ಮಡಿಕೇರಿ, ಮೇ ೨೮: ಪ್ರಧಾನಮಂತ್ರಿ ಅವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯ (ಪಿಎಂಎಫ್‌ಎAಇ) ಮೂಲ ಉದ್ದೇಶವು ಆಹಾರ ಸಂಸ್ಕರಣೆಯ ಅಸಂಘಟಿತ ಅತೀ ಸಣ್ಣ ಉದ್ಯಮ ಕ್ಷೇತ್ರದ ಕೊಡುಗೆ ಹಾಗೂ ಅವುಗಳ ಕಾರ್ಯಕ್ಷಮತೆಗೆ ತೊಡಕಾಗುತ್ತಿರುವ ಸವಾಲುಗಳನ್ನು ಗಣನೆಗೆ ತೆಗೆದು ಕೊಂಡು, ಅತೀ ಸಣ್ಣ ಉದ್ಯಮಗಳು ಸಾಮಾನ್ಯ ಸೇವೆಗಳನ್ನು ಪಡೆದು ಕೊಳ್ಳುವಂತೆ ಉತ್ತೇಜಿಸುವುದು.

ಈ ಯೋಜನೆಯಡಿ, ವೈಯಕ್ತಿಕ ಕಿರು ಆಹಾರ ಸಂಸ್ಕರಣಾ ಘಟಕಗಳ ಉನ್ನತೀಕರಣ, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಉತ್ಪಾದಕರ ಸಹಕಾರ ಸಂಘಗಳು ಹಾಗೂ ಸಹಕಾರ ಸೊಸೈಟಿಗಳಿಗೆ ಬಂಡವಾಳ ಹೂಡಿಕೆ, ಸಾಮಾನ್ಯ ಮೂಲಭೂತ ಸೌಕರ್ಯಕ್ಕಾಗಿ ಬ್ರಾö್ಯಂಡಿAಗ್ ಹಾಗೂ ಮಾರುಕಟ್ಟೆಗೆ ಬೆಂಬಲ ನೀಡಲಾಗುತ್ತದೆ. ಈ ಯೋಜನೆಯಡಿ ಒದಗಿಸುವ ಸಾಲ ಸೌಲಭ್ಯಗಳಿಗೆ ಹಾಲಿ ಇರುವ ಶೇ. ೩೫ ರಷ್ಟು ಸಹಾಯಧನಕ್ಕೆ ರಾಜ್ಯ ಸರ್ಕಾರದ ಶೇ. ೧೫ ರಷ್ಟು ಹೆಚ್ಚುವರಿ ಸಹಾಯಧನದೊಂದಿಗೆ ಒಟ್ಟು ಸಹಾಯಧನವನ್ನು ಶೇ. ೩೫ ರಿಂದ ಶೇ. ೫೦ಕ್ಕೆ (ಗರಿಷ್ಠ ಮಿತಿ ೧೫ ಲಕ್ಷ) ಹೆಚ್ಚಿಸಲಾಗಿದೆ.

ಈ ಯೋಜನೆಗೆ ಸಂಬAಧಿಸಿ ದಂತೆ ಸೂಕ್ತ ಫಲಾನುಭವಿಗಳನ್ನು ಗುರುತಿಸುವಿಕೆ, ಯೋಜನಾ ವರದಿ ಸಿದ್ಧತೆ, ಫಲಾನುಭವಿಗಳು ಸಾಲ ಪಡೆಯಲು ಬ್ಯಾಂಕ್‌ನೊAದಿಗೆ ಸಂಪರ್ಕ, ಘಟಕಗಳ ನೋಂದಣಿ ಹಾಗೂ ಕೈ ಆಸರೆ ಬೆಂಬಲ ನೀಡುವುದಕ್ಕೆ ಜಿಲ್ಲಾಮಟ್ಟಕ್ಕೆ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಶೈಕ್ಷಣಿಕ ಅರ್ಹತೆ: ಯಾವುದೇ ಕ್ಷೇತ್ರದಲ್ಲಿ ಸ್ನಾತಕ ಪದವಿ ಹೊಂದಿರ ಬೇಕು ಅಥವಾ ಸಮಾನವಾದ ಪದವಿ ಹೊಂದಿರಬೇಕು. ಆಹಾರ ಸಂಸ್ಕರಣಾ ಕೈಗಾರಿಕೆ/ ಬ್ಯಾಂಕಿAಗ್, ಡಿಪಿಆರ್ ಸಿದ್ಧಪಡಿಸುವಿಕೆಯಲ್ಲಿ ಹಾಗೂ ತರಬೇತಿಯಲ್ಲಿ ಅನುಭವವುಳ್ಳ ವ್ಯಕ್ತಿಗಳನ್ನೂ ಪರಿಗಣಿಸಲಾಗುವುದು.

ಸಂಪನ್ಮೂಲ ವ್ಯಕ್ತಿಗಳಿಗೆ ನೀಡಲಾಗುವ ಹಣ ಪಾವತಿಯನ್ನು ಅವರು ಬೆಂಬಲಿಸಿದAತಹ ಪ್ರತಿ ಫಲಾನುಭವಿಯನ್ನು ಆಧರಿಸಿ, ಬ್ಯಾಂಕಿನಿAದ ಸಾಲ ಮಂಜೂರಾದ ನಂತರ ಬ್ಯಾಂಕಿನಿAದ ಮಂಜೂರಾದ ಪ್ರತಿ ಸಾಲವನ್ನು ಆಧರಿಸಿ ರೂ. ೨೦ ಸಾವಿರಗಳನ್ನು ೨ ಕಂತುಗಳಲ್ಲಿ ಪಾವತಿಸಲಾಗುವುದು. ಈ ಪೈಕಿ ಶೇ. ೫೦ ರಷ್ಟು ಮೊತ್ತವನ್ನು ಬ್ಯಾಂಕಿನಿAದ ಸಾಲ ಮಂಜೂರಾದ ನಂತರ ಹಾಗೂ ಉಳಿದ ಶೇ.೫೦ ಹಣವನ್ನು ಘಟಕಗಳು ಜಿಎಸ್‌ಟಿ ಮತ್ತು ಉದ್ಯೋಗ್ ಆಧಾರ್ ನೋಂದಣಿಯನ್ನು ಪಡೆದ ನಂತರ ಎಫ್‌ಎಸ್‌ಎಸ್‌ಎಐ (ಈSSಂI) ವತಿ ಯಿಂದ ಪ್ರಮಾಣೀಕೃತ ಅನುಸರಣೆ ಯನ್ನು ಪಡೆದ ನಂತರ ನೀಡ ಲಾಗುವುದು. ಆದ್ದರಿಂದ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪ ರ್ಕಿಸಿ ಅರ್ಜಿಯನ್ನು ಸಲ್ಲಿಸು ವಂತೆ ಜಂಟಿ ಕೃಷಿ ನಿರ್ದೇಶಕರಾದ ಶಬಾನಾ ಎಂ.ಶೇಕ್ ಅವರು ತಿಳಿಸಿದ್ದಾರೆ.