ಹೆಚ್.ಜೆ. ರಾಕೇಶ್ ಮಡಿಕೇರಿ, ಮೇ ೨೩: ಕೊಡಗು ಜಿಲ್ಲೆಯಲ್ಲಿ ಮುಂಗಾರು ಪ್ರವೇಶಿಸುವ ಮುನ್ನವೇ ಮಳೆರಾಯನ ಆರ್ಭಟ ಆರಂಭವಾಗಿದೆ. ಕಳೆದ ಕೆಲವು ದಿನಗಳು ಎಡೆಬಿಡದೆ ವರುಣ ಅಬ್ಬರಿಸಿ ಹೋಗಿದ್ದಾನೆ. ಇದೀಗ ಮಳೆಯ ಅಬ್ಬರ ಕಡಿಮೆಯಾಗಿದ್ದರು, ಮಳೆಗಾಲದ ಆತಂಕ ಮಾತ್ರ ಕಡಿಮೆಯಾಗಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಕೊಡಗು ಹಿಂದೆAದೂ ಕಾಣದ ಮಹಾಮಳೆಯಿಂದ ತೀವ್ರ ಸಂಕಷ್ಟ ಅನುಭವಿಸಿದೆ. ಪ್ರವಾಹ, ಭೂಕುಸಿತಗಳಿಂದ ಅಪಾರ ಹಾನಿ ಉಂಟಾಗಿವೆ. ಈ ವರ್ಷ ಕೂಡ ಮಳೆಗಾಲದ ಭಯ ಎದುರಾಗಿದ್ದು, ಜಿಲ್ಲಾಡಳಿತದಿಂದ ಪ್ರಕೃತಿ ವಿಕೋಪ ಸಂಬAಧ ಮುಂಜಾಗ್ರತಾ ಕ್ರಮವಾಗಿ ಸೂಕ್ಷö್ಮ ಪ್ರದೇಶಗಳನ್ನು ಗುರುತಿಸಿದೆ. ಜೊತೆಗೆ ಹಲವಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲೆಯ ೫ ತಾಲೂಕಿನ ೧೦ ಹೋಬಳಿಯ ೧೦೦ ಕಡೆಗಳಲ್ಲಿ ವಿಪತ್ತು ಸಂಭವಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಅದನ್ನು ಸೂಕ್ಷö್ಮ ಪ್ರದೇಶವೆಂದು ಗುರುತಿಸಿ ಅಲ್ಲಿ ಕಟ್ಟೆಚರ ವಹಿಸಲಾಗಿದೆ.
೫೦ ಪ್ರವಾಹ ಸಂಭವನೀಯ ಪ್ರದೇಶಗಳು
ಜಿಲ್ಲಾಡಳಿತ ೪೯ ಭೂಕುಸಿತ, ೫೦ ಪ್ರವಾಹ, ೧ ಅಂತರ್ಜಲದಿAದ ಸಮಸ್ಯೆ ಉಂಟಾಗುವ ಸಂಭವನೀಯ ಪ್ರದೇಶಗಳನ್ನು ಗುರುತಿಸಿದ್ದು, ಅಲ್ಲಿನ ಜನಸಂಖ್ಯೆಯನ್ನು ಕಲೆಹಾಕಲಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಪ್ರವಾಹ ಸಂಭವಿಸುವ ಪ್ರದೇಶಗಳೆಂದು ಐಕೊಳ, ಎಂ. ಬಾಡಗ, ಕಾಂತೂರು, ಕೋಡಂಬೂರು, ಎಸ್. ಕಟ್ಟೆಮಾಡು, ಹೊದ್ದೂರು, ಹೊದವಾಡ, ತಾವೂರು, ತಣ್ಣಿಮಾನಿ, ಪದಕಲ್ಲು, ಚೆರಿಯಪರಂಬು, ಬಲಮುರಿ, ದೊಡ್ಡಪುಲಿಕೋಟು, ಎಮ್ಮೆಮಾಡು, ಸೋಮವಾರಪೇಟೆ ತಾಲೂಕಿನಲ್ಲಿ ಕೂಡಿಗೆ, ಹೆಗ್ಗಡಳ್ಳಿ, ಹುದುಗೂರು, ಕೂಡ್ಲೂರು, ಬಸವನತ್ತೂರು, ಹುಲುಗುಂದ, ಕಣಿವೆ, ನಂಜರಾಯಪಟ್ಟಣ, ವಾಲ್ನೂರು-ತ್ಯಾಗತ್ತೂರು, ಮುಳ್ಳುಸೋಗೆ, ಗುಮ್ಮನಕೊಲ್ಲಿ, ಬಸವನಹಳ್ಳಿ, ಮಾದಾಪಟ್ಟಣ, ಹಾಡಗೇರಿ, ಅತ್ತೂರು ನಲ್ಲೂರು, ನೆಲ್ಲಿಹುದಿಕೇರಿಯನ್ನು ಗುರುತಿಸಲಾಗಿದೆ.
ವೀರಾಜಪೇಟೆ ತಾಲೂಕಿನಲ್ಲಿ ಹಾಲುಗುಂದ, ಕರಡಿಗೋಡು, ಗುಹ್ಯ ಹಚ್ಚಿನಾಡು, ಪೊನ್ನಂಪೇಟೆ ತಾಲೂಕಿನಲ್ಲಿ ಕುಂದ, ಅತ್ತೂರು ಬಾಳಾಜಿ, ನಿಡುಗುಂಬ, ಬಾಳೆಲೆ, ದೇವನೂರು, ಬಿರುನಾಣಿ, ಬಲ್ಯಮಂಡೂರು, ಟಿಶೆಟ್ಟಿಗೇರಿ, ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ೧, ೩, ೪, ೬, ೧೦, ೧೧, ೧೫, ೧೬ನೇ ವಾರ್ಡ್ಗಳಲ್ಲಿ ಪ್ರವಾಹ ಸಂಭವಿಸಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದ್ದು, ಕೆ. ಬಾಡಗದಲ್ಲಿ ಅಂತರ್ಜಲ ಸಮಸ್ಯೆ ಎದುರಾಗಬಹುದು ಎಂದು ಗುರುತು ಮಾಡಲಾಗಿದೆ.
೪೯ ಭೂಕುಸಿತ ಸಂಭಾವ್ಯ ಪ್ರದೇಶಗಳು
ಮಡಿಕೇರಿ ತಾಲೂಕಿನಲ್ಲಿ ಕಡಗದಾಳು, ನಿಡುವಟ್ಟು, ಗಾಳಿಬೀಡು, ೨ನೇ ಮೊಣ್ಣಂಗೇರಿ, ಮಕ್ಕಂದೂರು, ಹೆಮ್ಮೆತ್ತಾಳು, ಮುಕ್ಕೋಡ್ಲು, ಹೊದಕಾನ, ಮೇಘತ್ತಾಳು, ಚೇರಂಗಾಲ, ಭಾಗಮಂಡಲ, ಸಂಪಾಜೆ, ಮದೆ, ಕಾಟಕೇರಿ, ಹೆರವನಾಡು, ಮೇಕೇರಿ, ಸೋಮವಾರಪೇಟೆ ತಾಲೂಕಿನಲ್ಲಿ ಐಗೂರು, ಹಾನಗಲ್ಲು, ಕಿರಗಂದೂರು, ಬಿಳಿಗೇರಿ, ತಾಕೇರಿ,
(ಮೊದಲ ಪುಟದಿಂದ) ಕೊಪ್ಪತ್ತೂರು, ಚೇರಳ ಶ್ರೀಮಂಗಲ, ಈರಳ ವಳಮುಡಿ, ಜಂಬೂರು, ಮೂವತ್ತೋಕ್ಲು, ಹಾಲೇರೊ, ಕಿರುದಾಲೆ, ವೀರಾಜಪೇಟೆ ತಾಲೂಕಿನಲ್ಲಿ ನಾಂಗಾಲ, ಬಾಳುಗೋಡು, ಕೆದಮುಳ್ಳೂರು ಭಾಗಗಳು ಸಂಭವನೀಯ ಭೂಕುಸಿತ ಪ್ರದೇಶಗಳ ಪಟ್ಟಿಯಲ್ಲಿವೆ.
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಜ್ಯೋತಿ ನಗರ, ಮಂಗಳಾದೇವಿ ನಗರ, ಸುಬ್ರಮಣ್ಯ ನಗರ, ಮಲ್ಲಿಕಾರ್ಜುನ ನಗರ, ತ್ಯಾಗರಾಜ ಕಾಲೋನಿ, ಪುಟಾಣಿ ನಗರ, ಸೋಮವಾರಪೇಟೆ ಪ.ಪಂ. ವ್ಯಾಪ್ತಿಯ ವೆಂಕಟೇಶ್ವರ ಬ್ಲಾಕ್, ಲೋರ‍್ಸ್ ಕಾಲೋನಿ, ದೇವಾಲಯ ರಸ್ತೆ (ವಾರ್ಡ್ ೫), ರೇಂಜರ್ ಬ್ಲಾಕ್, ಮಹದೇಶ್ವರ ಬ್ಲಾಕ್, ವೀರಾಜಪೇಟೆ ಪ.ಪಂ. ವ್ಯಾಪ್ತಿಯ ಅಯ್ಯಪ್ಪ ಬೆಟ್ಟ, ನೆಹರು ನಗರವನ್ನು ಭೂಕುಸಿತ ಸಂಭವನೀಯ ಪ್ರದೇಶ ಎಂದು ಗುರುತಿಸಲಾಗಿದೆ.
ಜನರ ಸ್ಥಳಾಂತರ
ಅಕಸ್ಮಾತ್ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಹೆಚ್ಚಾದಲ್ಲಿ ಸೂಕ್ಷö್ಮ ಪ್ರದೇಶ ವಾಸಿಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಚಿಂತಿಸಿ ಯೋಜನೆ ರೂಪಿಸಿದೆ.
ಅವರನ್ನು ಕಾಳಜಿ ಕೇಂದ್ರ ಅಥವಾ ಅವರುಗಳ ಬಂಧುಮಿತ್ರರ ಮನೆಗೆ ತೆರಳಲು ಸೂಚಿಸಲಾಗುವುದು. ಈ ಹಿನ್ನೆಲೆ ಜಿಲ್ಲೆಯ ಒಟ್ಟು ೩೪೭೦ ಕುಟುಂಬದ ೧೨,೭೨೬ ಮಂದಿಯನ್ನು ಸ್ಥಳಾಂತರಗೊಳಿಸುವ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಮಳೆಯ ತೀವ್ರತೆ ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಕ್ರಮವಹಿಸಲಾಗುವುದು.
ಸೇತುವೆ - ರಸ್ತೆ ಮೇಲೆ ನಿಗಾ
ಹಾನಿಯಾಗುವ ಸಾಧ್ಯತೆ ರಸ್ತೆ ಹಾಗೂ ಸೇತುವೆಗಳನ್ನು ಜಿಲ್ಲಾಡಳಿತ ಕಳೆದ ವರ್ಷ ಗುರುತಿಸಿತ್ತು. ಅದರಂತೆ ಅದೇ ಜಾಗದ ಮೇಲೆ ಈ ಬಾರಿಯೂ ನಿಗಾ ವಹಿಸಲಾಗುವುದು.
ಮಡಿಕೇರಿ ಹೋಬಳಿ ವ್ಯಾಪ್ತಿಯಲ್ಲಿ ೧೩, ಸೋಮವಾರಪೇಟೆ ಹೋಬಳಿಯ ೬ ಕಡೆಗಳಲ್ಲಿ ರಸ್ತೆ, ಸೇತುವೆಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ ಎಂದು ಮುನ್ನೆಚ್ಚರಿಕೆ ವಹಿಸಲಾಗಿದೆ.
ಪಟ್ಟಿಯಲ್ಲಿ ಮಡಿಕೇರಿ-ಸಂಪಾಜೆ, ಮಡಿಕೇರಿ-ಮೇಕೇರಿ, ಮಡಿಕೇರಿ-ಚೆಟ್ಟಳ್ಳಿ, ಬಾಳೆಲೆ-ನಿಟ್ಟೂರು ರಸ್ತೆ ಹಾಗೂ ಬೇತ್ರಿ, ಕೊಂಡAಗೇರಿ, ಕುಶಾಲನಗರ ಸೇರಿದಂತೆ ಇನ್ನಿತರ ಸೇತುವೆಗಳಿವೆ. ಅದರೊಂದಿಗೆ ರಾಷ್ಟಿçÃಯ, ರಾಜ್ಯ ಹೆದ್ದಾರಿಗಳು, ಪಿಡಬ್ಲೂö್ಯಡಿ, ಪಿಆರ್‌ಇಡಿ, ಪಿಎಂಜಿಎಸ್‌ವೈ ರಸ್ತೆಗಳು ಅನಾಹುತದಿಂದ ಸಮಸ್ಯೆಯಾದಲ್ಲಿ ತ್ವರಿತವಾಗಿ ಸರಿಪಡಿಸುವ ನಿಟ್ಟಿನಲ್ಲಿ ಆಯಾ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.
ಪಂಚಾಯ್ತಿಗಳಿಗೆ ಅನುದಾನ
ಪ್ರಕೃತಿ ವಿಕೋಪ ತುರ್ತು ಪರಿಹಾರ ಕಾರ್ಯಕ್ಕೆ ಜಿಲ್ಲೆಯ ೧೦೪ ಗ್ರಾಮ ಪಂಚಾಯ್ತಿಗಳಿಗೆ ತಲಾ ರೂ. ೫೦ ಸಾವಿರದಂತೆ ಹಣ ಬಿಡುಗಡೆಗೊಳಿಸಲಾಗಿದೆ.
ಎಲ್ಲಾ ತಹಶೀಲ್ದಾರ್‌ಗಳ ಖಾತೆಗೆ ರೂ. ೨೫ ಲಕ್ಷ ಹಣ ಬಿಡುಗಡೆಗೊಳಿಸಲಾಗಿದ್ದು, ನಗರಸಭೆ, ಪಟ್ಟಣ ಪಂಚಾಯ್ತಿಗಳಿಗೆ ಇಲ್ಲಿಂದ ಹಣ ಒದಗಿಸಲಾಗುತ್ತದೆ. ಪ್ರಕೃತಿ ವಿಕೋಪ ಸಂಬAಧ ತಕ್ಷಣ ಸ್ಪಂದಿಸಲು ಜಿಲ್ಲಾಧಿಕಾರಿ ಕಛೇರಿ ಮತ್ತು ತಾಲೂಕು ಕಚೇರಿಯಲ್ಲಿ ೨೪*೭ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ಸನ್ನದ್ಧವಾಗಿರಿಸಲಾಗಿದೆ.
ಮುಂಜಾಗ್ರತಾ ಕ್ರಮಗಳು
ಸಮರ್ಥವಾಗಿ ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಎಲ್ಲಾ ಹೋಬಳಿಗಳಿಗೆ ೨೦ ನೋಡೇಲ್ ಹಾಗೂ ೨೦ ನೋಡೇಲ್ ಸಹಾಯಕ ಅಧಿಕಾರಿಗಳನ್ನು ನಿಯೋಜಿಸಿ ಕ್ರಮವಹಿಸಲಾಗಿದೆ.
ಎನ್.ಡಿ.ಆರ್.ಎಫ್. ಪಡೆ ನಿಯೋಜನೆಗೆ ಕೋರಲಾಗಿದೆ. ಅಗತ್ಯ ಮೂಲಸೌಕರ್ಯವಿರುವ ಕಾಳಜಿ ಕೇಂದ್ರ ತೆರೆಯಲು ಕ್ರಮಕೈಗೊಳ್ಳಲಾಗಿದೆ. ರಕ್ಷಣಾ ಕಾರ್ಯಕ್ಕೆ ಬೇಕಾದ ಅಗತ್ಯ ಸಲಕರಣೆಗಳನ್ನು ಸನ್ನದ್ಧವಾಗಿರಿಸಲಾಗಿದೆ. ಅಗತ್ಯವಿರುವ ಜೆಸಿಬಿ ವಾಹನಗಳನ್ನು ಗುರುತಿಸಿಟ್ಟುಕೊಳ್ಳಲಾಗಿದೆ. ಗ್ರಾಮ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ, ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್ ರಚಿಸಲಾಗಿದೆ.