ಗೋಣಿಕೊಪ್ಪ ವರದಿ, ಮೇ. ೨೧ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ನಡೆಯುತ್ತಿರುವ ಮಿನಿ ಒಲಿಂಪಿಕ್ ಹಾಕಿ ಕ್ರೀಡೆಯ ೧೪ ವರ್ಷದೊಳಗಿನ ವಿಭಾಗದಲ್ಲಿ ಹಾಕಿ ಕೂರ್ಗ್ ಬಾಲಕರ ತಂಡ ಫೈನಲ್ ಪ್ರವೇಶ ಪಡೆದಿದೆ. ಭಾನುವಾರ ಗದಗ ವಿರುದ್ಧ ಕಪ್‌ಗಾಗಿ ಸೆಣೆಸಾಟ ನಡೆಸಲಿದೆ.
ಶನಿವಾರ ನಡೆದ ಸೆಮಿ ಫೈನಲ್‌ನಲ್ಲಿ ಹಾಸನ ವಿರುದ್ಧ ೬-೨ ಗೋಲುಗಳ ಅಂತರದಿAದ ಜಯಿಸಿ ಸಾಧನೆ ಮಾಡಿತು. ದೀಕ್ಷಿತ್ ೪ ಗೋಲು ಸಿಡಿಸಿದರು. ಬಿನ್ ಬೋಪಣ್ಣ, ಜಶನ್ ತಮ್ಮಯ್ಯ ತಲಾ ಒಂದೊAದು ಗೋಲು ಹೊಡೆದರು.
ಸೋಹನ್ ಕಾರ್ಯಪ್ಪ (ನಾಯಕ), ನಿಶಾಂತ್ (ಉಪನಾಯಕ), ದೀಕ್ಷಿತ್, ಆಯುಷ್ ಶೆಟ್ಟಿ, ಜಶನ್ ತಮ್ಮಯ್ಯ, ಪವನ್ ಪೊನ್ನಣ್ಣ, ನಾಣಯ್ಯ, ತನೀಶ್ ಮಾದಪ್ಪ, ಯಶ್ವಿನ್ ಅಚ್ಚಯ್ಯ, ನಮನ್ ಬೆಳ್ಯಪ್ಪ, ಬಿನ್ ಬೋಪಣ್ಣ, ಯಶ್ವಿನ್ ಬೋಪಯ್ಯ, ಶಾನ್ ಮಂದಣ್ಣ, ಧ್ಯಾನ್ ದೇವಯ್ಯ, ಅಕ್ಷಯ್, ತನೀಶ್ ತಿಮ್ಮಯ್ಯ, ಎಚ್. ಎ. ಅರುಣ್ (ತರಬೇತುದಾರ), ವಿನೋದ್ ಕುಮಾರ್ (ವ್ಯವಸ್ಥಾಪಕ) ತಂಡದಲ್ಲಿದ್ದಾರೆ.