ಮಡಿಕೇರಿ, ಮೇ ೨೬: ರೋಟರಿ ಮಡಿಕೇರಿ ವತಿಯಿಂದ ನಗರದ ವಿವಿಧ ಅಂಗನವಾಡಿಗಳಿಗೆ ಕುರ್ಚಿಗಳನ್ನು ವಿತರಿಸಲಾಯಿತು. ಗೌಳಿಬೀದಿಯ ಸುಮಾರು ೧೫ ಪುಟಾಣಿಗಳಿಗೆ ಕುಳಿತುಕೊಳ್ಳಲು ಅನುಕೂಲವಾಗಲು ಕುರ್ಚಿಗಳನ್ನು ನೀಡಲಾಯಿತು.
ರೋಟರಿ ಮಡಿಕೇರಿಯ ಅಧ್ಯಕ್ಷ ಎನ್.ಡಿ. ಅಚ್ಚಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ನಗರಸಭಾ ಸದಸ್ಯ ಚಂದ್ರು, ರೋಟರಿ ಕಾರ್ಯದರ್ಶಿ ಲಲಿತಾ ರಾಘವನ್, ಸಮುದಾಯ ಸೇವಾ ನಿರ್ದೇಶಕಿ ರೋಟರಿಯನ್ ಗೀತಾ ಗಿರೀಶ್, ಕೆ.ಸಿ.ಕರಿಯಪ್ಪ, ಪಾರ್ವತಿ ಚೀಯಣ್ಣ, ಮಲ್ಲಿಗೆ ಪೈ, ಅಂಗನವಾಡಿ ಕಾರ್ಯಕರ್ತೆ ಗೀತ ಮತ್ತಿತರರು ಹಾಜರಿದ್ದರು.
ಸ್ಟೀವರ್ಟ್ ಹಿಲ್ನಲ್ಲಿರುವ ಅಂಗನವಾಡಿಗೆ ಕೂಡ ರೋಟರಿ ಮಡಿಕೇರಿ ವತಿಯಿಂದ ಕುರ್ಚಿಗಳನ್ನು ವಿತರಿಸಲಾಯಿತು. ಅಧ್ಯಕ್ಷ ಎನ್.ಡಿ.ಅಚ್ಚಯ್ಯ ಅವರ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ಗೀತಾ ಗಿರೀಶ್, ಲಲಿತಾ ರಾಘವನ್, ಪಾರ್ವತಿ ಚೀಯಣ್ಣ, ಮಲ್ಲಿಗೆ ಪೈ ಹಾಗೂ ಅಂಗನವಾಡಿ ಕಾರ್ಯಕರ್ತೆ ಮುತ್ತಮ್ಮ ಇದ್ದರು.