*ಗೋಣಿಕೊಪ್ಪ, ಮೇ ೨೪: ಆಟೋ ಮಗುಚಿ ಮೃತಪಟ್ಟ ದೇವರ ಮಂಡಲ ಸೇವಾ ಪ್ರಮುಖ್ ಈಶ್ವರಪ್ಪ ಅವರ ಮನೆಗೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರು ಭೇಟಿ ನೀಡಿ ಮೃತ ಕುಟುಂಬದವರಿಗೆ ಆತ್ಮಸ್ಥೆöÊರ್ಯ ತುಂಬುವ ಮೂಲಕ ಸಾಂತ್ವನದ ನುಡಿಗಳನ್ನಾಡಿ ವೈಯಕ್ತಿಕ ಧನಸಹಾಯವನ್ನು ನೀಡಿದರು.

ಮೃತ ಈಶ್ವರಪ್ಪನ ತಾಯಿ ಹಾಗೂ ಪತ್ನಿಯೊಂದಿಗೆ ಮಾತನಾಡಿ ಕಾರ್ಮಿಕ ಇಲಾಖೆಯಿಂದ ಪರಿಹಾರ ಒದಗಿಸಿಕೊಡುವ ಭರವಸೆಯನ್ನು ನೀಡಿದ್ದಲ್ಲದೇ ತಕ್ಷಣವೇ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಪರಿಹಾರವನ್ನು ಒದಗಿಸಲು ಮೃತನ ಮನೆಗೆ ಬರುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ವೀರಾಜಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ಗ್ರಾ.ಪಂ. ಉಪಾಧ್ಯಕ್ಷ ಮನೆಯಪಂಡ ಮಹೇಶ್, ಸದಸ್ಯ ಕಾಣತಂಡ ದಮಯಂತಿ, ತಿತಿಮತಿ ಶಕ್ತಿ ಕೇಂದ್ರದ ಪ್ರಮುಖ್ ಎನ್.ಎನ್. ಅನೂಪ್‌ಕುಮಾರ್, ಸಹ ಪ್ರಮುಖ್ ಗೋವಿಂದ, ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧುದೇವಯ್ಯ ಹಾಜರಿದ್ದರು.