ಸೋಮವಾರಪೇಟೆ, ಮೇ ೨೪: ಮಡಿಕೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಆರಾಧನಾ ಸಮಿತಿಗೆ ನೂತನವಾಗಿ ಸದಸ್ಯರುಗಳನ್ನು ನೇಮಕಗೊಳಿಸಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

ಕ್ಷೇತ್ರದ ಶಾಸಕರು ಅಧ್ಯಕ್ಷರಾಗಿರುವ ಆರಾಧನಾ ಸಮಿತಿಗೆ ಸದಸ್ಯರುಗಳನ್ನಾಗಿ ಸಿದ್ದಲಿಂಗಪುರ ಗ್ರಾಮದ ಹೆಚ್.ಸಿ. ರಾಮಕೃಷ್ಣ, ಕೊಡ್ಲಿಪೇಟೆಯ ಡಿ. ಭಗವಾನ್, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಬಸವನಹಳ್ಳಿಯ ಬಿ.ಕೆ. ಮೋಹನ್ ಅವರುಗಳನ್ನು ಆಯ್ಕೆ ಮಾಡಲಾಗಿದೆ.

ಇದರೊಂದಿಗೆ ಸಮಿತಿಯ ಸದಸ್ಯರುಗಳಾಗಿ ಜಿ.ಪಂ. ಇಂಜಿನಿಯರಿAಗ್ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು, ಮಡಿಕೇರಿ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಭಿಯಂತರರು, ಸದಸ್ಯ ಕಾರ್ಯದರ್ಶಿಯನ್ನಾಗಿ ಮಡಿಕೇರಿ ತಹಶೀಲ್ದಾರ್‌ರನ್ನು ನೇಮಕಗೊಳಿಸಿ, ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಎಲ್. ವರಲಕ್ಷಿö್ಮÃ ಅವರು ಆದೇಶ ಹೊರಡಿಸಿದ್ದಾರೆ.