ಮಡಿಕೇರಿ, ಮೇ ೨೫: ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ನಡಿಕೇರಿಯಲ್ಲಿ ಸಂಭ್ರಮದ ಬೋಡ್ ನಮ್ಮೆ ಜರುಗಿತು. ಅಲ್ಲಿನ ಶ್ರೀ ತಲೆಖಿಲೇಶ್ವರ ದೇವರ ವಾರ್ಷಿಕ ಆಚರಣೆ ಪರಂಪರಾಗತವಾಗಿ ಜರುಗಿತು. ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದಾಗಿ ಈ ಬೋಡ್ ನಮ್ಮೆ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಇಡೀ ಗ್ರಾಮ ವ್ಯಾಪ್ತಿಯ ಜನರು ಇದರಲ್ಲಿ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯೊಂದಿಗೆ ಆಚರಿಸಲ್ಪಟ್ಟಿತು. ತಾ. ೧೯ರಿಂದ ಹಬ್ಬಕ್ಕೆ ಚಾಲನೆ ದೊರೆತಿದ್ದು, ತಾ. ೨೩ರಂದು ದರ್ಶನ, ನಿನ್ನೆ ವಿವಿಧ ಕಳಿ ನಡೆಯಿತು. ಚೂಳೆ, ಕೋಡಂಗಿ, ಸೇಲ್ವೆ, ಬೋಳೆಭಕ್ತ, ತಾಪರೆ, ಕೂಟಕಳಿ, ಪಟ್ಟಕಳಿ, ವಡ್ಡಡ ತಿಮ್ಮ ಮತ್ತಿತರ ವೇಷಧಾರಿಗಳು ಗಮನ ಸೆಳೆದರು.

ಇಂದು ಪೊಲಂದರೆ, ಭಂಡಾರ ಸಹಿತ ಮನೆ ಮನೆಗೆ ತೆರಳುವುದು, ಸಂಜೆ ನಡಿಕೇರಿಯ ಬೋಕಂಡ ಬಂಡ್‌ಕಳದಲ್ಲಿ ಬಂಡ್‌ಕಳ, ಕುದುರೆ ಇತ್ಯಾದಿ ಕಾರ್ಯಗಳು ಸಂಪ್ರದಾಯಬದ್ಧವಾಗಿ ನಡೆದವು.