀಶ ಅಳಲು ತೋಡಿಕೊಂಡಿದ್ದಾರೆ. ಕಾಡಿನಲ್ಲಿ ಅರಣ್ಯ ಇಲಾಖೆಯವರು ಆನೆಗಳಿಗೆ ಬೇಕಾದ ಆಹಾರದ ಗಿಡಮರಗಳನ್ನು ನೆಡುವುದರ ಮೂಲಕ ಕಾಡಾನೆಗಳನ್ನು ಕಾಡಿನಲ್ಲಿ ಉಳಿಯು ವಂತೆ ಮಾಡಬೇಕೆಂದು ಗ್ರಾಮಸ್ಥರು ಸಣ್ಣ ಬೆಳೆಗಾರರು ಒತ್ತಾಯಿಸಿದ್ದಾರೆ.