ಮಡಿಕೇರಿ, ಮೇ ೨೧: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಭಾದಕಕ್ಕೆ ಒಳಗಾಗಬಹುದಾದ (ಸಂಭವನೀಯ ಪ್ರಕೃತಿ ವಿಕೋಪದಿಂದ ಆಗಬಹುದಾದ) ಹಾನಿ ನಿಭಾಯಿಸಲು ಮತ್ತು ಕೋವಿಡ್-೧೯ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ನೋಡಲ್ ಅಧಿಕಾರಿಗಳು ಹಾಗೂ ಹೆಚ್ಚುವರಿಯಾಗಿ ಹೋಬಳಿವಾರು ಸಹಾಯಕ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಹೋಬಳಿವಾರು ನೋಡಲ್ ಅಧಿಕಾರಿ ಹಾಗೂ ಸಹಾಯಕ ನೋಡಲ್ ಅಧಿಕಾರಿಯವರ ವಿವರ ಇಂತಿದೆ. ಮಡಿಕೇರಿ ನಗರ ವ್ಯಾಪ್ತಿ ಹಾಗೂ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ (೯೪೪೮೭೭೬೩೬೬).

ಮಡಿಕೇರಿ (ಗ್ರಾಮಾಂತರ ವ್ಯಾಪ್ತಿ) ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಹೊರತುಪಡಿಸಿ ಹೋಬಳಿ ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆ ಉಪ ನಿರ್ದೇಶಕ ಮುತ್ತುರಾಜು (೮೧೦೫೨೩೫೬೮೨) ಹಾಗೂ ಸಹಾಯಕ ನೋಡಲ್ ಅಧಿಕಾರಿಯಾಗಿ ದೇವರಾಜ್ (೯೪೪೮೭೯೮೫೫೮).

ಸಂಪಾಜೆ ವ್ಯಾಪ್ತಿಗೆ ಹೋಬಳಿ ನೋಡಲ್ ಅಧಿಕಾರಿಯಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ ಹೇಮಕುಮಾರ್ (೯೯೮೦೮೪೦೯೬೬) ಹಾಗೂ ಸಹಾಯಕ ನೋಡಲ್ ಅಧಿಕಾರಿಯಾಗಿ ಸಂಪಾಜೆ ಹೋಬಳಿ ನಾಡ ಕಚೇರಿ ತಹಶೀಲ್ದಾರ್ ಗೋಪಾಲ್ (೯೪೮೧೭೫೬೦೭೭).

ಭಾಗಮಂಡಲ ವ್ಯಾಪ್ತಿಗೆ ನೋಡಲ್ ಅಧಿಕಾರಿಯಾಗಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ವಿರೂಪಾಕ್ಷ (೯೭೪೩೯೦೯೯೯೩) ಹಾಗೂ ಸಹಾಯಕ ನೋಡಲ್ ಅಧಿಕಾರಿ ಭಾಗಮಂಡಲ ಹೋಬಳಿ ನಾಡ ಕಚೇರಿಯ ಉಪ ತಹಶೀಲ್ದಾರ ಎಂ.ಎಸ್. ದೊರೆ (೯೭೪೧೮೭೫೪೪೯).

ನಾಪೋಕ್ಲು ವ್ಯಾಪ್ತಿಗೆ ನೋಡಲ್ ಅಧಿಕಾರಿಯಾಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತಾರಣಾಧಿಕಾರಿ ರಾಜಶೇಖರ್ (೯೪೮೦೩೫೬೪೦೯) ಹಾಗೂ ಸಹಾಯಕ ನೋಡಲ್ ಅಧಿಕಾರಿ ನಾಪೋಕ್ಲು ಹೋಬಳಿ ನಾಡ ಕಚೇರಿ ಉಪ ತಹಶೀಲ್ದಾರ ಸುನೀಲ್ (೭೦೨೨೫೧೮೨೫೬).

ಕುಶಾಲನಗರ (ನಗರ ವ್ಯಾಪ್ತಿ) ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ (೯೭೪೧೫೧೧೫೬೨) ಹಾಗೂ ಸಹಾಯಕ ನೋಡಲ್ ಅಧಿಕಾರಿ ಕಂದಾಯ ಅಧಿಕಾರಿ ಪಟ್ಟಣ ಪಂಚಾಯಿತಿ ಕುಶಾಲನಗರ ಶಕೀಲ್ ಅಹ್ಮದ್ (೯೯೧೬೦೬೮೭೯೧).

ಕುಶಾಲನಗರ (ಗ್ರಾಮಾಂತರ ವ್ಯಾಪ್ತಿ) ನೋಡಲ್ ಅಧಿಕಾರಿ ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಾಣಾಧಿಕಾರಿ ಕೆ.ವಿ. ಸುರೇಶ್ (೯೪೮೦೬೯೫೨೬೧) ಹಾಗೂ ಸಹಾಯಕ ನೋಡಲ್ ಅಧಿಕಾರಿ ಕುಶಾಲನಗರ ಹೋಬಳಿ ನಾಡ ಕಚೇರಿ ಉಪ ತಹಶೀಲ್ದಾರ್ ಮಧುಸೂದನ (೯೪೪೮೫೮೮೦೬೦).

ಸೋಮವಾರಪೇಟೆ (ನಗರ ವ್ಯಾಪ್ತಿ) ನೋಡಲ್ ಅಧಿಕಾರಿಯಾಗಿ ಕೂಡಿಗೆ ಡಯಟ್‌ನ ಉಪ ನಿರ್ದೇಶಕರು (ಅಭಿವೃದ್ಧಿ) ರಂಗನಾಥಸ್ವಾಮಿ (೯೪೪೮೯೪೦೧೦೩) ಹಾಗೂ ಸಹಾಯಕ ನೋಡಲ್ ಅಧಿಕಾರಿಯಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ಕಂದಾಯ ಅಧಿಕಾರಿ ರಫೀಕ್ (೯೯೦೧೬೧೭೧೮೫).

ಸೋಮವಾರಪೇಟೆ (ಗ್ರಾಮಾಂತರ ವ್ಯಾಪ್ತಿ) ನೋಡಲ್ ಅಧಿಕಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ, (೯೯೦೧೮೦೬೮೨೩) ಹಾಗೂ ಸಹಾಯಕ ನೋಡಲ್ ಅಧಿಕಾರಿ ಸೋಮವಾರಪೇಟೆ ತಾಲೂಕು ಕಚೇರಿ ಚುನಾವಣೆ ಶಾಖೆಯ ಶಿರಸ್ತೇದಾರರು ಲೋಹಿತ್ (೯೮೮೦೯೨೪೪೪೦).

ಶಾಂತಳ್ಳಿ ವ್ಯಾಪ್ತಿಗೆ ನೋಡಲ್ ಅಧಿಕಾರಿಯಾಗಿ ಸೋಮವಾರಪೇಟೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಸ್ವಾಮಿ (೯೪೮೧೭೭೨೧೪೩) ಹಾಗೂ ಸಹಾಯಕ ನೋಡಲ್ ಅಧಿಕಾರಿಯಾಗಿ ಶಾಂತಳ್ಳಿ ಹೋಬಳಿ ನಾಡ ಕಚೇರಿ ಉಪ ತಹಶೀಲ್ದಾರ್ ತುಕ್ರಪ್ಪ (೯೦೦೮೯೦೩೬೮೫).

ಕೊಡ್ಲಿಪೇಟೆ ವ್ಯಾಪ್ತಿಗೆ ನೋಡಲ್ ಅಧಿಕಾರಿಯಾಗಿ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಧಿಕಾರಿ ಮಂಜುನಾಥ್ (೮೧೯೭೩೭೦೩೪೨) ಹಾಗೂ ಸಹಾಯಕ ನೋಡಲ್ ಅಧಿಕಾರಿಯಾಗಿ ಕೊಡ್ಲಿಪೇಟೆ ಹೋಬಳಿ ನಾಡ ಕಚೇರಿಯ ಉಪ ತಹಶೀಲ್ದಾರ್ ಪುರುಷೋತ್ತಮ (೭೩೫೩೪೮೭೨೯೩).

ಶನಿವಾರಸಂತೆ ವ್ಯಾಪ್ತಿಗೆ ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಕೃಷ್ಣ ರೈ (೭೮೯೯೧೪೨೩೬೫) ಹಾಗೂ ಸಹಾಯಕ ನೋಡಲ್ ಅಧಿಕಾರಿಯಾಗಿ ಶನಿವಾರಸಂತೆ ಹೋಬಳಿ ನಾಡ ಕಚೇರಿ ಉಪ ತಹಶೀಲ್ದಾರ್ ಶ್ರೀದೇವಿ (೭೭೬೦೬೧೬೭೫೩).

ಸುಂಟಿಕೊಪ್ಪ ವ್ಯಾಪ್ತಿಗೆ ನೋಡಲ್ ಅಧಿಕಾರಿಯಾಗಿ ಮಡಿಕೇರಿ ಯೋಜನಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಭು (೯೯೭೨೫೩೧೧೮೧) ಹಾಗೂ ಸಹಾಯಕ ನೋಡಲ್ ಅಧಿಕಾರಿಯಾಗಿ ಸುಂಟಿಕೊಪ್ಪ ಹೋಬಳಿ ನಾಡ ಕಚೇರಿ ಉಪ ತಹಶೀಲ್ದಾರ್ ಶಿವಪ್ಪ (೯೪೮೨೯೪೪೪೧೪).

ವೀರಾಜಪೇಟೆ (ನಗರ ವ್ಯಾಪ್ತಿ) ನೋಡಲ್ ಅಧಿಕಾರಿಯಾಗಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ (೯೪೪೮೬೦೨೬೩೫) ಹಾಗೂ ಸಹಾಯಕ ನೋಡಲ್ ಅಧಿಕಾರಿಯಾಗಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಕಂದಾಯ ಅಧಿಕಾರಿ ಸೋಮಶೇಖರ್ (೯೪೮೧೮೨೪೧೦೫).

ವೀರಾಜಪೇಟೆ (ಗ್ರಾಮಾಂತರ ವ್ಯಾಪ್ತಿ) ನೋಡಲ್ ಅಧಿಕಾರಿಯಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್ (೯೬೬೩೨೦೬೬೧೯) ಹಾಗೂ ವೀರಾಜಪೇಟೆ ತಾಲೂಕು ಕಚೇರಿ ಕಂದಾಯ ಪರಿವೀಕ್ಷಕ ಹರೀಶ್ (೯೮೪೫೬೧೮೪೬೦).

ಅಮ್ಮತ್ತಿ ವ್ಯಾಪ್ತಿಗೆ ನೋಡಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಪ್ರಮೋದ್ (೯೪೮೩೧೧೦೬೨೧) ಹಾಗೂ ಸಹಾಯಕ ನೋಡಲ್ ಅಧಿಕಾರಿಯಾಗಿ ಅಮ್ಮತ್ತಿ ಹೋಬಳಿ ನಾಡ ಕಚೇರಿ ಉಪ ತಹಶೀಲ್ದಾರ್ ಹೆಚ್.ಕೆ. ಪೊನ್ನು (೯೪೪೯೫೧೫೩೫೮).

ಪೊನ್ನಂಪೇಟೆ ವ್ಯಾಪ್ತಿಗೆ ನೋಡಲ್ ಅಧಿಕಾರಿಯಾಗಿ ವೀರಾಜಪೇಟೆ ಸಮಗ್ರ ಗಿರಿಜನ ಅಭಿವೃದ್ಧಿ ತಾಲೂಕು ಯೋಜನಾ ಸಮನ್ವಯಾಧಿಕಾರಿ ಗುರುಶಾಂತಪ್ಪ (೯೯೦೧೨೨೯೦೬೫) ಹಾಗೂ ಸಹಾಯಕ ನೋಡಲ್ ಅಧಿಕಾರಿಯಾಗಿ ಪೊನ್ನಂಪೇಟೆ ಹೋಬಳಿ ನಾಡ ಕಚೇರಿ ಉಪ ತಹಶೀಲ್ದಾರ್ ರವಿಕುಮಾರ್ (೯೬೬೩೮೮೭೯೮೮).

ಬಾಳೆಲೆ ವ್ಯಾಪ್ತಿಗೆ ನೋಡಲ್ ಅಧಿಕಾರಿಯಾಗಿ ವೀರಾಜಪೇಟೆ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳು ಸಹಾಯಕ ನಿರ್ದೇಶಕರಾದ ಡಾ.ತಮ್ಮಯ್ಯ (೯೪೪೮೭೨೦೬೫೦, ೭೬೨೪೯೬೨೧೦೦) ಹಾಗೂ ಸಹಾಯಕ ನೋಡಲ್ ಅಧಿಕಾರಿಯಾಗಿ ಬಾಳೆಲೆ ಹೋಬಳಿ ನಾಡ ಕಚೇರಿ ಉಪ ತಹಶೀಲ್ದಾರ್ ಎ.ಕೆ. ಅಕ್ಕಮ್ಮ (೯೫೩೫೩೪೯೨೯೪).

ಶ್ರೀಮಂಗಲ ವ್ಯಾಪ್ತಿಗೆ ನೋಡಲ್ ಅಧಿಕಾರಿಯಾಗಿ ವೀರಾಜಪೇಟೆ ಪಂಚಾಯತ್ ರಾಜ್ ಎಂಜಿನಿಯರಿAಗ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹದೇವ (೯೪೪೮೧೪೬೦೫೨) ಹಾಗೂ ಸಹಾಯಕ ನೋಡಲ್ ಅಧಿಕಾರಿಯಾಗಿ ಶ್ರೀಮಂಗಲ ಹೋಬಳಿ ನಾಡ ಕಚೇರಿ ಉಪ ತಹಶೀಲ್ದಾರ್ ಎ.ಕೆ. ಅಕ್ಕಮ್ಮ (೯೫೩೫೩೪೯೨೯೪).

ಹುದಿಕೇರಿ ವ್ಯಾಪ್ತಿಗೆ ನೋಡಲ್ ಅಧಿಕಾರಿಯಾಗಿ ಪೊನ್ನಂಪೇಟೆ ಹೋಬಳಿಯ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ದೀನಾ (೯೪೪೮೦೪೯೦೨೦) ಹಾಗೂ ಸಹಾಯಕ ನೋಡಲ್ ಅಧಿಕಾರಿಯಾಗಿ ಹುದಿಕೇರಿ ಹೋಬಳಿ ನಾಡ ಕಚೇರಿ ಉಪ ತಹಶೀಲ್ದಾರ್ ಸ್ವಾತಿ (೯೬೮೬೯೬೨೨೦೬) ಅವರನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ನಿಯೋಜಿಸಿದ್ದಾರೆ.