ಮಡಿಕೇರಿ, ಮೇ ೨೪: ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣವನ್ನು ಎರಡನೇ ಡೋಸ್ ಲಸಿಕೆ ಪಡೆದು ೯ ತಿಂಗಳು ಅಥವಾ ೩೯ ವಾರಗಳು ಪೂರೈಸಿದ ಫಲಾನುಭವಿಗಳಿಗೆ ನೀಡಲಾಗುತ್ತಿದೆ.

ವಿದೇಶಕ್ಕೆ ತೆರಳುವ ಫಲಾನುಭವಿಗಳಿಗೆ ಅವರು ತಲುಪುವ ದೇಶದ ಮುನ್ನೆಚ್ಚರಿಕೆ ಡೋಸ್ ಲಸಿಕೆ ಅಗತ್ಯತೆಗನುಗುಣವಾಗಿ/ ವಿದ್ಯಾಭ್ಯಾಸಕ್ಕೆ/ ನೌಕರಿಗಾಗಿ/ ವಿದೇಶಗಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಲು/ ಭಾರತದ ಅಧಿಕೃತ ಪ್ರತಿನಿಧಿಯಾಗಿ ವಿದೇಶಗಳಲ್ಲಿ ಸಭೆಗಳಲ್ಲಿ ಭಾಗವಹಿಸಲು/ ವ್ಯಾಪಾರಕ್ಕೆ ಸಂಬAಧಿಸಿದAತೆ ವಿದೇಶಕ್ಕೆ ತೆರಳುವವರಿಗೆ ಅವಧಿಗೆ ಮುನ್ನ ಮುನ್ನೆಚ್ಚರಿಕೆ ಲಸಿಕೆ ಡೋಸ್ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ.

ಕೋವಿನ್ ಪೋರ್ಟಲ್‌ನಲ್ಲಿ ನಮೂದಿಸಿದಂತೆ ೨ನೇ ಡೋಸ್ ಕೋವಿಡ್-೧೯ ಲಸಿಕೆ ಪಡೆದು ಕನಿಷ್ಟ ೩ ತಿಂಗಳು ಪೂರೈಸಿದ್ದರೆ (ಈ ಹಿಂದೆ ನಿಗದಿಪಡಿಸಿದ ೯ ತಿಂಗಳ) ಅವಧಿಪೂರ್ವ ಮುನ್ನೆಚ್ಚರಿಕೆ ಲಸಿಕೆ ಡೋಸ್ ಪಡೆಯಬಹುದಾಗಿದೆ.

ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣವನ್ನು ನಡೆಸುತ್ತಿರುವ ಎಲ್ಲಾ ಕೋವಿಡ್-೧೯ ಲಸಿಕಾ ಕೇಂದ್ರಗಳು ಅವಧಿಗಿಂತ ಮೊದಲು (ಅಂದರೆ ೨ನೇ ಡೋಸ್ ಲಸಿಕೆ ಪಡೆದ ೩ ತಿಂಗಳಿAದ ೯ ತಿಂಗಳೊಳಗೆ) ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣವನ್ನು ನಡೆಸಬಹುದು.

ಈ ಸೌಲಭ್ಯವನ್ನು ಪಡೆದುಕೊಳ್ಳಲು ವೀಸಾ, ಪ್ರಯಾಣ ಸಂಬAಧಿತ ದಾಖಲೆಗಳನ್ನು ಕೋವಿನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ. ಈ ರೀತಿಯಾಗಿ ನೀಡಲಾದ ಮುನ್ನೆಚ್ಚರಿಕೆ ಲಸಿಕೆ ಡೋಸ್ ಅನ್ನು ಕೋವಿನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಎಲ್ಲಾ ಹಂತದ ಕೋವಿಡ್-೧೯ ಲಸಿಕಾಕರಣದ ಮಾರ್ಗಸೂಚಿಯನ್ನು ಪಾಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ್ ತಿಳಿಸಿದ್ದಾರೆ.