ಮಡಿಕೇರಿ, ಮೇ ೨೮: ದೇಚೂರು ವಿದ್ಯಾಗಣಪತಿ ದೇವಾಲಯದ ೨೪ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ತಾ.೨೭ ರ ಬೆಳಿಗ್ಗೆ ನಿರ್ಮಾಲ್ಯ, ಪುಣ್ಯಾಹ ವಾಚನ, ದೇವತಾ ಪ್ರಾರ್ಥನೆ, ಬಯಲು ಆಂಜನೇಯ ಪೂಜೆ, ಅಷ್ಟçದ್ರವ್ಯ ಮಹಾಗಣಪತಿ ಮತ್ತು ನವಗ್ರಹ ಹೋಮ, ನಾಗ ಪೂಜೆ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ಹೆಚ್.ಆರ್ ಉದಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ ನಡೆದವು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನದಾನ ನೆರವೇರಿತು. ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.