ನಾಪೋಕ್ಲು, ಮೇ ೨೧: ನಾಪೋಕ್ಲು-ವೀರಾಜಪೇಟೆಯ ಮುಖ್ಯ ರಸ್ತೆಯ ದುರಸ್ತಿಗಾಗಿ ಕೊಳಕೇರಿ ಗ್ರಾಮದಲ್ಲಿ ಹಲವಾರು ಬಾರಿ ಪ್ರತಿಭಟನೆ ಮಾಡಿರುವುದರಿಂದ ಕಳೆದ ೧೫ ದಿನಗಳ ಹಿಂದೆ ರಸ್ತೆ ಡಾಂಬರೀಕರಣ ಗೊಳಿಸಲಾಯಿತು. ಆದರೆ ಡಾಂಬರೀಕರಣಗೊAಡ ರಸ್ತೆಯು ಕಾಮಗಾರಿ ಮುಗಿಯುವ ಹೊತ್ತಿಗೆ ಒಂದು ಬದಿಯಿಂದ ಕಿತ್ತು ಬರಲು ತೊಡಗಿದ್ದು, ಡಾಂಬರೀಕರಣ ಕಳಪೆಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ವೈ. ಅಶ್ರಫ್ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು, ಈ ಕಾಮಗಾರಿಯ ಹಣ ಬೇರೆಲ್ಲೋ ಪೋಲಾಗಿರುವ ಸಂಶಯವನ್ನು ವ್ಯಕ್ತಪಡಿಸಿ ಈ ಕಾಮಗಾರಿಯ ಹಣದ ವಿಷಯವನ್ನು ಅಭಿಯಂತರರು ಸಾರ್ವಜನಿಕವಾಗಿ ತಿಳಿಸಬೇಕೆಂದು ಒತ್ತಾಯಿಸಿದರು. ಈ ಎರಡು ರಸ್ತೆಗಳನ್ನು ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ತಪ್ಪಿದರೆ ಕೊಳಕೇರಿ ಗ್ರಾಮದ ಸಂಘ-ಸAಸ್ಥೆಯ ಮತ್ತು ಸಾರ್ವಜನಿಕರ ಸಹಕಾರದಿಂದ ರಸ್ತೆತಡೆ ನಡೆಸಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಿ.ಎಂ. ಯಾಕೂಬ್ ಎಸ್.ಡಿ.ಪಿ.ಐ. ಅಧ್ಯಕ್ಷ ಕೊಳಕೇರಿ, ಅಭೀದ್ ಪಿ.ಎಫ್.ಐ. ಕಾರ್ಯದರ್ಶಿ ಕೊಳಕೇರಿ, ಎಂ.ಯು. ಮುನೀರ್ ಇದ್ದರು.