ವಾಹನ ಅವಘಡದಲ್ಲಿ ೭ ಯೋಧರು ಸಾವು
ಲಡಾಕ್, ಮೇ ೨೭: ಜಮ್ಮು-ಕಾಶ್ಮೀರದ ಲಡಾಕ್‌ನಲ್ಲಿ ಶುಕ್ರವಾರ ಭಾರೀ ಅಪಘಾತ ಸಂಭವಿಸಿದ್ದು ೭ ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ೨೬ ಮಂದಿ ಸೈನಿಕರು ಸೇನಾ ವಾಹನದಲ್ಲಿ ಸಾಗುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಲಡಾಕ್‌ನಲ್ಲಿ ಶ್ಯೋಕ್ ನದಿಗೆ ಬಿದ್ದಿದೆ. ೨೬ ಮಂದಿ ಸೈನಿಕರ ತಂಡವು ಪಾರ್ತಾಪುರದ ಟ್ರಾನ್ಸಿಟ್ ಕ್ಯಾಂಪ್‌ನಿAದ ಉಪ ವಲಯದ ಹನೀಫ್‌ನ ಮುಂದಿನ ಸ್ಥಳಕ್ಕೆ ತೆರಳುತ್ತಿತ್ತು. ಅವಘಡ ಪರಿಣಾಮ ಎಲ್ಲಾ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಎಲ್ಲಾ ೨೬ ಸೈನಿಕರನ್ನು ಸೇನಾ ಕ್ಷೇತ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಲೇಹ್‌ನಿಂದ ಶಸ್ತçಚಿಕಿತ್ಸಾ ತಂಡಗಳನ್ನು ಪಾರ್ತಾಪುರಕ್ಕೆ ರವಾನಿಸಲಾಯಿತು. ಇವರಲ್ಲಿ ಏಳು ಮಂದಿ ಹುತಾತ್ಮರಾಗಿದ್ದಾರೆ. ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಒದಗಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ವೆಸ್ಟರ್ನ್ ಕಮಾಂಡ್‌ಗೆ ಸ್ಥಳಾಂತರಿಸಲು ವಾಯುಪಡೆಯಿಂದ ನೆರವನ್ನು ಕೋರಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ವಿಧಾನ ಪರಿಷತ್‌ಗೆ ಅವಿರೋಧ ಆಯ್ಕೆ
ಬೆಂಗಳೂರು, ಮೇ ೨೭: ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವುದೇ ಪಕ್ಷ ಹೆಚ್ಚುವರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದ ಕಾರಣ ನಿರೀಕ್ಷೆಯಂತೆ ಏಳೂ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಘೋಷಿಸಿದ್ದಾರೆ. ಒಟ್ಟು ೭ ಸ್ಥಾನಗಳ ಪೈಕಿ ಬಿಜೆಪಿಗೆ ೪, ಕಾಂಗ್ರೆಸ್‌ಗೆ ೨ ಹಾಗೂ ಜೆಡಿಎಸ್‌ಗೆ ಒಂದು ಸ್ಥಾನ ದಕ್ಕಿದೆ. ಬಿಜೆಪಿಯಿಂದ ಛಲವಾದಿ ನಾರಾಯಣಸ್ವಾಮಿ, ಹೇಮಲತಾ ನಾಯಕ್, ಲಕ್ಷö್ಮಣ ಸವದಿ ಮತ್ತು ಕೇಶವ್ ಪ್ರಸಾದ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ನಾಗರಾಜ್ ಯಾದವ್ ಮತ್ತು ಅಬ್ದುಲ್ ಜಬ್ಬಾರ್ ಹಾಗೂ ಜೆಡಿಎಸ್‌ನಿಂದ ಟಿ.ಎ. ಶರವಣ ಅವರು ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇಂದು ನಾಮಪತ್ರ ವಾಪಸು ಪಡೆಯಲು ಕೊನೆಯ ದಿನವಾಗಿತ್ತು. ಆದರೆ, ಏಳು ಸ್ಥಾನಗಳಿಗೆ ಏಳು ಜನರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಘೋಷಣೆ ಮಾಡಿದ್ದಾರೆ.
೨೦ಕ್ಕೂ ಹೆಚ್ಚು ರಾಷ್ಟçಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು
ಲಂಡನ್, ಮೇ ೨೭: ೨೦ಕ್ಕೂ ಹೆಚ್ಚು ರಾಷ್ಟçಗಳಲ್ಲಿ ಸುಮಾರು ೨೦೦ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಪ್ರಸ್ತುತ ಸಾಂಕ್ರಾಮಿಕ ರೋಗ ಹೇಗೆ ಹರಡುತ್ತಿದೆ ಎಂಬುದು ಸೇರಿದಂತೆ ಅನೇಕ ಉತ್ತರ ಸಿಗದ ಪ್ರಶ್ನೆಗಳಿವೆ. ಆದರೆ, ಸಾಂಕ್ರಾಮಿಕ ಹೆಚ್ಚಾಗಲು ಯಾವುದೇ ಜೆನಿಟಿಕ್ ಬದಲಾವಣೆ ಕಾರಣ ಎಂಬುದಕ್ಕೆ ಯಾವುದೇ ಸಾಕ್ಷö್ಯಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮನುಷ್ಯನಲ್ಲಿ ಇದು ಸಾಕಷ್ಟು ಬದಲಾವಣೆಗೆ ಕಾರಣವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಡಾ. ಸೈಲ್ವಿ ಬ್ರಿಯಾಂಡ್ ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ ಯುರೋಪ್, ಅಮೇರಿಕಾ, ಇಸ್ರೆಲ್ ಮತ್ತು ಆಸ್ಟೆçÃಲಿಯಾದಲ್ಲಿ ಕಾಣಿಸಿಕೊಂಡಿದ್ದ ಮಂಕಿಪಾಕ್ಸ್ ಇತ್ತೀಚಿಗೆ ಸ್ಪೇನ್ ಮತ್ತು ಬೆಲ್ಜಿಯಂನಲ್ಲಿ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಸಲಹೆಗಾರರೊಬ್ಬರು ಹೇಳಿದ್ದಾರೆ.
ವಿಜಯ್ ಸಿಂಗ್ಲಾ ನ್ಯಾಯಾಂಗ ಬಂಧನಕ್ಕೆ
ಚAಡೀಗಢ, ಮೇ ೨೭: ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಪಾಲಾಗಿರುವ ಪಂಜಾಬ್‌ನ ವಜಾಗೊಂಡ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಮೊಹಾಲಿ ನ್ಯಾಯಾಲಯ ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ರಾಜ್ಯ ಸರ್ಕಾರದಲ್ಲಿ ಆರೋಗ್ಯ ಖಾತೆಯನ್ನು ಹೊಂದಿದ್ದ ಸಿಂಗ್ಲಾ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಕಳೆದ ಮಂಗಳವಾರ ಬಂಧಿಸಲಾಗಿತ್ತು. ಆರೋಗ್ಯ ಇಲಾಖೆಯ ಟೆಂಡರ್ ಮತ್ತು ಖರೀದಿಗಳಲ್ಲಿ ‘ಶೇಕಡಾ ೧ ರಷ್ಟು ಕಮಿಷನ್’ಗೆ ಬೇಡಿಕೆಯಿಟ್ಟ ಆರೋಪದ ಮೇಲೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಿಂಗ್ಲಾ ಅವರನ್ನು ತಮ್ಮ ಸಂಪುಟದಿAದ ವಜಾಗೊಳಿಸಿದ್ದರು. ಇದಕ್ಕೂ ಮುನ್ನ ನ್ಯಾಯಾಲಯ, ಆರೋಪಿ ಸಿಂಗ್ಲಾ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಪೊಲೀಸ್ ಕಸ್ಟಡಿ ಇಂದು ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಯನ್ನು ೧೪ ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸಿಂಗ್ಲಾ ಅವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದ ಮತ್ತೊಬ್ಬ ಆರೋಪಿ ಪರ್ದೀಪ್ ಕುಮಾರ್ ಅವರನ್ನು ಸಹ ಕೋರ್ಟ್ ಜೂನ್ ೧೦ ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಗುಂಡಿಕ್ಕಿ ಕಾಡಾನೆ ಹತ್ಯೆ
ಹಾಸನ, ಮೇ ೨೭: ಜಿಲ್ಲೆಯ ಬೇಲೂರು ತಾಲೂಕಿನ ಗುರ್ಗಿಹಳ್ಳಿ ಗ್ರಾಮದ ಬಳಿ ದುಷ್ಕರ್ಮಿಗಳು ೧೫ ವರ್ಷದ ಕಾಡಾನೆಯೊಂದನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆನೆಯ ಕುತ್ತಿಗೆ ಮತ್ತು ಎದೆ ಭಾಗದಲ್ಲಿ ಗಾಯಗಳಾಗಿದ್ದು, ಕಳೆದ ರಾತ್ರಿ ಬೇಟೆಗಾರರು ದಂತಕ್ಕಾಗಿ ಆನೆಯನ್ನು ಭೇಟಿಯಾಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಗುರ್ಗಿಹಳ್ಳಿ ರೈತ ಸೈಯದ್ ಸಾಥರ್ ಎಂಬವರ ಭತ್ತದ ಗದ್ದೆಯಲ್ಲಿ ಆನೆ ಸಾವನ್ನಪ್ಪಿರುವುದು ಕಂಡುಬAದಿದೆ. ವಿನಯ್ ಕುಮಾರ್ ನೇತೃತ್ವದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಆನೆಯನ್ನು ಪರಿಶೀಲಿಸಿದ್ದಾರೆ. ಬೆಳೆದುನಿಂತಿದ್ದ ಬೆಳೆಯನ್ನು ರಕ್ಷಿಸಲು ದುಷ್ಕರ್ಮಿಗಳು ಆನೆ ಹತ್ಯೆ ಮಾಡಿರಬಹುದೆಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ತನಿಖೆ ನಂತರ ಭೇಟೆ ಕಾರಣದಿಂದ ಆನೆ ಹತ್ಯೆಯಾಗಿದೆ ಎಂಬುದು ತಿಳಿದುಬಂದಿದೆ. ಡಾ. ಶ್ರೇಯಸ್ ಮತ್ತು ಡಾ. ಗಂಗಾಧರ್ ಸ್ಥಳದಲ್ಲಿಯೇ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನಂತರ ಆನೆಯನ್ನು ಅರಣ್ಯದಲ್ಲಿ ಹೂಳಲಾಗಿದೆ.
ಪೆಟ್ರೋಲ್ ಬಂಕ್ ಮಾಲೀಕರಿಂದ ಪ್ರತಿಭಟನೆಗೆ ನಿರ್ಧಾರ
ಬೆಂಗಳೂರು, ಮೇ ೨೭: ಪೆಟ್ರೋಲಿಯಂ ಉತ್ಪನ್ನಗಳ ದರ ದಿಢೀರ್ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರಿಗೆ ನಷ್ಟ ಉಂಟಾಗಿದ್ದು, ಇದರಿಂದ ತೀವ್ರವಾಗಿ ಅಸಮಾಧಾನಗೊಂಡಿರುವ ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟವು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ. ೩೧ ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ. ಡಿಪೋಗಳಿಂದ ತೈಲ ಖರೀದಿಸದೆ ಪ್ರತಿಭಟನೆ ನಡೆಸಲು ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟವು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿದ ಒಕ್ಕೂಟದ ಅಧ್ಯಕ್ಷ ಕೆ.ಎಂ. ಬಸವೇಗೌಡ ಅವರು, ಕೇಂದ್ರ ಸರ್ಕಾರ ಕಳೆದ ವಾರ ದಿಢೀರ್ ರೂ. ೧೦ ರವರೆಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ದರವನ್ನು ಕಡಿತ ಮಾಡಿತ್ತು. ಇದರಿಂದ ಹಿಂದಿನ ದಿನವೇ ಸಾವಿರಾರು ಲೀಟರ್ ತೈಲ ಖರೀದಿಸಿಟ್ಟಿದ್ದ ಪ್ರತಿ ಬಂಕ್‌ಗಳಿಗೆ ಕನಿಷ್ಟ ರೂ. ೫ ರಿಂದ ೨೫ ಲಕ್ಷದವರೆಗೂ ನಷ್ಟವಾಗಿದೆ. ಈ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಬೇಕು ಎಂದು ಒತ್ತಾಯಿಸಲು ೧ ದಿನ ಡಿಪೋಗಳಿಂದ ತೈಲ ಖರೀದಿಸದೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು. ಪೆಟ್ರೋಲ್ ಬಂಕ್ ಮಾಲೀಕರು ತೈಲ ಖರೀದಿ ನಿಲ್ಲಿಸಿದರೆ ಪೆಟ್ರೋಲ್ ಬಂಕ್‌ಗಳ ಮುಂದೆ ನೋ ಸ್ಟಾಕ್ ಫಲಕ ಹಾಕಲಾಗುತ್ತದೆ. ಆದ್ದರಿಂದ ಪ್ರತಿಭಟನೆ ನಡೆಸುವ ತಾ. ೩೧ ರ ಸೋಮವಾರ ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ
ಬೆಂಗಳೂರು, ಮೇ ೨೭: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ವಂದಿತಾ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಿ. ರವಿಕುಮಾರ್ ಅವರ ವಯೋ ನಿವೃತ್ತಿಯಿಂದ ತಾ. ೩೧ ರಂದು ತೆರವಾಗಲಿರುವ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ ೧೯೮೬ನೇ ಸಾಲಿನ ತಂಡದ ವಂದಿತಾ ಶರ್ಮಾ ನೇಮಕಗೊಳ್ಳಲಿದ್ದಾರೆ.