ಮಡಿಕೇರಿ, ಮೇ ೨೮: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಜೊತೆ ಪ್ರಯಾಣಿಕನೋರ್ವ ಅನುಚಿತವಾಗಿ ವರ್ತಿಸಿದ ಘಟನೆ ಮಡಿಕೇರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ನಗರದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಯುವತಿ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿರುವ ಸಂದರ್ಭ ಬಸ್‌ನಲ್ಲಿ ಪಕ್ಕದಲ್ಲಿ ಕುಳಿತ್ತಿದ್ದ ಪೊನ್ನಪ್ಪ ಎಂಬಾತ ಅನುಚಿತವಾಗಿ ವರ್ತಿಸಿದಾಗ ಯುವತಿ ಅದನ್ನು ವಿರೋಧಿಸಿ ಆತನ ಕೈಯನ್ನು ತಳ್ಳಿದ್ದಾಳೆ. ಆದರೂ ಪೊನ್ನಪ್ಪ ವರ್ತನೆ ಮುಂದುವರೆಸಿದ್ದಾನೆ. ಇದನ್ನು ಪ್ರಶ್ನಿಸಿದ ಸಂದರ್ಭ ಹರಿತವಾದ ವಸ್ತು ಬಳಸಿ ಯುವತಿಯ ಕೈಗೆ ಚುಚ್ಚಿದ್ದು, ಪರಿಣಾಮ ಗಾಯವಾಗಿದೆ. ನಂತರ ಬಸ್ಸಿನಲ್ಲಿದ್ದವರು ಆರೋಪಿಯನ್ನು ಹಿಡಿದು ಎಚ್ಚರಿಸಿದ್ದಾರೆ.
ನಂತರ ಯುವತಿಯ ಪೋಷಕರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.