ಮಡಿಕೇರಿ, ಮೇ ೩೧: ಪ್ರಸಕ್ತ ಸಾಲಿನ ಮಳೆಗಾಲದ ಅವಧಿಯಲ್ಲಿ ಅಪಘಾತಗಳನ್ನು ತಡೆಯಲು ಮತ್ತು ವಿದ್ಯುತ್ ಅಡಚಣೆಯಾದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರಿತು, ಸಂಯಮದಿAದ ತುರ್ತು ಸಂದರ್ಭಗಳಲ್ಲಿ ಇಲಾಖೆಯ (೨೪x೭) ಕೇಂದ್ರೀಯ ದೂರು ಕೇಂದ್ರ “೧೯೧೨” ದೂರವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.

ಉಪ-ವಿಭಾಗಾಧಿಕಾರಿಗಳು, ಶಾಖಾಧಿಕಾರಿಗಳು ಹಾಗೂ ಪವರ್‌ಮೆನ್‌ಗಳು ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ವಿಭಾಗ ವ್ಯಾಪ್ತಿಯಲ್ಲಿ ಹಾಲಿ ಇರುವ ಎಲ್ಲಾ ೮೩ ಸಂಖ್ಯೆಯ ೧೧ ಕೆ.ವಿ. ಫೀಡರ್‌ಗಳ ನಿರ್ವಹಣೆ ಕಾರ್ಯ ಕೈಗೊಳ್ಳಲಾಗಿದೆ. ಅಗತ್ಯವಿರುವ ಕಂಬಗಳು, ಪರಿವರ್ತಕಗಳು ಹಾಗೂ ಇತರ ಅಗತ್ಯ ಪರಿಕರಗಳನ್ನು ದಾಸ್ತಾನು ಮಾಡಲಾಗಿದೆ.

ಹೆಚ್ಚಿನ ಮಳೆಯಿಂದ ಹಾನಿಯಾಗುವ ಶಾಖೆಗಳಲ್ಲಿ ಅಗತ್ಯವಿರುವ ಕಂಬಗಳನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ. ವಿಭಾಗ ವ್ಯಾಪ್ತಿಯ ಸುಮಾರು ೧೫೦೦ ವಿದ್ಯುತ್ ಪರಿವರ್ತಕಗಳ ನಿರ್ವಹಣೆ ಕಾರ್ಯ ಮಾಡಲಾಗಿದೆ. ವಿಭಾಗಕ್ಕೆ ಹೆಚ್ಚುವರಿಯಾಗಿ ೭೫ ಸಂಖ್ಯೆಯ ತಾತ್ಕಾಲಿಕ ಗ್ಯಾಂಗ್‌ಮ್ಯಾನ್‌ಗಳನ್ನು ಒದಗಿಸಲು ನಿಗಮ ಕಚೇರಿಯಿಂದ ಕ್ರಮಕೈಗೊಳ್ಳಲಾಗುತ್ತಿದೆ. ವಿಭಾಗಕ್ಕೆ ಹೆಚ್ಚುವರಿಯಾಗಿ ೧೪ ಸಂಖ್ಯೆಯ ಪಿಕ್‌ಅಪ್ ಜೀಪ್‌ಗಳನ್ನು ಒದಗಿಸಲು ನಿಗಮ ಕಚೇರಿಯಿಂದ ಕ್ರಮಕೈಗೊಳ್ಳಲಾಗುತ್ತಿದೆ. ವೀರಾಜಪೇಟೆಯಿಂದ ಮೂರ್ನಾಡು ವಿದ್ಯುತ್ ವಿತರಣಾ ಕೇಂದ್ರಕ್ಕೆ ಸರಬರಾಜಾಗುತ್ತಿರುವ ೩೩ಕೆ.ವಿ. ವಿದ್ಯುತ್ ಮಾರ್ಗವು ಪ್ರತಿ ವರ್ಷ ಮುಳುಗಡೆಯಾಗುತ್ತಿರುವುದರಿಂದ, ಈ ಮಾರ್ಗವನ್ನು ಎತ್ತರಿಸಲು ಕ್ರಮಕೈಗೊಳ್ಳಲಾಗಿದೆ.

ವಿಭಾಗದಲ್ಲಿ ಖಾಲಿ ಇರುವ ೧೦೦ ಕಿರಿಯ ಪವರ್‌ಮೆನ್ ನೇಮಕಾತಿ ಕ್ರಮ ಕೈಗೊಳ್ಳಲಾಗಿದೆ. ಒಂದು ವಾರದಲ್ಲಿ ಸೇವೆಗೆ ನಿಯೋಜಿಸಲಾಗುತ್ತದೆ. ವಿಭಾಗ ವ್ಯಾಪ್ತಿಯಲ್ಲಿ ಏಪ್ರಿಲ್‌ನಿಂದ ಇಲ್ಲಿಯವರೆಗೆ ೫೧೮ ಕಂಬಗಳು, ೧೧೩ ಸಂಖ್ಯೆಯ ಪರಿವರ್ತಕಗಳು ಹಾಗೂ ೫.೮ ಮೀ ವಾಹಕಗಳು ಹಾನಿಗೊಳಗಾಗಿದ್ದು, ಇವುಗಳನ್ನು ಈಗಾಗಲೇ ಬದಲಾವಣೆ ಮಾಡಲಾಗಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ತಿಳಿಸಿದ್ದಾರೆ.