ಮಡಿಕೇರಿ, ಮೇ ೨೫ : ಕುಶಾಲನಗರ ವಲಯ ಪ್ರದೇಶದಲ್ಲಿ ತೋಟದ ಬೆಳೆಗಳನ್ನು ಕೃಷಿ ಫಸಲುಗಳನ್ನು ನಾಶ ಮಾಡುತ್ತಿರುವ ನಾಲ್ಕು ಆನೆಗಳನ್ನು ಸೆರೆ ಹಿಡಿಯಲು ರಾಜ್ಯದ ಅರಣ್ಯ ಇಲಾಖಾಧಿಕಾರಿಗಳು ಅನುಮತಿ ನೀಡಿದ್ದಾರೆ. ಈ ಸಂಬAಧ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎನ್.ಎನ್. ಮೂರ್ತಿ ಅವರ ಮೂಲಕ ಪ್ರಸ್ತಾವನೆ ಕಳುಹಿಸಲಾಗಿದ್ದು, ಇದಕ್ಕೆ ಹಿರಿಯ ಅಧಿಕಾರಿಗಳು ಸಮ್ಮತಿಯಿತ್ತಿದ್ದಾರೆ ಎಂದು ಮಡಿಕೇರಿಯ ಅರಣ್ಯ ಉಪಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಇದರೊಂದಿಗೆ ಎರಡು ಆನೆ ಗುಂಪುಗಳ ಎರಡು ಹೆಣ್ಣು ನಾಯಕಿ ಆನೆಗಳಿಗೆ ಕಾಲರ್ ಅಳವಡಿಸುವ ಕಾರ್ಯಕ್ಕೂ ರಾಜ್ಯ ಹಿರಿಯ ಅರಣ್ಯಾಧಿಕಾರಿಗಳು ಅನುಮತಿ ನೀಡಿದ್ದು, ಸದ್ಯದಲ್ಲಿಯೇ ಕಾರ್ಯಾಚರಣೆ ಪ್ರಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಕುಶಾಲನಗರ, ಸುಂಟಿಕೊಪ್ಪ, ಅಭ್ಯತ್‌ಮಂಗಲ, ವಾಲ್ನೂರ್, ತ್ಯಾಗತ್ತೂರ್, ಅಮ್ಮತ್ತಿ, ಪಾಲಿಬೆಟ್ಟ ಸೇರಿದಂತೆ ಸುಮಾರು ೬೦ ಕಾಡಾನೆಗಳು ಸಂಚರಿಸುತ್ತಿವೆ. ರೈತ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಅರಣ್ಯ ಇಲಾಖೆಗೆ ಮನವಿಯೊಂದನ್ನು ನೀಡಿ, ಈ ಎಲ್ಲಾ ಕಾಡಾನೆಗಳನ್ನು ಸೆರೆಹಿಡಿಯಬೇಕೆಂದು ಕೋರಿದ್ದರು. ಆದರೆ, ಇಷ್ಟು ಆನೆಗಳನ್ನು ಸೆರೆಹಿಡಿಯಲು ಅನುಮತಿ ದೊರಕುವುದಿಲ್ಲ ಇದೀಗ ನಾಲ್ಕು ಆನೆಗಳನ್ನು ಸೆರೆಹಿಡಿಯಲಾಗುತ್ತಿದೆ.

ಅರಣ್ಯ ಇಲಾಖೆಗೆ ಸೇರಿದ ಸಾಕಾನೆಗಳನ್ನು ಬಳಿಸಿಕೊಂಡು ಈ ಕಾರ್ಯ ಮಾಡಲಾಗುತ್ತದೆ. ಮತ್ತು ಬರುವ ಔಷಧಿ ಪ್ರಯೋಗ ದಿಂದ ಆನೆಗಳನ್ನು ಸೆರೆ ಹಿಡಿದು ಬಳಿಕ ಲಾರಿಗಳಲ್ಲಿ ದುಬಾರೆ ಅರಣ್ಯ ಶಿಬಿರಕ್ಕೆ ಒಯ್ಯಲಾಗುತ್ತದೆ ಅಲ್ಲಿ ‘‘ಕ್ರಾಲ್’’ಗಳಲ್ಲಿ ಇರಿಸಿ ಈ ಆನೆಗಳನ್ನು ಪಳಗಿಸಲಾಗುತ್ತದೆ ಎಂದು ಪೂವಯ್ಯ ವಿವರಿಸಿದರು.

ಕಾಲರಿಂಗ್ ಅಳವಡಿಸುವಾಗ ಆನೆಗಳ ನಾಯಕಿ ಹೆಣ್ಣು ಆನೆಯನ್ನು ಮತ್ತು ಬರಿಸುವ ಔಷಧಿ ಪ್ರಯೋಗದಿಂದ ಕೆಲ ಸಮಯ ಪ್ರಜ್ಞೆ ತಪ್ಪಿಸಿ ಕಾಲರ್ ಅಳವಡಿಸಲಾಗುತ್ತದೆ. ಬಳಿಕ ಅದೇ ಸ್ಥಳದಲ್ಲಿ ಬಿಡಲಾಗುತ್ತದೆ ಎಂದರು. ಈ ಆನೆಗಳ ನಾಯಕಿ ಹೆಣ್ಣಾನೆಗೆ ಕಾಲರ್ ಅಳವಡಿಸುವುದರಿಂದ ಆ ಆನೆಯ ಜೊತೆಯಲ್ಲಿ ಗುಂಪುಗಳಲ್ಲಿ ತೆರಳುವ ಎಲ್ಲಾ ಆನೆಗಳ ಸಂಚಾರ ಸ್ಥಳಗಳು ಸುಲಭದಲ್ಲಿ ಪತ್ತೆ ಆಗುತ್ತವೆ. ಇದರಿಂದ ಅರಣ್ಯ ಇಲಾಖೆಯೂ ಆಗಿಂದಾಗ ಕಾಲರ್‌ನಿಂದ ಲಭ್ಯವಾಗುವ ಸಂದೇಶ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬಹುದಾಗಿದೆ ಹಾನಿಗೀಡಾಗಿದ್ದವು. ಇದೇ ರೀತಿ ೧೭೯ ಸಾಕು ಪ್ರಾಣಿಗಳು ಆನೆಗಳ ಧಾಳಿಯಿಂದ ಸಾವಿಗೀಡಾಗಿದ್ದವು. ಸುಮಾರು ರೂ. ೩೨ ಲಕ್ಷದಷ್ಟು ಪರಿಹಾರ ಒದಗಿಸಲಾಗಿದೆ; ಆನೆ ಧಾಳಿಯಿಂದ ೨೫ ಮಂದಿ ಗಾಯಗೊಂಡಿದ್ದು, ಅವರಿಗೆ ರೂ. ೪೦ ಲಕ್ಷ ಪರಿಹಾರ ಒದಗಿಸಲಾಗಿದೆ. ಇನ್ನು ಕೆಲವರು ಆನೆ ಧಾಳಿಯಿಂದ ಕೆಲಸ ಮಾಡಲು ಸಾಧ್ಯವಿಲ್ಲದ ಹಿನ್ನೆಲೆ ೨೦ ಮಂದಿಗೆ ಮಾಸಾಶನಕ್ಕಾಗಿ ರೂ. ೪ಲಕ್ಷ ೨೨ ಸಾವಿರವನ್ನು ನೀಡಲಾಗಿದೆ.

ಇನ್ನೂ ಸುಮಾರು ೨೭ ಪ್ರಕರಣಗಳಲ್ಲಿ ಆಸ್ತಿ ನಷ್ಟ ಉಂಟಾಗಿದ್ದು, ಇದಕ್ಕಾಗಿ ರೂ. ೨೧ ಲಕ್ಷ ಪರಿಹಾರ ನೀಡಲಾಗಿದೆ.

ಮುಂದಿನ ಯೋಜನೆಗಳು

ಆನೆ ಧಾಳಿ ಪ್ರಕರಣಗಳನ್ನು ತಡೆಗಟ್ಟಲು ಅರಣ್ಯ ಇಲಾಖೆಯು ಮುಂದಿನ ಕೆಲವು ಯೋಜನೆಗಳನ್ನು ಕೈಗೊಳ್ಳಲು ತಯಾರಿ ನಡೆಸಿದೆ. ಈ ಕುರಿತು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಮತ್ತು ಮಡಿಕೇರಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಕೆ.ಟಿ. ಪೂವಯ್ಯ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಬಹುತೇಕ ರೈಲ್ವೇ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಬೇಲಿ ನಿರ್ಮಾಣ ಮಾಡುವ ಯೋಜನೆ ಇದೆ. ಇನ್ನೂ ಕೆಲವು ಕಡೆ ಸೋಲಾರ್ ತಂತಿ ಬೇಲಿಯನ್ನು ಅಳವಡಿಸಲಾಗುತ್ತದೆ.

(ಮೊದಲ ಪುಟದಿಂದ) ಇನ್ನು ಕೆಲವು ಪ್ರದೇಶಗಳಲ್ಲಿ ಆನೆ ಕಂದಕಗಳನ್ನು ತೋಡಲಾಗುತ್ತದೆ ಜೊತೆಗೆ ಕ್ಷಿಪ್ರ ರಕ್ಷಣಾ ಪಡೆ ಮೂಲಕ ತುರ್ತು ಸಂದರ್ಭಗಳಲ್ಲಿ ಸ್ಥಳಕ್ಕೆ ಧಾವಿಸಿ ತೋಟಗಳಿಗೆ, ಗ್ರಾಮಗಳಿಗೆ ನುಗ್ಗಿದ್ದ ಆನೆಗಳನ್ನು ತೋಟಗಳಿಂದ ಅರಣ್ಯಕ್ಕೆ ಓಡಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ.

ಈ ಎಲ್ಲಾ ಕಾರ್ಯಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಈಗಾಗಲೇ ಈ ಬಗ್ಗೆ ಹಸಿರು ನಕ್ಷೆ ತಯಾರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ಮಾಹಿತಿಯಿತ್ತಿದ್ದಾರೆ. ಜೊತೆಗೆ ವಿಶೇಷ ತಂಡಗಳನ್ನು ಕೂಡ ರಚಿಸುವ ಮೂಲಕ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ಆನೆ ಹಾವಳಿ ತಡೆಗಟ್ಟಲು ಕಾರ್ಯಾಚರಣೆ ಮಾಡಲು ಸನ್ನದ್ಧಗೊಳಿಸಲಾಗುತ್ತದೆ ಎಂದು ಅವರು ವಿವರಿಸಿದರು. ಸದ್ಯಕ್ಕೆ ಸಿಬ್ಬಂದಿಯ ಕೊರತೆ ಇದೆ, ಸಿಬ್ಬಂದಿಯನ್ನು ನೂತನವಾಗಿ ನೇಮಿಸಬೇಕಾಗುತ್ತದೆ. ಹೆಚ್ಚಿನ ಸಿಬ್ಬಂದಿಗಳಿದ್ದರೆ, ಆನೆ - ಮಾನವ ಸಂಘರ್ಷವನ್ನು ತಡೆಗಟ್ಟಲು ಅನುಕೂಲವಾಗುತ್ತದೆ ಈ ದಿಸೆಯಿಂದಲೂ ಪ್ರಯತ್ನ ನಡೆಸಲಾಗುತ್ತದೆ ಎಂದರು.