ಕಣಿವೆ, ಮೇ ೨೭: ದುಬಾರೆಯ ಸಾಕಾನೆಯ ಶಿಬಿರದಲ್ಲಿ ೩೦ ಆನೆಗಳಿವೆ. ಈ ಪೈಕಿ ೨೮ ಪುರುಷ ಆನೆಗಳು ಇದ್ದರೆ, ಕೇವಲ ಎರಡು ಮಾತ್ರ ಹೆಣ್ಣು ಆನೆಗಳು. ಕಮಲಿ ಹಾಗೂ ಕಾವೇರಿ. ಈ ಪೈಕಿ ಆರು ವರ್ಷ ಪ್ರಾಯದ ದುಬಾರೆ ಸಾಕಾನೆ ಶಿಬಿರದ ಸುಂದರಿ ಕಮಲಿ ಕಳೆದ ಮೂರು ದಿನಗಳಿಂದ ಬೇಧಿಯಿಂದ ಬಳಲುತ್ತಿದ್ದಾಳೆ. ಹಾಗಾಗಿ ಈಕೆಯನ್ನು ಶಿಬಿರದ ಹೊರ ಪ್ರದೇಶದಲ್ಲಿ ಏಕಾಂಗಿಯಾಗಿ ಬಿಡಲಾಗಿದೆ.

ಹಸಿರು ಸೊಪ್ಪು ಹಾಗೂ ಹುಲ್ಲು ತಿಂದದ್ದರಿAದ ಬೇಧಿಯಾಗಿದೆ ಎಂಬುದು ಮಾವುತರ ಅನಿಸಿಕೆಯಾಗಿದೆ.

ಬೇಧಿಯಿಂದಾಗಿ ನಿತ್ರಾಣಗೊಂಡ ಸ್ಥಿತಿಯಲ್ಲಿರುವ ಈ ಕಮಲಿ ಮೆಲ್ಲಗೆ ಹೆಜ್ಜೆ ಇಡುತ್ತಾ ಮತ್ತದೇ ಹಸಿರೊಳಗೆ ಹಸಿರು ಹುಲ್ಲು ಮೆಲ್ಲುತ್ತಿದ್ದಾಳೆ. ಪಶುವೈದ್ಯರ ಮೂಲಕ ಈಕೆಯ ಆರೋಗ್ಯವನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾವುತ ಹೇಳುತ್ತಾರೆ.

ಈ ಕಮಲಿಗೆ ಕೊಡಗು ಜಿಲ್ಲಾಧಿಕಾರಿಯಾಗಿದ್ದ ಶ್ರೀವಿದ್ಯಾ ಅವರ ಹೆಸರನ್ನು ಇಟ್ಟಿರುವ ಬಗ್ಗೆಯು ಮಾವುತ ‘ಶಕ್ತಿ’ಗೆ ತಿಳಿಸಿದರು.

ಒಟ್ಟಾರೆ ದುಬಾರೆಯ ಸಾಕಾನೆಯ ಶಿಬಿರಕ್ಕೆ ಧಾವಿಸುವ ಪ್ರವಾಸಿಗರ ಪ್ರಮುಖ ಆಕರ್ಷಣೆ ಈ ಕಮಲಿಯಾಗಿದ್ದಳು. ಈಗ ಅವಳನ್ನು ಗುಂಪಿನಿAದ ಬೇರ್ಪಡಿಸಲಾಗಿದೆ. -(ವರದಿ : ಕೆ.ಎಸ್. ಮೂರ್ತಿ)