ಮಡಿಕೇರಿ, ಮೇ ೨೭: ಜಿಲ್ಲೆಯವರಾದ ಸುಹಾನ್ ಭೀಮಯ್ಯ ಅವರಿಗೆ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ದಿಂದ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು. ರಾಜ್ಯಪಾಲ ತಾವರ್ ಸಿಂಗ್ ಗೆಹ್ಲೋಟ್ ಅವರು ಮೇ ೨೫ ರಂದು ಪದಕಗಳನ್ನು ಪ್ರದಾನ ಮಾಡಿದರು. ೨೦೨೦-೨೧ ಶೈಕ್ಷಣಿಕ ವರ್ಷದಲ್ಲಿ ಆಹಾರ ತಂತ್ರಜ್ಞಾನ ಶಾಸ್ತçದ ಬಿ.ಟೆಕ್ ಪದವಿಯಲ್ಲಿ ಗರಿಷ್ಠ ಅಂಕಗಳಿಸಿ ಕಾಲೇಜಿಗೆ ಹಾಗೂ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿದ ಸುಹಾನ್ ಭೀಮಯ್ಯ ಅವರಿಗೆ ವಿಶ್ವವಿದ್ಯಾಲಯದ ವತಿಯಿಂದ ೨ ಚಿನ್ನದ ಪದಕಗಳು, ಕಾಲೇಜಿಗೆ ಪ್ರಥಮ ಬಂದಿದ್ದರಿAದ ಹಾವೇರಿಯ ತೋಟಗಾರಿಕಾ ಕಾಲೇಜಿನಿಂದ ೧ ಚಿನ್ನದ ಪದಕ ಹಾಗೂ ಒಂದು ಪದಕ ಪ್ರಾಯೋಜಕರಿಂದ ದೊರೆತಿದ್ದು, ಒಟ್ಟು ೪ ಚಿನ್ನದ ಪದಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.

ಸುಹಾನ್ ಅವರು ಪ್ರಸ್ತುತ ತಮಿಳುನಾಡಿನ ತಾಂಜಾವೂರ್‌ನ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫುಡ್ ಪ್ರಾಸೆಸಿಂಗ್ ಟೆಕ್ನಾಲಜಿ’ ಕಾಲೇಜಿನಲ್ಲಿ ಎಮ್.ಟೆಕ್ ವ್ಯಾಸಂಗ ಮಾಡುತ್ತಿದ್ದಾರೆ.

ಇವರು ಮಡಿಕೇರಿಯ ವಕೀಲ ಬಲ್ಯಾಟಂಡ ಭರತ್ ಭೀಮಯ್ಯ ಹಾಗೂ ಶಿಕ್ಷಕಿ ಪೊನ್ನಮ್ಮ (ತಾಮನೆ - ಪುಲ್ಲೇರ) ದಂಪತಿಯ ಪುತ್ರಿ.