ಮಡಿಕೇರಿ, ಮೇ ೨೦: ಕುಶಾಲನಗರದ ಟೈಂ ಬ್ರೇರ‍್ಸ್ ಡ್ಯಾನ್ಸ್ ಸ್ಟುಡಿಯೋ ವತಿಯಿಂದ ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯಕಲಾ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳು ಮೂರು ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗೆದ್ದಿದ್ದಾರೆ.
ಸಬ್ ಜೂನಿಯರ್ ವಿಭಾಗದಲ್ಲಿ ಮೊನಾಲಿ, ದಿಯಾ ರೈ, ಸಾನ್ವಿಕಾ, ಧೃತಿ ಗೌಡ, ದಿಶಾ, ಆದ್ಯ, ಅಲಿಶಾ, ಗ್ರಂಥ, ಹಾರ್ದಿಕ್, ಪ್ರೀತಮ್, ಪ್ರೇಕ್ಷಿತ್, ಅಭಿರಾಮ್ ಆರ್ಯ, ಚಾರ್ವಿ ರೈ ಹಾಗೂ ಸಿಂಚನಾ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದರು.
ಜೂನಿಯರ್ ವಿಭಾಗದಲ್ಲಿ ಮನೋಜ್ಞ ಮಾನ್ವಿ, ಕಿಶಿ ಕಾವೇರಮ್ಮ, ಎಂ.ಕೆ.ಪ್ರೇಕ್ಷ, ಆರಾಧ್ಯ, ಇಂಚರ, ಸಿಂಚನಾ, ಬಿ.ಆರ್.ಪ್ರೇಕ್ಷ, ಶ್ರೇಯಾ, ಮನಿಷಾ, ಸಮೀಕ್ಷ, ಅರ್ಸಲಾನ್, ಅಭಿನವ್ ಕ್ರಿಶ್, ಕುನಾಲ್‌ರಾಜ್, ವೆನಿಶ, ಲಕ್ಷö್ಯ, ತೇಜಸ್, ಜಿಯಾನ್, ಉನ್ನತಿ, ಡೀನಾ, ಚಹನಾ, ಗಗನ್, ಜನನಿ, ಚರ್ವಿತ, ಬಿಂಬಿತ್, ಚಿನ್ಮಯಿ ಪ್ರಥಮ ಬಹುಮಾನ ಗೆದ್ದುಕೊಂಡರು.
ಸೀನಿಯರ್ ವಿಭಾಗದಲ್ಲಿ ಯಾನಶೆಟ್ಟಿ, ಪ್ರಾಚಿ ಮಾದಪ್ಪ, ಆರ್ಚ ಕೃಷ್ಣ, ಗ್ರೀಷ್ಮ, ಪ್ರಜ್ಞ, ಮಾನ್ಯ, ಆರ್ಯ, ಐಶ್ವರ್ಯ, ಜಾನ್ವಿ ಬೋಜಮ್ಮ, ಅದಿಥಿ, ತಶ್ಮಿತ ಪೂಜಾರಿ, ಆರ್ಯನ್, ಕೀರ್ತನ್, ತೇಜಸ್ಸ್, ಪ್ರವೀಣ, ಶಿವಕುಮಾರ್, ಸೊನಾಲ್ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರು. ನಾಟ್ಯಕಲಾ ನೃತ್ಯ ಸಂಸ್ಥೆಯ ನೃತ್ಯ ಸಂಯೋಜಕ ಅಭಿಷೇಕ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಜಿ.ಎಲ್. ನಾಗರಾಜ್, ಕುಶಾಲನಗರ ಬಿಜೆಪಿ ನಗರಾಧ್ಯಕ್ಷ ವಿ.ಎನ್. ಉಮಾಶಂಕರ್, ಕಾಂಗ್ರೆಸ್ ಪ್ರಮುಖ ವಿ.ಪಿ.ಶಶಿಧರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾ ರೈ, ಕುಶಾಲನಗರ ಮೂಡ ಅಧ್ಯಕ್ಷ ಚರಣ್, ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಪ್ರಮುಖರಾದ ವಿನೋದ್ ಕರ್ಕೆರಾ ಮತ್ತಿತರ ಗಣ್ಯರು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.