ನಾಪೋಕ್ಲು, ಮೇ. ೨೧: ಈಜಲು ತೆರಳಿದ್ದ ಯುವಕ ಹೊಳೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾರೆಕಾಡು ಬಳಿಯ ಹೊಳೆಯಲ್ಲಿ ನಡೆದಿದೆ.

ಸಮೀಪದ ಕೊಟ್ಟಮುಡಿ ಗ್ರಾಮದ ನಿವಾಸಿ ಹ್ಯಾರೀಸ್ ಎಂಬವರ ಪುತ್ರ ಅಫ್ಸಲ್ (೧೮) ಮೃತಪಟ್ಟ ದುರ್ಧೈವಿ. ಈತ ತನ್ನ ಸ್ನೇಹಿತರೊಂದಿಗೆ ಹೊಳೆಯಲ್ಲಿ ಸ್ನಾನಕ್ಕೆಂದು ತೆರಳಿದ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.