ಶನಿವಾರಸAತೆ, ಮೇ ೨೪: ಸಮೀಪದ ನಂದಿಗುAದ ಗ್ರಾಮದ ಶಾಂತವೇರಿ ಜಂಕ್ಷನ್ನಲ್ಲಿ ಅಂಗಡಿ ಮುಂಭಾಗ ಅಕ್ರಮ ಮದ್ಯ ಮಾರುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎಚ್.ಆರ್.ಸುಬ್ರಮಣಿ ಬಂಧಿತ ಆರೋಪಿ. ಖಚಿತ ಮಾಹಿತಿ ದೊರೆತ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ಎಚ್.ಪರಶಿವಮೂರ್ತಿ ನಿರ್ದೇಶನದಂತೆ ಪಿ.ಎಸ್.ಐ. ಎಚ್.ಸಿ. ಗೋವಿಂದ್, ಸಿಬ್ಬಂದಿ ಲೋಕೇಶ್, ಶಶಿಕುಮಾರ್, ಮುರಳಿ, ಸತೀಶ್ ಸ್ಥಳಕ್ಕೆ ಧಾವಿಸಿದರು.
ಪೊಲೀಸರು ಸ್ಥಳದಲ್ಲಿದ್ದ ಮದ್ಯದ ಪ್ಯಾಕೆಟ್ಗಳು, ಪ್ಲಾಸ್ಟಿಕ್ ಲೋಟಗಳು, ನೀರಿನ ಬಾಟಲಿಗಳನ್ನು ವಶಪಡಿಸಿಕೊಂಡು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.