ಮಡಿಕೇರಿ, ಮೇ ೨೪ : ಮೂರ್ನಾಡು ೩೩/೧೧ ಕೆವಿ ವಿದ್ಯುತ್ ಉಪ-ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯ ಕೈಗೊಳ್ಳಲಾಗಿದೆ. ವಿದ್ಯುತ್ ಉಪ-ಕೇಂದ್ರದಿAದ ಹೊರ ಹೋಗುವ ಮೂರ್ನಾಡು ಹಾಗೂ ನಾಪೋಕ್ಲು ಶಾಖಾ ವ್ಯಾಪ್ತಿಯಲ್ಲಿ ಬರುವ ಪಾರಾಣೆ, ಮೂರ್ನಾಡು, ಹೊದ್ದೂರು, ಮರಗೋಡು ಹಾಗೂ ನಾಪೋಕ್ಲು ಫೀಡರ್ಗಳಲ್ಲಿ ತಾ. ೨೫ ರಂದು (ಇಂದು) ಬೆಳಿಗ್ಗೆ ೧೦ ಗಂಟೆಯಿAದ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಮೂರ್ನಾಡು, ಕಾಂತೂರು, ಹೊಸ್ಕೇರಿ, ಅರೆಕಾಡು, ಮರಗೋಡು, ಕಟ್ಟೆಮಾಡು, ಚೇಲಾವರ, ಬೇತ್ರಿ, ಚೆಯ್ಯಂಡಾಣೆ, ಪಾರಾಣೆ, ನಾಪೋಕ್ಲು, ಹಳೆತಾಲ್ಲೂಕು, ಬೇತು, ಹೊದ್ದೂರು, ಕುಂಜಿಲ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಕೋರಿದ್ದಾರೆ.