*ಗೋಣಿಕೊಪ್ಪ, ಮೇ ೨೪: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಗೋಣಿಕೊಪ್ಪ ಶಾಖೆ ನಡೆಸಿದ ಮೂರು ದಿನಗಳ ಉಚಿತ ಬೇಸಿಗೆ ಶಿಬಿರ ಸಮಾರೋಪ ಗೊಂಡಿತು. ಶಿಬಿರಕ್ಕೆ ಹಿರಿಯ ವೈದ್ಯ ಡಾ. ಶಿವಪ್ಪ ಅವರು ಚಾಲನೆ ನೀಡಿದರು. ನಂತರ ಸಮಾರೋಪ ಸಮಾರಂಭವನ್ನು ಮಡಿಕೇರಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಂಚಾಲಕಿ ಧನಲಕ್ಷಿ÷್ಮ ಅಧ್ಯಕ್ಷತೆಯಲ್ಲಿ ನಡೆಯಿತು.

೯-೧೪ ವಯೋಮಾನದ ಮಕ್ಕಳಿಗಾಗಿ ಶಿಬಿರವನ್ನು ಆಯೋಜಿಸ ಲಾಗಿತ್ತು. ಸುಮಾರು ೩೪ಕ್ಕೂ ಹೆಚ್ಚು ಮಕ್ಕಳು ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ವ್ಯಕ್ತಿತ್ವ ವಿಕಸನಕ್ಕೆ ತೆರೆದುಕೊಂಡರು.

ಯೋಗಾಭ್ಯಾಸವನ್ನು ಕೆ.ಜಿ ಅಯ್ಯಪ್ಪನವರು, ರಾಜಯೋಗ ಜ್ಞಾನದ ಶಿಕ್ಷಣವನ್ನು ಬಿಕೆ ಕೋಮಲ ಮತ್ತು ಬಿ.ಕೆ. ಚಂದ್ರಿಕಾ ಪ್ರಾರ್ಥನೆ, ನೃತ್ಯ, ಜೀವನ ಮೌಲ್ಯಯುಕ್ತ ಆಟಗಳನ್ನು ನೂರೇರ ವೈಷ್ಣವಿ, ಕ್ರಾಫ್ಟ್, ಡ್ರಾಯಿಂಗ್ ಬಿ.ಕೆ. ರೇಷ್ಮ, ಮ್ಯಾಜಿಕ್ ಹಾಗೂ ಮನೋಬಲ ಏಕಾಗ್ರತೆ ವೃದ್ಧಿಸುವ ಶಿಕ್ಷಣವನ್ನು ಸೃಜನ್ ಅವರಿಂದ ಮಕ್ಕಳು ಕಲಿತುಕೊಂಡರು.

ಸಮಾರೋಪ ಸಮಾರಂಭದಲ್ಲಿ ಗೋಣಿಕೊಪ್ಪ ಗ್ರಾ.ಪಂ. ಸದಸ್ಯ ವಿವೇಕ್ ರಾಯ್ಕರ್, ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಗೋಣಿಕೊಪ್ಪ ಶಾಖೆಯ ಸಂಚಾಲಕಿ ಚಂದ್ರಿಕಾ ಅಕ್ಕ, ಕಾವೇರಮ್ಮ, ನೂರೇರ ಬಬಿತ, ಚೋಂದಮ್ಮ ಇದ್ದರು.