ಮಡಿಕೇರಿ, ಮೇ ೨೨: ಕೊಡಗಿನಲ್ಲಿ ನಡೆದಿರುವ ಭಜರಂಗದಳದ ಪ್ರಶಿಕ್ಷಣವರ್ಗವು ಯುವ ಸಮೂಹಕ್ಕೆ ಉತ್ತಮ ಮಾರ್ಗ ದರ್ಶನ ಮಾಡುವ ಸದುದ್ದೇಶದ ಶಿಬಿರವಾಗಿದ್ದು, ರಾಜಕೀಯಲಾಭಕ್ಕಾಗಿ ವಾಸ್ತವವನ್ನು ಮರೆಮಾಚಿ ಜನರನ್ನು ಹಾದಿತಪ್ಪಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಹಿಂದೂ ಪರಿಷತ್ನ ಅಂಗಸAಸ್ಥೆಯಾಗಿರುವ ಭಜರಂಗದಳ ಸಂಘಟನೆಯ ನೇತೃತ್ವ ದಲ್ಲಿ ಸಂಘಟನೆಯ ಕಾರ್ಯಕರ್ತರ ದೈಹಿಕ ಮತ್ತು ಮಾನಸಿಕ ಕ್ಷಮತೆಗಾಗಿ ಪ್ರತಿ ಜಿಲ್ಲೆಯಲ್ಲೂ ಪ್ರತಿವರ್ಷ ಪ್ರಶಿಕ್ಷಣ ವರ್ಗ ನಡೆಸಲಾಗುತ್ತಿದ್ದು, ಅದರಂತೆ ಈ ಬಾರಿಯೂ ಕೊಡಗು ಜಿಲ್ಲೆಯಲ್ಲಿ ನಡೆಸಲಾಗಿದ್ದು, ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ವಿವಾದ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ತ್ರಿಶೂಲಗಳು ಹಿಂದೂ ಧಾರ್ಮಿಕತೆಯ ಸಂಕೇತವಾಗಿದ್ದು, ಹಿಂದೂ ಧಾರ್ಮಿಕ ನಂಬಿಕೆಗಳ ವಿರುದ್ಧ ಮಾತನಾಡುವ ಹಕ್ಕು ಇತರ ಧರ್ಮಿಯರಿಗಿಲ್ಲ ಎಂದರು.
ಏರ್ಗನ್ ಬಳಕೆ ಭಾರತೀಯ ದಂಡಸAಹಿತೆ ಪ್ರಕಾರ ಯಾವುದೇ ನಿರ್ಬಂಧಗಳು ಇಲ್ಲ. ಮತ್ತು ಏರ್ಗನ್ ಅನ್ನು ಯಾರು ಬೇಕಾದರೂ ಬಳಸಬಹುದಾಗಿದ್ದು, ಅದಕ್ಕೆ ಯಾವುದೇ ಪರವಾನಿಗೆ ಅಗತ್ಯತೆ ಇರುವುದಿಲ್ಲ ಹೀಗಿದ್ದರೂ ಏರ್ಗನ್ ಬಳಕೆಯನ್ನು ಭಯೋತ್ಪಾದÀನೆ ಎಂಬAತೆ ಬಿಂಬಿಸುತ್ತಿರುವುದು ಹಾಸ್ಯಾಸ್ಪದ ಎಂದರು.
ಪೊನ್ನAಪೇಟೆಯ ಶಿಕ್ಷಣ ಸಂಸ್ಥೆ ತನ್ನ ಶಾಲಾ ರಜಾದಿನಗಳ ಸಂದರ್ಭ ಪ್ರಶಿಕ್ಷಣ ವರ್ಗಕ್ಕೆ ಸ್ಥಳವಕಾಶ ನೀಡಿದ್ದು, ಇದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಂಡ ಕೆಲವು ರಾಜಕೀಯ ಪಕ್ಷಗಳು ತ್ರಿಶೂಲ, ಏರ್ಗನ್ ಮತ್ತು ಸ್ಥಳಾವಕಾಶ ನೀಡಿದ ಶಿಕ್ಷಣ ಸಂಸ್ಥೆಯ ಬಗ್ಗೆ ತಮ್ಮ ರಾಜಕೀಯ ಲಾಭಕ್ಕಾಗಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಕೆಲವು ಸಂಘಟನೆಗಳು ಮಾಡುತ್ತಿರುವ ಆರೋಪಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಧ್ವನಿಗೂಡಿಸುವುದು ಅಲ್ಪಸಂಖ್ಯಾತ ಓಟ್ ಬ್ಯಾಂಕ್ಗಾಗಿ ನಡೆಸುತ್ತಿರುವ ಹುನ್ನಾರ ಎಂದ ಅವರು, ದೇಶಪ್ರೇಮದ ಸಂಘಟನೆಯಾದ ಸಂಘ ಪರಿವಾದ ಮೇಲೆ ಕೈ ತೋರಿಸಲು ಯಾವುದೇ ನೈತಿಕತೆ ಇರುವುದಿಲ್ಲ ಎಂದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದ ವಿಷಯ ಎಂದ ಅವರು, ಸಂಘವನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅದರ ತಿರುಳನ್ನು ಅರಿಯಲು ಸಾಧ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಯುವ ಮೋರ್ಚಾದ ರಾಜ್ಯಸಮಿತಿ ಸದಸ್ಯ ಮಹೇಶ್ ತಿಮ್ಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಚಂಗಪ್ಪ, ಯಶ್ವಿನ್, ಉಪಾಧ್ಯಕ್ಷ ವಿ. ವಿನಯ್ರಾಜ್ ಉಪಸ್ಥಿತರಿದ್ದರು.