ಮಡಿಕೇರಿ, ಮೇ ೨೭: ಪ್ರತಿಷ್ಠಿತವಾದ ಪೊನ್ನಂಪೇಟೆ ಕೊಡವ ಸಮಾಜದ ಮುಂದಿನ ಸಾಲಿನ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ನಿಗದಿಯಾಗಿದ್ದು, ತಾ. ೨೯ರಂದು (ನಾಳೆ) ಮತದಾನ ನಡೆಯಲಿದೆ.

ಈ ಬಾರಿಯ ಸ್ಪರ್ಧಾಕಣ ಭಾರೀ ಪೈಪೋಟಿಯಿಂದ ಕೂಡಿದೆ. ಒಟ್ಟು ೧೨ ಮಂದಿ ನಿರ್ದೇಶಕ ಸ್ಥಾನಕ್ಕೆ ಮೊದಲು ಚುನಾವಣೆ ನಡೆಯಲಿದ್ದು, ನಂತರ ಇವರಲ್ಲಿ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ೧೨ ನಿರ್ದೇಶಕ ಸ್ಥಾನದ ಪೈಕಿ ಪುರುಷರಿಗೆ ೯ ಸ್ಥಾನ ಹಾಗೂ ಮಹಿಳೆಯರಿಗೆ ೩ ಸ್ಥಾನ ಮೀಸಲಾಗಿದೆ. ಒಟ್ಟು ೩೧೫೦ ಮತದಾರರಿದ್ದು, ಪ್ರಬಲ ಸ್ಪರ್ಧೆ ಕಂಡುಬAದಿದೆ.

ಎರಡು ತಂಡಗಳಾಗಿ ಚುನಾವಣೆಗೆ ಆಕಾಂಕ್ಷಿಗಳು ಮುಂದಾಗಿದ್ದಾರೆ. ಒಂದು ತಂಡದಲ್ಲಿ ೧೧ ಮಂದಿ ಹಾಗೂ ಮತ್ತೊಂದು ತಂಡದಲ್ಲಿ ೧೨ ಮತ್ತು ಒಬ್ಬರು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದು, ಒಟ್ಟು ೨೪ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಮಾಜದ ಹಾಗೂ ಮುಂದಿನ ಕಾರ್ಯಯೋಜನೆಗಳ ಆಶ್ವಾಸನೆಯ ಮೂಲಕ ಸ್ಪರ್ಧಿಗಳು ಪ್ರಚಾರದಲ್ಲಿದ್ದು, ಪ್ರಬಲ ಸ್ಪರ್ಧೆ ಎದುರಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ಅಭ್ಯರ್ಥಿಗಳು : ಅರಸು ನಂಜಪ್ಪ ಮೂಕಳಮಾಡ, ಅಡ್ಡಂಡ ಸುನಿಲ್ ಸೋಮಯ್ಯ, ಚೀರಂಡ ಕಂದಾ ದೇವಯ್ಯ, ಚೆಪ್ಪುಡೀರ ರಾಕೇಶ್ ದೇವಯ್ಯ, ದಿಲನ್ ಚಂಗಪ್ಪ ಪಾರುವಂಗಡ, ಬೋಡಂಗಡ ಡಿ. ಜಗದೀಶ್, ಮಾಚಂಗಡ ನಿರನ್ ಮೊಣ್ಣಪ್ಪ, ಮೂಕಳೇರ ಬಿ. ರಮೇಶ್, ಆಶಾ ಪ್ರಕಾಶ್ ಚೊಟ್ಟೆಕಾಳಪಂಡ, ಕೋಳೆರ ಡಿ. ಯಮುನ (ಭಾರತಿ) ಚೆಪ್ಪುಡೀರ ರಾಧಿಕ ಪ್ರವೀಣ್ ಒಂದು ಗುಂಪಿನಲ್ಲಿದ್ದಾರೆ.

ಮತ್ತೊAದು ಗುಂಪಿನಲ್ಲಿ ಆಲೆಮಾಡ ಸುಧೀರ್ ಕಳ್ಳಿಚಂಡ ಕಟ್ಟಿ ಪೂಣಚ್ಚ, ಕಾಳಿಮಾಡ ಎಂ. ಮೋಟಯ್ಯ, ಕೊಟ್ಟುಕತ್ತೀರ ಜಾಲಿ ಸೋಮಣ್ಣ, ಕೊಣಿಯಂಡ ಸಂಜು ಸೋಮಯ್ಯ, ಕೋಟೇರ ಕಿಶನ್ ಉತ್ತಪ್ಪ, ಚೆಪ್ಪುಡೀರ ಎ. ಕರುಣ್ ದೇವಯ್ಯ, ಬೊಳ್ಳಿಮಾಡ ಧನು ದೇವಯ್ಯ, ಹೊಟ್ಟೇಂಗಡ ಪಿ. ಗಜೇಂದ್ರ, ಚಿರಿಯಪಂಡ ಬೋಜಮ್ಮ (ಇಮ್ಮಿ ಉತ್ತಪ್ಪ), ಚೆರಿಯಂಡ ಆರ್. ಸಬಿತ, ಮೂಕಳೇರ ಕಾವ್ಯ ಕಾವೇರಮ್ಮ ಸ್ಪರ್ಧೆಯಲ್ಲಿದ್ದಾರೆ. ಕಾಟಿಮಾಡ ರಾಜಪ್ಪ ಪ್ರತ್ಯೇಕವಾಗಿ ಸ್ಪರ್ಧಿಸಿದ್ದಾರೆ.