ಮಡಿಕೇರಿ, ಮೇ ೨೫: ಕೊಡಗು ಸೇರಿದಂತೆ ರಾಜ್ಯದ ಬಹುತೇಕ ಗಡಿ ಜಿಲ್ಲೆಗಳಲ್ಲಿ ಸಮಸ್ಯೆಗಳಿವೆ. ಇದು ದೀಪದ ಕೆಳಗೆ ಕತ್ತಲು ಎಂಬAತಾ ಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಬೇಸರ ವ್ಯಕ್ತಪಡಿಸಿದರು.

ನಗರದ ಕಾವೇರಿ ಕಲಾಕ್ಷೇತ್ರ ದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕೊಡಗು ಜಿಲ್ಲಾ ಲೇಖಕ ಹಾಗೂ ಕಲಾವಿದರ ಬಳಗದ ವತಿಯಿಂದ ಆಯೋಜಿಸಿದ್ದ ಗಡಿ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ತಾನು ೫ ಗಡಿ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದು, ಅಲ್ಲಿನ ಸಮಸ್ಯೆ ತಿಳಿದಿದೆ. ಬೌಗೋಳಿಕವಾಗಿ ಸುಂದರ ಜಿಲ್ಲೆಯಾಗಿರುವ ಕೊಡಗಿನಲ್ಲಿ ಅನೇಕ ಸಮಸ್ಯೆಗಳಿವೆ. ಗಡಿ ಜಿಲ್ಲೆಗಳು ಗಂಭೀರ ತೊಂದರೆ ಗಳನ್ನು ಅನುಭವಿಸುತ್ತಿವೆ. ಇದನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಭಾಷೆ ಬಗ್ಗೆ ಕೀಳರಿಮೆ ಇರಬಹುದು. ಇತ್ತೀಚೆಗೆ ಕೆನಾಡ ಸಂಸತ್ತಿನಲ್ಲಿ ಕನ್ನಡ ಮಾತನಾಡಿರುವುದು ಭಾಷೆ ಮೇಲಿನ ಪ್ರೇಮವನ್ನು ಸಾಬೀತು ಪಡಿಸಿದೆ. ಭಾವನೆ ಬಿಚ್ಚಿಡಲು ಭಾಷೆಯೇ ಸಾಧನವಾಗಿದ್ದು ಮಾತೃ ಭಾಷೆಯನ್ನು ಗೌರವಿಸುವಂತೆ ಕರೆ ನೀಡಿದರು. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳ ಲಾಗುತ್ತದೆ ಎಂದು ಭರವಸೆ ನೀಡಿದರು.

ವಕೀಲ ಹಾಗೂ ಸಾಹಿತಿ ವಿದ್ಯಾಧರ್ ಮಾತನಾಡಿ, ಗಡಿ ಭಾಗಗಳು ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಇತರ ಭಾಷೆಗಳ ದಾಳಿಯಿಂದ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳು ನಲುಗುತ್ತಿವೆ ಇದರಿಂದ ಭಾಷೆ ಅಸ್ತಿತ್ವ ಕಳೆದುಕೊಂಡAತಾಗುತ್ತದೆ ಎಂದು ಹೇಳಿದರು. ಗಡಿಜಿಲ್ಲೆಗಳಲ್ಲಿ ಮೂಲಭೂತ ಸಮಸ್ಯೆ ದೂರವಾಗಿ ಅಭಿವೃದ್ಧಿಗೊಳ್ಳಬೇಕು. ಆಡಳಿತ ಈ ಬಗ್ಗೆ ಮುತುವರ್ಜಿವಹಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಸ್ತಿçÃಶಕ್ತಿ ಒಕ್ಕೂಟದ ಅಧ್ಯಕ್ಷೆ ರೆಹನಾ ಸುಲ್ತಾನ್ ಕನ್ನಡಾಭಿಮಾನ ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಲೇಖಕರ ಹಾಗೂ ಕಲಾವಿದರ ಬಳಗದ ಅಧ್ಯಕ್ಷ ಕೇಶವ ಕಾಮತ್ ಅಧ್ಯಕ್ಷತೆ ವಹಿಸಿದ್ದರು.