ಕಡಂಗ, ಮೇ ೨೨: ಸ್ಥಳೀಯ ಸುನ್ನಿ ಯುವಜನ ಸಂಘ( ಎಸ್ ವೈ ಎಸ್) ಹಾಗೂ ಬದ್ರಿಯಾ ಸುನ್ನಿ ಮುಸ್ಲಿಂ ಜಮಾಅತ್ ಕಡಂಗ ಇದರ ವತಿಯಿಂದ ಸಾಮೂಹಿಕ ಸುನ್ನತ್ (ಮುಂಜಿ) ಹಾಗೂ ಮದರಸಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವು ಜಮಾಅತ್ ಅಧ್ಯಕ್ಷ ಸುಲೈಮಾನ್ ಸಿ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದÀರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೈಯ್ಯದ್ ಸಮೀಮ್ ತಂಗಳ್ ಎಮ್ಮೆಮಾಡು, ವಿದ್ಯಾಭ್ಯಾಸ ವಿದ್ಯಾರ್ಥಿಗಳಿಗೆ ಪ್ರಮುಖ ಪಾತ್ರ, ಗುರುಹಿರಿಯರನ್ನು ಗೌರವಿಸಬೇಕು ಆದರೆ ಮಾತ್ರ ವಿದ್ಯಾರ್ಜನೆಗೆ ಪ್ರತಿಫಲ ಸಿಗುವುದು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಹಾರಿಸ್ ಬಯಾನಿ ಮಾತನಾಡಿದರು. ಸುನ್ನತ್ ಕಾರ್ಯಕ್ರಮದ ನೇತೃತ್ವವನ್ನು ಹಜ್ರತ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಲವಾರು ವರ್ಷಗಳಿಂದ ಮದರಸಕ್ಕೆ ಪಠ್ಯಪುಸ್ತಕವನ್ನು ಉಚಿತವಾಗಿ ನೀಡುತ್ತಾ ಬಂದಿರುವ ಅಬೂಬಕ್ಕರ್ ಹಾಗೂ ಮುಜೀಬ್, ಹ್ಯಾರಿಸ್ ಹಾಜಿ, ಮೊದ್ದು ಹಾಜಿ, ಅಬ್ದುಲ್ ಖಾದರ್, ಹಸೈನಾರ್ ಕೆ.ಜಿ.ಉಸ್ಮಾನ್ ಎವರ್ ಗ್ರೀನ್, ಹಸೈನಾರ್ ಸಿ.ಪಿ, ರಶೀದ್ ಐ.ಬಿ.ಎಂ, ರಜಾಕ್ ಸಿ.ಎ, ಉಸ್ಮಾನ್ ಸಿ.ಇ, ಸಂಶುದ್ದೀನ್, ಫಿರೋಜ್, ಜಮಾಅತ್ ಕಾರ್ಯದರ್ಶಿ ಆಶಿಕ್, ಕಬೀರ್, ಬದ್ರಿಯ ಜಮಾಅತ್ ಯುಎಇ ಉಪಾಧ್ಯಕ್ಷ ರಶೀದ್ ಅಶ್ರಫಿ, ಶಫೀಕ್ ಮಿಸ್ಬಾಯಿ, ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಹಾಗೂ ಎಸ್‌ಎಸ್‌ಎಫ್, ಎಸ್‌ವೈಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ವಾಗತವನ್ನು ರಜಾಕ್ ಮುಸ್ಲಿಯಾರ್ ಹಾಗೂ ವಂದನೆಯನ್ನು ಹ್ಯಾರಿಸ್ ಬಯಾನಿ ವಹಿಸಿದ್ದರು.