ಹೆಬ್ಬಾಲೆ, ಮೇ ೩೧: ಬೆಂಗಳೂರಿನ ಅಂರ‍್ರಾಷ್ಟಿçÃಯ ಕಾರ್ಯಪ್ಪ ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರಾಜ್ಯಮಟ್ಟದ ಸರ್ಕಾರಿ ನೌಕರರ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಸರ್ಕಾರಿ ನೌಕರರ ಸಂಘ ಸೆಮಿಫೈನಲ್ ಪ್ರವೇಶಿಸಿದೆ.

ಮಂಗಳವಾರ ನಡೆದ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ತಂಡವು ಬೆಂಗಳೂರು ಸಚಿವಾಲಯ ತಂಡವನ್ನು ೬-೦ ಗೋಲುಗಳಿಂದ ಮಣಿಸಿ ಸೆಮಿಫೈನಲ್ಸ್ ಪ್ರವೇಶಿಸಿದೆ.

ಕೊಡಗಿನ ಕ್ರೀಡಾಪಟು ಆರ್.ಡಿ. ಲೋಕೇಶ್ ೨, ಸತೀಶ್ ೨, ಚಂದ್ರಶೇಖರ ೧, ಪ್ರಕಾಶ್ ೧ ಗೋಲು ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಬುಧವಾರ ನಡೆಯುವ ಸೆಮಿಫೈನಲ್ಸ್ನಲ್ಲಿ ಗದಗ ಜಿಲ್ಲಾ ತಂಡವನ್ನು ಎದುರಿಸಲಿದೆ .ತಂಡದಲ್ಲಿ ಪ್ರಕಾಶ್ ನಾಯಕ, ಮೌನ್ ಮೊಣ್ಣಪ್ಪ, ಜಾಗೃತ್, ಮಾಚಯ್ಯ, ಪ್ರಸನ್ನ ಕುಮಾರ್, ಚಂದ್ರಶೇಖರ್, ಸತೀಶ್, ಲೋಕೇಶ್ ಆರ್.ಡಿ., ಶ್ರೀನಿವಾಸ್, ಪೂಣಚ್ವ, ನವೀನ್ ಕುಮಾರ್, ಮಹೇಶ್ ಕುಮಾರ್ ಆರ್.ಡಿ. ಸೋಮಣ್ಣ, ಸುಬ್ಬಯ್ಯ, ಪ್ರಶಾಂತ್, ಶಿವಕುಮಾರ್, ರಮೇಶ್ ಇದ್ದಾರೆ.

ತರಬೇತಿದಾರರಾದ ಡ್ಯಾನಿ ಈರಪ್ಪ, ಮ್ಯಾನೇಜರ್ ಪೂರ್ಣೇಶ್, ಕೊಡಗು ತಂಡವನ್ನು ಮುನ್ನಡೆಸುತ್ತಿದ್ದಾರೆ.