ವೀರಾಜಪೇಟೆ, ಮೇ ೨೭: ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವ ಸ್ಥಾಪಕರು, ಸಂತ ಅನ್ನಮ್ಮ ದೇವಾಲ ಯದ ಪ್ರಧಾನ ಧರ್ಮಗುರುಗಳಾದ ರೆವರೆಂಡ್ ಫಾದರ್ ಮಧಲೈಮುತ್ತು ಅವರು ಮೈಸೂರು ಎಂ.ಡಿ.ಎಸ್.ನ ಕೋಶಾಧಿಕಾರಿಯಾಗಿ ೧೫೦ ಶಿಕ್ಷಣ ಸಂಸ್ಥೆಗಳ ಉಸ್ತುವಾರಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡು ಮೈಸೂರಿಗೆ ವರ್ಗಾವಣೆಗೊಡ ಹಿನ್ನೆಲೆ ಇತ್ತೀಚೆಗೆ ಸಂತ ಅನ್ನಮ್ಮ ವಿದ್ಯಾಲಯದ ವತಿಯಿಂದ ಸಂತ ಅನ್ನಮ್ಮ ದೇವಾಲಯದ ದ್ವಿಶತ ಮಾನೋತ್ಸವ ಭವನದಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಮಾತನಾಡಿದ ಅವರು, ನಾವು ಜೀವನದಲ್ಲಿ ಸಾಧಾರಣವಾಗಿ ಯಶಸ್ಸಿನ ಕಡೆಗೆ ನೋಡುತ್ತೇವೆ. ಯಶಸ್ಸಿಗಿಂತ ಸಂತೃಪ್ತಿ ಬಹಳ ಮುಖ್ಯವಾದುದು. ಆ ಸಂತೃಪ್ತಿಯೇ ನಮ್ಮನ್ನು ಯಶಸ್ಸಿನತ್ತ ಕೊಂಡೊ ಯ್ಯುತ್ತದೆ. ಈ ವಿದ್ಯಾಸಂಸ್ಥೆಯ ಪ್ರತಿ ಮಕ್ಕಳು ಸಮಾಜಕ್ಕೆ ಉತ್ತಮ ಕೊಡುಗೆಯಾಗಬೇಕು ಎಂದು ಕರೆ ನೀಡಿದರು. ಕೊಡಗಿನಲ್ಲಿ ೧೯ ವರ್ಷ ಸೇವೆ ಸಲ್ಲಿಸಿದ ಅನುಭವ ಹಂಚಿ ಕೊಂಡರು. ಶಿಕ್ಷಕಿಯರು ಗಾಯನದ ಮೂಲಕ ಫಾದರ್‌ಗೆ ಗೌರವ ಸಲ್ಲಿಸಿದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ರಂಜಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಮಧಲೈ ಮುತ್ತು ಅವರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ದರು. ಸಂತ ಅನ್ನಮ್ಮ ವಿದ್ಯಾಲಯದ ಪರವಾಗಿ ಫಾದರ್ ಮಧಲೈ ಮುತ್ತು ಹಾಗೂ ಸಿಸ್ಟರ್ ಫಿಲೋಮಿನಾ ಅವರನ್ನು ಗೌರವಿಸಿ ಸನ್ಮಾನಿಸ ಲಾಯಿತು. ಕಾರ್ಯಕ್ರಮದ ವೇದಿಕೆ ಯಲ್ಲಿ ಸಂತ ಅನ್ನಮ್ಮ ವಿದ್ಯಾಲಯದ ಮುಖ್ಯ ಶಿಕ್ಷಕ ಬೆನ್ನಿ ಮಾಸ್ಟರ್, ಸಿಸ್ಟರ್ ಮೆಟಿಲ್ಡಾ, ಸಿಸ್ಟರ್ ಪ್ರಮೀಳಾ, ಉಪವಾಚಕ ಯೇಸು ಪ್ರಸಾದ್ ಉಪಸ್ಥಿತರಿದ್ದರು.