ಚೆಟ್ಟಳ್ಳಿ, ಮೇ ೨೮: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ.

ಎ ಗುಂಪಿನಿAದ ಮಿಲನ್ಸ್ ಅಮ್ಮತ್ತಿ ಹಾಗೂ ಕ್ಯಾಪ್ಟನ್ ೧೧ ಪಾಲಿಬೆಟ್ಟ, ಬಿ ಗುಂಪಿನಿAದ ಚೌಡೇಶ್ವರಿ ಅಮ್ಮತ್ತಿ ಹಾಗೂ ರೋಜಾರಿಯನ್ಸ್ ಗೋಣಿಕೊಪ್ಪ, ಸಿ ಗುಂಪಿನಿAದ ಸಿ.ಸಿ.ಬಿ ವೀರಾಜಪೇಟೆ ಹಾಗೂ ಶೈನಿಂಗ್ ಬರ್ಡ್ ಪಾಲಿಬೆಟ್ಟ, ಡಿ ಗುಂಪಿನಿAದ ಕೆ.ಎಫ್.ಸಿ. ಕುಶಾಲನಗರ ಹಾಗೂ ಐ.ಎನ್ .ಎಸ್ ಎಫ್.ಸಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿವೆ.