ಲೋಕ ತ್ಯಾಗಮಯಿ ಕಾವೇರಿಯು

ಭಾರತ ಮಾತೆಯ ಸುಪುತ್ರಿ

ನಾನು ನನ್ನ ಈ ಸರಣಿ ರೂಪದ ಕಾವೇರಿಯ ಮಹಿಮಾ ಕಥನವನ್ನು ಮುಕ್ತಾಯಗೊಳಿಸುವ ಮುನ್ನ ಒಂದು ರೋಮಾಂಚಕರೀ ಸತ್ಯಾನುಭವವನ್ನು ನೆನಪಿಸಿಕೊಳ್ಳುತ್ತೇನೆ. ಅದಕ್ಕೂ ಮುನ್ನ ನನ್ನ ಮನದಲ್ಲಿ ಸ್ಫ್ಫುರಿಸಿದÀ ಚಿಂತನಾ ಲಹರಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಕಾವೇರಿ ಕಥನಕ್ಕೂ ಈ ನನ್ನ ಚಿಂತನಾ ಲಹರಿಗೂ ನೇರ ಸಂಬAಧವಿಲ್ಲ. ಏಕೆಂದರೆ ಕಾವೇರಿ ಕಥನವನ್ನು ಮುಕ್ತಾಯಗೊಳಿಸುವ ಸಂದರ್ಭ ಕಾವೇರಿ ಕ್ಷೇತ್ರದಲ್ಲಿ ನನಗೆ ಲಭಿಸಿದ ಅಪೂರ್ವ ಅನುಭವವೊಂದನ್ನು ಹಂಚಿಕೊಳ್ಳುವ ಮುನ್ನ ಕಾವೇರಿ ಮಾತೆಯ ಇಚ್ಚೆಯಂತೆ ಕೊಡಗಿನ ಜನತೆಯಲ್ಲಿ ನಮ್ಮೆಲ್ಲರ ಜೀವನ ವೈಖರಿಯ ಕೆಲವು ಪ್ರಮುಖಾಂಶಗಳನ್ನು ನನ್ನ ಮಿತ್ರರಾದ ನಿಮ್ಮ ಗಮನಕ್ಕೆ ತರುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಮಾನವನ ಜೀವನ, ಇಹಲೋಕದಲ್ಲಿನ ಬದುಕು, ಜನನ-ಸಾವು- ಈ ನಡುವೆ ನಮ್ಮ ನಿಲುವು, ನಮ್ಮ ವೈಯಕ್ತಿಕ ಜೀವನದೊಂದಿಗೆ, ಕೌಟುಂಬಿಕ, ಸಾಮಾಜಿಕ ಒಡನಾಟ, ಸಂಕಷ್ಟ-ಸAತೋಷಗಳ ನಡುವೆ ಸಾಗುವಿಕೆ-ಇವುಗಳ ಬಗ್ಗೆ ಚಿಂತನ-ಮAಥನ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ಎಲ್ಲಕ್ಕಿಂತಲೂ ಮುಖ್ಯವಾಗಿ ನಮಗೆ ಬದುಕಲು ನೆಲೆ ನೀಡಿರುವ ಭವ್ಯ ಭಾರತ ಮಾತೆಯ ಭವಿತವ್ಯದ ಚಿಂತನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಈ ವಿಚಾರಗಳು ಎರಡು ಕಂತುಗಳಲ್ಲಿ ಪ್ರಕಟಗೊಳ್ಳಲಿದೆ. ಬಳಿಕ ಮೂರನೇ ಕಂತಿನಲ್ಲಿ ಕಾವೇರಿ ಕ್ಷೇತ್ರದಲ್ಲಿನ ದಿವ್ಯಾನುಭವ ಭಾವನಾ ಲಹರಿಯೊಂದನ್ನು ನಿಮ್ಮೊಂದಿಗೆ ಹಂಚಿಕೊAಡು ಕಾವೇರಿ ಕಥನ ಸರಣಿಯನ್ನು ಪರಿಸಮಾಪ್ತಿಗೊಳಿಸಲಿದ್ದೇನೆ. ಹಾಗಾಗಿ ಕಾವೇರಿ ಕಥನದಲ್ಲಿ ಈ ವಿಚಾರವೇಕೆ ಎಂದು ನೀವು ಪ್ರಶ್ನಿಸುವ ಮುನ್ನವೇ ನಾನೇ ಉತ್ತರಿಸುತ್ತಿದ್ದೇನೆ. ಲೋಕ ತ್ಯಾಗಮಯಿ ಕಾವೇರಿಯು ಭಾರತ ಮಾತೆಯ ಸುಪುತ್ರಿಯೆನಿಸಿ ಭರತ ಖಂಡವನ್ನು ಪಾವನಗೊಳಿಸುತ್ತಿರುವಾಗ ಈ ಪುಣ್ಯ ಭೂಮಿ ಭಾರತದ ಕುರಿತು, ಈ ದೇಶದ ಜನ ಜೀವನ ವೈಖರಿಯ ಬಗ್ಗೆ, ನಾವು ಯಾವ ರೀತಿ ಸುಧಾರಿಸಿಕೊಳ್ಳಬಹುದು ಎನ್ನುವ ಅಧ್ಯಾತ್ಮ ಹಿನ್ನೆಲೆಯ ಚಿಂತನ-ಮAಥನವನ್ನು ಬರೆಯಬೇಕು ಅನಿಸಿತು. ಈ ಮೂಲಕ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆಂಬ ನನ್ನ ಬಯಕೆಗೆ ಖಂಡಿತ ನೀವು ಸ್ಪಂದಿಸುತ್ತೀರಿ ಎನ್ನುವ ವಿಶ್ವಾಸದೊಂದಿಗೆ ಈ ಎರಡು ಕಂತು ಬರಹವನ್ನು ಪ್ರಕಟಿಸುತ್ತಿದ್ದೇನೆ. ಅಂತಿಮವಾಗಿ ಮೂರನೇ ಕಂತಿನಲ್ಲಿ ಮತ್ತೆ ಕಾವೇರಿ ಸಾಂಸ್ಕೃತಿಕ ಕಥನ ಮುಂದುವರಿದು ಅಲ್ಲಿಗೇ ಮುಕ್ತಾಯಗೊಳ್ಳಲಿದೆ.

ಪ್ರತಿಯೊಬ್ಬರ ಜೀವನದಲ್ಲಿಯೂ ಅನೇಕ ಅನುಭವಗಳಿರುತ್ತವೆ. ಕೆಲವು ಅನುಭವಗಳನ್ನು ಹೇಳಿಕೊಳ್ಳಬಹುದು. ಇನ್ನು ಕೆಲವನ್ನು ಹೇಳಿಕೊಳ್ಳಲು ಅಸಾಧ್ಯವಾಗುವಂತಹ ರಹಸ್ಯಗಳಿರಬಹುದು. ಇನ್ನು ಕೆಲವು ಕಹಿ ಅನುಭವಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುವಾಗಲೇ ಬಿಕ್ಕಿ ಬಿಕ್ಕಿ ಅಳುವಂತಹ ಸನ್ನಿವೇಶ ಒದಗಿ ಮಾತು ಮುಂದುವರಿಸಲು ಅಸಾಧ್ಯವಾಗಬಹುದು. ಕೆಲವೊಂದು ವೈಯಕ್ತಿಕ, ಇನ್ನು ಕೆಲವೊಂದು ಕೌಟುಂಬಿಕ, ಇನ್ನು ಹಲವೊಂದು ಸಾಮಾಜಿಕ ಅನುಭವಗಳನ್ನು ಹೇಳಿಕೊಳ್ಳಲು ಕಷ್ಟವಾಗಬಹುದು. ಕೆಲವರು ತಮ್ಮ ಪರಮ ಮಿತ್ರರ ಬಳಿ, ಇನ್ನು ಕೆಲವು ಸಂದರ್ಭ ಪತಿ-ಪತ್ನಿಯರು ಪರಸ್ಪರ ಹಂಚಿಕೊಳ್ಳುವಿಕೆ, ಮತ್ತೆ ಕೆಲವು ವೇಳೆ, ತಂದೆ, ತಾಯಿ ಮಕ್ಕಳು; ಸಹೋದರರು, ಇನ್ನು ಕೆಲವು ವೇಳೆ ತಮ್ಮ ಸನಿಹದ ವಿಶ್ವಾಸಿಗಳೊಂದಿಗೆ, ಮತ್ತೆ ಹಲವು ಪ್ರೇಮಿಗಳು ತಮ್ಮ ನೂರೆಂಟು ಅನುಭವ ಗಳನ್ನು ಹಂಚಿಕೊಳ್ಳುತ್ತಾರೆ. ಅದೇನಾದರೂ ತೀವ್ರ ಕುತೂಹಲ ಭರಿತವಾಗಿದ್ದರೆ ಅಥವಾ ರಾಜಕೀಯ ಪ್ರಮುಖರ, ಹಾಲಿವುಡ್, ಬಾಲಿವುಡ್‌ಗಳ ವಿಚಾರ ಗಳಾಗಿದ್ದರೆ, ಬಾಯಿಂದ ಬಾಯಿಗೆ ಹರಡಿ ಸಾಮಾಜಿಕ ಜಾಲ ತಾಣದಲ್ಲೂ ನುಸುಳಿ ಬಿಡುತ್ತದೆ. ದೃಶ್ಯ ಮಾಧ್ಯಮಗಳಲ್ಲೂ ಬಿತ್ತರಗೊಳ್ಳುತ್ತದೆ, ಜೊತೆಗೆ, ತಕ್ಷಣ ಪ್ರತಿಕ್ರಿಯೆಗಳು ಪ್ರಾರಂಭಗೊಳ್ಳುತ್ತವೆೆ.

ಈಗಂತೂ ಮರದ ಮರೆಯಲ್ಲಿ ಏನಾದರೂ ಮಾಡುತ್ತಿದ್ದರೂ, ಮಾತನಾಡುತ್ತ್ತಿದ್ದರೂ ರಹಸ್ಯ ಕ್ಯಾಮರಾಗಳು, ಸಿ.ಸಿ.ಟಿ.ವಿಗಳ ಕಣ್ಣಿಗೆ ಬಿದ್ದು ಒಂದೇ ಕ್ಷಣದಲ್ಲಿ ವೈರಲ್ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಒಳ್ಳೆಯ ವಿಚಾರಗಳಾದರೆ ಪರವಾಗಿಲ್ಲ್ಲ; ಆದರೆ, ಅಂತಹುಗಳಲ್ಲಿ ಸಾಮಾನ್ಯ ಜನರಿಗೂ ಆಸಕ್ತಿ ಕಡಿಮೆ. ಈಗಿನ ಆಸಕ್ತಿ ವ್ಯಕ್ತಿಗಳ ವೈಯಕ್ತಿಕ ಬದುಕಿನ ಕುರಿತಾಗಿಯೇ ಜಾಸ್ತಿ. ಓರ್ವ ಬಡ ವ್ಯಕ್ತಿ ದುಡಿದು ದಾರಿಯಲ್ಲಿ ಬಿದ್ದಿದ್ದರೂ ಅದು ಕಣ್ಣಿಗೆ ಕಾಣುವುದಿಲ್ಲ. ಆದರೆ, ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಎಂದು ಕರೆಸಿಕೊಳ್ಳುವವರು ಎಡವಿದಾಗ ಅದು ದೊಡ್ಡ ಸುದ್ದಿಯೇ ಆಗಿಬಿಡುತ್ತದೆ. ಮಾಧ್ಯಮಗಳಲ್ಲಿ, ಜಾಲ ತಾಣಗಳಲ್ಲಿ ಹರಿದಾಡಲು ಪ್ರಾರಂಭವಾಗುತ್ತದೆ. ಆದರೆÀ, ಇದಾಗಿ ಕೆಲ ದಿನ ಕಳೆದು ಮತ್ತೊಂದು ವಿದ್ಯಮಾನ ಪ್ರಬಲವಾದಾಗ ಈ ಹಿಂದಿನ ವ್ಯಕ್ತಿಗತ ಪರ ವಿರೋಧ ಚರ್ಚೆ ಮರೆಯಾಗಿ ಕಾಲಗರ್ಭದಲ್ಲಿ ಅಡಗಿ ಹೋಗುತ್ತದೆ. ಹೊಸ ವಿದ್ಯಮಾನ ಓಡಾಡುತ್ತದೆ. ಕೆಲವು ಕಾಲ ಸುದ್ದಿ ಮಾಡಿ ಅದೂ ಮರೆಯಾಗಿ ಹೊಸ ಹೊಸತು ಆವರಿಸಿಕೊಳ್ಳುತ್ತಿರುತ್ತದೆ. ಕ್ಷಣ ಕ್ಷಣಕ್ಕೂ ಬದಲಾವಣೆಯದೇ ಜೀವನ. ಈಗ ಸುಖದ ಲೋಲು ಪತೆಯಲ್ಲಿದ್ದಾತ ಮತ್ತೊಂದೇ ಕ್ಷಣದಲ್ಲಿ ಹೃದಯಾಘಾತದಿಂದ ಅಸು ನೀಗಬಹುದು. ಗಂಜಿ ಕಾಸಿಗೂ ಗತಿಯಿಲ್ಲದ ವ್ಯಕ್ತಿ ದಿಢೀರ್ ಶ್ರೀಮಂತನಾಗಬಹುದು. ಆರೋಗ್ಯವಂತನಾಗಿದ್ದವನು ದಾರಿಯಲ್ಲಿ ಕುಸಿದು ಬೀಳಬಹುದು. ಅನಾರೋಗ್ಯದಲ್ಲಿ ತೊಳಲುತ್ತಿದ್ದವನು ಯಾವದೋ ಚಿಕಿತ್ಸೆಯಿಂದ ಸಂಪೂರ್ಣ ಚೇತರಿಸಿಕೊಳ್ಳಬಹುದು. ಸಂಜೆ ಬರುತ್ತೇನೆ ಎಂದು ಬೈಕ್ ಅಥವಾ ಕಾರಿನಲ್ಲಿ ತೆರಳಿದವನು ಅವಘಡದಲ್ಲಿ ದಾರಿ ಮಧ್ಯೆಯೇ ಪ್ರ‍್ರಾಣ ಕಳೆದುಕೊಂಡು ಅಸು ನೀಗಬಹುದು. ತೀವ್ರ ಅವಘಡ ವಾದರೂ ಓರ್ವ ಅದೃಷ್ಟವಶಾತ್ ಬದುಕಿ ಬರಬಹುದು. ಕುರ್ಚಿಯಲ್ಲಿ ಕುಳಿತವನು ಮರು ಘಳಿಗೆ ಉಸಿರಾಟ ಸ್ಥಗಿತದಿಂದ ಅಲ್ಲಿಯೇ ಕಾಲಗತನಾಗಬಹುದು. ಅತಿ ಕಡು ಬಡವ ಮಂತ್ರಿಯಾಗಬಹುದು. ಅತಿ ಶ್ರೀಮಂತ ಗತಿ ಹೀನನಾಗಬಹುದು. ಅನೇಕ ಪತಿ- ಪತ್ನಿ ಸಾಮರಸ್ಯದಿಂದ ಬಾಳಬಹುದು. ಇನ್ನೂ ಅನೇಕರು ಮದುವೆಯಾದ ದಿನವೇ ವಿಚ್ಛೇದನ ಪಡೆಯಬಹುದು. ಸಹೋದರ- ಸಹೋದರಿಯರು ಆತ್ಮೀಯತೆಯಿಂದ ಬಾಳಬಹುದು. ಕೆಲವೊಮ್ಮೆ ಸಣ್ಣ ಆಸ್ತಿ ಅಥವಾ ಕ್ಷÄಲ್ಲಕ ವಿಚಾರಕ್ಕೆ ಬಡಿದಾಡಿಕೊಳ್ಳಬಹುದು ಅಥವಾ ನ್ಯಾಯಾಲಯದಲ್ಲಿ ವರ್ಷಗಟ್ಟಲೆ ಕಾದಾಡಿ ಕೊನೆಗೆ ಏನೂ ಅನುಭವಿಸದೆ ಕಣ್ಮುಚ್ಚಬಹುದು. ಕುಟುಂಬ -ಕುಟುಂಬಗಳ ನಡುವೆ ಆಸ್ತಿ ವೈಷಮ್ಯದ ದಳ್ಳುರಿ ವಿನಾಶಾತ್ಮಕವಾಗಬಲ್ಲುದು. ಅಲ್ಲಿ ಸಣ್ಣ ಪ್ರೀತಿಯೆಂಬ ಕೊಂಡಿಯಿದ್ದಿದ್ದರೆ ಆ ಕುಟುಂಬಗಳು ಸುಖೀ ಜೀವನ ನಡೆಸಬಹುದಿತ್ತು. ಅವರ ಸಂತತಿಯೂ ಸುಖವಾಗಿರಬಹುದಿತ್ತು. ಆದರೆ, ಸಂತತಿಯೇ ಅಳಿಸಿಹೋಗುವಷ್ಟು ದ್ವೇ಼ಷದ ಮಾಯೆ ಆವರಿಸಿ ಅವರನ್ನು ಕ್ರೂರತೆಯ ಛಾಯೆಯೊಂದಿಗೆ ಅಳಿಸಿಹೋಗುವಂತೆ ಮಾಡುತ್ತದೆ. ಇದೆಲ್ಲವನ್ನೂ ದುರ್ವಿಧಿ ಎನ್ನೋಣವೇ, ಹಣೆ ಬರಹ ಎಂದು ಕರೆಯೋಣವೇ? ಪ್ರಾರಬ್ಧ ಎಂದು ಭಾವಿಸೋಣವೇ? ಅವರವರು ಮಾಡಿದ ಪೂರ್ವಕೃತ ಕರ್ಮಗಳ ಫಲ ಎಂದು ಕಲ್ಪಿಸಿಕೊಳ್ಳೋಣವೇ?

ದೈವ ಭಕ್ತನೊಬ್ಬ ಸಮಸ್ಯೆಗಳ ಸುಳಿಯಲ್ಲಿಯೇ ಸಿಲುಕುತ್ತ ಅಂತ್ಯ ಕಾಣಬಹುದು. ನಾಸ್ತಿಕನೊಬ್ಬ ಕೊನೆವÀರೆಗೂ ಸುಖ ಅನುಭವಿಸಿ ಮರೆಯಾಗಬಹುದು. ಸ್ವಾರ್ಥ ಸಾಧಕನೊಬ್ಬ ವೈಭವದ ಜೀವನ ನಡೆಸಬಹುದು, ನಿಸ್ವಾರ್ಥಿಯೊಬ್ಬ ಭಾರದ ಬದುಕು ಸಾಗಿಸಬಹುದು, ಗುಂಪಿನಲ್ಲಿ ಒಟ್ಟು ಸೇರುವಾಗ ಮೇಲ್ನೋಟಕ್ಕೆ ಪತಿ, ಪತ್ನಿ ಅವರ ಕುಟುಂಬಸ್ಥರು ಹಾಗೂ ನೋಡುಗರ ಮುಂದೆ ಆದರ್ಶ ವ್ಯಕ್ತ್ತಿಗಳಾಗಿ ಬಿಂಬಿಸಿಕೊಳ್ಳಬಹುದು, ಮನೆಗೆ ತೆರಳಿದೊಡನೆ ಅವಾಚ್ಯ ನಿಂದನೆ ಗಳೊಂದಿಗೆ, ಬೈಗುಳದೊಂದಿಗೆ ಕಾಲ ಕಳೆಯಬಹುದು. ಹೀಗಿರುವಾಗ ಯಾವುದನ್ನು ಸತ್ಯ ಎಂದು ನಂಬಬಹುದು? ಯಾವುದು ಮಿಥ್ಯ ಎನ್ನಬಹುದು? ಆದರೆ, ಒಂದು ಮಾತ್ರ ಸತ್ಯ :ಆಂತರ್ಯದಲ್ಲಿ ಸದುದ್ದೇಶ, ಪರರ ಕುರಿತು ವೈಷಮ್ಯರಹಿತ ಭಾವನೆ, ‘ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಇರಲಿ’ ಎನ್ನುವ ನಿರ್ಲಿಪ್ತತೆಯೊಂದಿಗೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ನುಡಿದಂತೆ, “ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನ” ಎಂದರೆ, ‘ಕರ್ಮವನ್ನು ಮಾಡುತ್ತ ಹೋಗು ಫಲಾಫಲಗಳನ್ನು ಭಗವದರ್ಪಣ ಗೊಳಿಸು’ ಎಂದು ಚಿತೆಯ ನಡುವೆ ನಿಶ್ಚಿಂತೆಯ ತತ್ತ÷್ವವನ್ನು ಅಳವಡಿಸಿ ಕೊಂಡು ಮುಂದುವರಿಯುವುದೇ ಜೀವನ. ‘ಆತ್ಮನ್ಯೇವಾತ್ಮನಾ ತುಷ್ಟಾ ತಸ್ಯ ಪ್ರಜ್ಞಾ ಪ್ರತಿಷ್ಠಿತ’ ಎನ್ನುವ ಗೀತಾಚಾರ್ಯನ ವಾಕ್ಯದಂತೆ ನಮ್ಮೊಳಗಿನ ಆತ್ಮನ ಮರ್ಮವರಿತು ಆತ್ಮ ತೃಪ್ತಿಯೊಂದಿಗೆ ಮುಂದುವರಿಯಬೇಕು. ಇದುವೇ ಜೀವನ, ಇದುವೇ ದಾಸ ವರೇಣ್ಯರ ನುಡಿ “ ಈಸಬೇಕು, ಇದ್ದು ಜೈಸಬೇಕು” ಎನ್ನುವುದರ ಒಳಾರ್ಥ.

ಇಂದು ಧರ್ಮಗಳೆನ್ನುವುದು ಮಾನವನ ಜೀವನವನ್ನು ಸುಗಮ ಗೊಳಿಸುವ ತಾತ್ವಿಕ ಅರ್ಥದ ಪಾಲನೆಗಳಾಗಿರದೆ, ಮತ್ತೊಂದು ಧರ್ಮದ ಜನರನ್ನು ದ್ವೇಷಿಸಿ ಪ್ರಹರಿಸುವ, ನಾಶಗೊಳಿಸುವ ಅಸ್ತçಗಳಾಗಿ ಬಳಸಲ್ಪಡುತ್ತಿವೆ. (ಮುಂದುವರಿಯುವುದು)

- ಜಿ. ರಾಜೇಂದ್ರ, ಮಡಿಕೇರಿ.